ETV Bharat Karnataka

ಕರ್ನಾಟಕ

karnataka

ETV Bharat / sports

ಬ್ಯಾಟಿಂಗ್​ನಲ್ಲಷ್ಟೇ ಅಲ್ಲ ಫೀಲ್ಡಿಂಗ್​ನಲ್ಲೂ ಬೆಸ್ಟ್ಎಂದು ತೋರಿಸಿದ ಯುವರಾಜ್​ ಸಿಂಗ್​ ​! - ಯುವರಾಜ್​ ಸಿಂಗ್​ 5 ಸಿಕ್ಸ್

ಭಾರತದ ಸ್ಟಾರ್​ ಆಲ್​ರೌಂಡರ್​ ಯುವರಾಜ್​ ಸಿಂಗ್​ ಬ್ಯಾಟಿಂಗ್​ ನಲ್ಲಷ್ಟೇ ಅಲ್ಲ, ಫೀಲ್ಡಿಂಗ್​ನಲ್ಲೂ ತಾವೊಬ್ಬ ಬೆಸ್ಟ್ ಫೀಲ್ಡರ್ ಎಂದು ಅದ್ಭುತ ಕ್ಯಾಚ್​ ಹಿಡಿದು ತೋರಿಸಿಕೊಟ್ಟಿದ್ದಾರೆ.

Yuvraj Singh
author img

By

Published : Aug 5, 2019, 5:09 PM IST

ಒಂಟಾರಿಯೋ:ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿರುವ ಭಾರತದ ಸ್ಟಾರ್​ ಆಲ್​ರೌಂಡರ್​ ಯುವರಾಜ್​ ಸಿಂಗ್​ ಬ್ಯಾಟಿಂಗ್​ ಜೊತೆಗೆ ಫೀಲ್ಡಿಂಗ್​ನಲ್ಲೂ ಕಮಾಲ್​ ಮಾಡಿದ್ದಾರೆ.

ಕೆನಡಾದಲ್ಲಿ ನಡೆಯುತ್ತಿರುವ ಗ್ಲೋಬಲ್​ ಟಿ-20 ಲೀಗ್​ನಲ್ಲಿ ಬ್ಯಾಟಿಂಗ್​ನಲ್ಲಿ ಮಿಂಚುತ್ತಿದ್ದು, ಕಳೆದೆರಡು ಪಂದ್ಯಗಳಲ್ಲಿ ತಮ್ಮ ನೈಜ ಬ್ಯಾಟಿಂಗ್​ಗೆ ಮರಳಿದ್ದರು. ಶನಿವಾರ ನಡೆದ ಬ್ರಂಪ್ಟನ್ ವೋಲ್ಸ್​​​​​ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್-ಫೀಲ್ಡಿಂಗ್​ನಲ್ಲೂ ಭರ್ಜರಿ ಪ್ರದರ್ಶನ ತೋರಿದ್ದಾರೆ.

ಬ್ರಂಪ್ಟನ್ ತಂಡದ ಆರಂಭಿಕ ಆಟಗಾರ ಲೆಂಡ್ ಸಿಮೋನ್ಸ್​ ಅವರ ಅದ್ಭುತ ಕ್ಯಾಚ್ ಹಿಡಿದು ತಾವೂ ಇಂದಿಗೂ ಬೆಸ್ಟ್​ ಫೀಲ್ಡರ್​ ಎಂಬುದನ್ನು ಸಾಬೀತು ಪಡಿಸಿದ್ದಾರೆ.

ಇದೇ ಪಂದ್ಯದಲ್ಲಿ ಯುವರಾಜ್​ ಸಿಂಗ್​ ಎದುರಾಳಿ ನೀಡಿದ್ದ 223 ರನ್​ಗಳ ಗುರಿಯನ್ನು ಬೆನ್ನಟ್ಟುವ ವೇಳೆ ಕೇವಲ 22 ಎಸೆತಗಳಲ್ಲಿ 5 ಸಿಕ್ಸರ್​ ಹಾಗೂ 3 ಬೌಂಡರಿ ಸೇರಿದಂತೆ 51 ರನ್​ಗಳಿಸಿದ್ದರು. ಆದರೆ, 20 ಓವರ್​ಗಲಲ್ಲಿ 211 ರನ್​ಗಳಿಸಿದ ಯುವಿ ನೇತೃತ್ವದ ಟೊರೊಂಟೋ ನ್ಯಾಷನಲ್ಸ್​ 11 ರನ್​ಗಳಿಂದ ಸೋಲೊಪ್ಪಿಕೊಂಡಿತು.

ABOUT THE AUTHOR

...view details