ನಾಗ್ಪುರ: ಭಾರತ ತಂಡದ ಸೀಮಿತ ಓವರ್ಗಳ ಕ್ರಿಕೆಟ್ನ ಮುಂಚೂಣಿ ಸ್ಪಿನ್ ಬೌಲರ್ ಯಜುವೇಂದ್ರ ಚಹಲ್ ವೇಗವಾಗಿ 50 ವಿಕೆಟ್ ಪಡೆದ ಭಾರತೀಯ ಬೌಲರ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
ಬುಮ್ರಾ, ಅಶ್ವಿನ್ ದಾಖಲೆ ಬ್ರೇಕ್ ಮಾಡಿದ ಯಜುವೇಂದ್ರ ಚಹಾಲ್!
ಬಾಂಗ್ಲಾದೇಶದ ವಿರುದ್ಧ ನಡೆದ ಅಂತಿಮ ಪಂದ್ಯದಲ್ಲಿ ಎದುರಾಳಿ ನಾಯಕ ಮಹಮ್ಮದುಲ್ಲಾ ರಿಯಾದ್ ವಿಕೆಟ್ ಪಡೆಯುವ ಮೂಲಕ ವೇಗಿ ಜಸ್ಪ್ರೀತ್ ಬುಮ್ರಾ ಹಾಗೂ ರವಿಚಂದ್ರನ್ ಅಶ್ವಿನ್ರನ್ನು ಹಿಂದಿಕ್ಕಿ ವೇಗವಾಗಿ 50 ವಿಕೆಟ್ ಸಾಧನೆ ಮಾಡಿದರು.
ಬಾಂಗ್ಲಾದೇಶದ ವಿರುದ್ಧ ನಡೆದ ಅಂತಿಮ ಪಂದ್ಯದಲ್ಲಿ ಎದುರಾಳಿ ನಾಯಕ ಮಹಮ್ಮದುಲ್ಲಾ ರಿಯಾದ್ ವಿಕೆಟ್ ಪಡೆಯುವ ಮೂಲಕ ವೇಗಿ ಜಸ್ಪ್ರೀತ್ ಬುಮ್ರಾ ಹಾಗೂ ರವಿಚಂದ್ರನ್ ಅಶ್ವಿನ್ರನ್ನು ಹಿಂದಿಕ್ಕಿ ವೇಗವಾಗಿ 50 ವಿಕೆಟ್ ಸಾಧನೆ ಮಾಡಿದರು.
ಚಹಾಲ್ಗೂ ಮುನ್ನ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್(52), ವೇಗಿ ಜಸ್ಪ್ರೀತ್ ಬುಮ್ರಾ(51) ಟಿ20ಯಲ್ಲಿ 50 ವಿಕೆಟ್ ಪಡೆದಿದ್ದರು. ಆದರೆ ಅಶ್ವಿನ್ ಈ ಸಾಧನೆಗಾಗಿ 42 ಪಂದ್ಯಗಳನ್ನಾಡಿದ್ದಾರೆ. ಬುಮ್ರಾ 41 ಪಂದ್ಯಗಳನ್ನಾಡಿದ್ದರು. ಚಹಲ್ 34 ಪಂದ್ಯಗಳಲ್ಲಿ 50 ವಿಕೆಟ್ ಪಡೆಯುವ ಮೂಲಕ ವೇಗವಾಗಿ ಈ ಮೈಲಿಗಲ್ಲು ತಲುಪಿದ ಭಾರತೀಯ ಬೌಲರ್ ಎಂಬ ಶ್ರೇಯಕ್ಕೆ ಪಾತ್ರರಾದರು.
ಇದಲ್ಲದೇ ಅಂತಾರಾಷ್ಟ್ರೀಯ ಟಿ20ಯಲ್ಲಿ ವೇಗವಾಗಿ 50 ವಿಕೆಟ್ ಪಡೆದ ವಿಶ್ವದ 5ನೇ ಬೌಲರ್ ಎನಿಸಿಕೊಂಡಿದ್ದಾರೆ. ಈ ದಾಖಲೆ ಪಟ್ಟಿಯಲ್ಲಿ ಶ್ರೀಲಂಕಾದ ಅಜಂತಾ ಮೆಂಡಿಸ್ (26 ಪಂದ್ಯಗಳು), ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹಿರ್ (31), ಅಫ್ಘಾನಿಸ್ತಾನದ ರಶೀದ್ ಖಾನ್ (31), ಬಾಂಗ್ಲಾದ ಮುಷ್ತಫಿಝುರ್ ರಹಮಾನ್ (33 ಪಂದ್ಯಗಳು) ಚಹಾಲ್ಗಿಂತ ಮೇಲಿದ್ದಾರೆ.