ಕರ್ನಾಟಕ

karnataka

ETV Bharat / sports

13ನೇ ಆವೃತ್ತಿಯ ಐಪಿಎಲ್​ ಸಿಕ್ಸರ್​ ಕಿಂಗ್​ನನ್ನು ಕೊಂಡಾಡಿದ ಯುವರಾಜ್ ಸಿಂಗ್ - 13ನೇ ಆವೃತ್ತಿ

ಮಂಗಳವಾರ ನಡೆದ ಐಪಿಎಲ್ ಫೈನಲ್​ ಪಂದ್ಯದಲ್ಲಿ ರೋಹಿತ್ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ 5 ವಿಕೆಟ್​ಗಳ ಅಂತರದಿಂದ ಡೆಲ್ಲಿ ತಂಡವನ್ನು ಮಣಿಸಿ ಚಾಂಪಿಯನ್​ ಪಟ್ಟಕ್ಕೇರಿದೆ. ಟ್ವಿಟರ್​ ಮೂಲಕ ಮುಂಬೈ ಇಂಡಿಯನ್ಸ್​ಗೆ ಶುಭಕೋರಿರುವ ಯುವರಾಜ್​ ಸಿಂಗ್ ಯುವ ಪ್ರತಿಭೆ ಇಶಾನ್ ಕಿಶನ್​ರ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..

ಯುವರಾಜ್ ಸಿಂಗ್
ಯುವರಾಜ್ ಸಿಂಗ್

By

Published : Nov 11, 2020, 6:44 PM IST

ಮುಂಬೈ: 13ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಚಾಂಪಿಯನ್ ಪಟ್ಟಕ್ಕೇರಲು ಪ್ರಮುಖ ಪಾತ್ರವಹಿಸಿರುವ ಯುವ ಬ್ಯಾಟ್ಸ್​ಮನ್​ ಇಶಾನ್​ ಕಿಶನ್​ರನ್ನು ಭಾರತ ತಂಡದ ಮಾಜಿ ಆಟಗಾರ ಯುವರಾಜ್​ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ನಡೆದ ಐಪಿಎಲ್ ಫೈನಲ್​ ಪಂದ್ಯದಲ್ಲಿ ರೋಹಿತ್ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ 5 ವಿಕೆಟ್​ಗಳ ಅಂತರದಿಂದ ಡೆಲ್ಲಿ ತಂಡವನ್ನು ಮಣಿಸಿ ಚಾಂಪಿಯನ್​ ಪಟ್ಟಕ್ಕೇರಿದೆ. ಟ್ವಿಟರ್​ ಮೂಲಕ ಮುಂಬೈ ಇಂಡಿಯನ್ಸ್​ಗೆ ಶುಭಕೋರಿರುವ ಯುವರಾಜ್​ ಸಿಂಗ್ ಯುವ ಪ್ರತಿಭೆ ಇಶಾನ್ ಕಿಶನ್​ರ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇಶಾನ್ ಕಿಶನ್​

ಇಶಾನ್ ಕಿಶನ್​ ಈ ಆವೃತ್ತಿಯಲ್ಲಿ ಮುಂಬೈನ ಖಾಯಂ ಆಟಗಾರನಾಗಿರಲಿಲ್ಲ. ಮೊದಲಿಗೆ ಸೌರಭ್​ ತಿವಾರಿ ಗಾಯಗೊಂಡ ನಂತರ ತಂಡ ಸೇರಿದ್ದ ಕಿಶನ್ ತಮ್ಮ ಮೊದಲ ಪಂದ್ಯದಲ್ಲೇ 99 ರನ್​ ಸಿಡಿಸಿ ತಂಡದಲ್ಲಿ ಖಾಯಂ ಸ್ಥಾನಗಿಟ್ಟಿಸಿಕೊಂಡರು.

ಅಲ್ಲದೆ ಟೂರ್ನಿಯಲ್ಲಿ ಮುಂಬೈ ಯಶಸ್ಸಿಗೆ ಎಲೆಮರೆಕಾಯಿಯಂತೆ ಶ್ರಮಿಸಿದ 22 ವರ್ಷದ ಆಟಗಾರ 14 ಪಂದ್ಯಗಳಲ್ಲಿ 516 ರನ್​ ಸಿಡಿಸಿ 2020ರ ಐಪಿಎಲ್​ನ ಗರಿಷ್ಠ ಸ್ಕೋರರ್​ಗಳ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದುಕೊಂಡಿದ್ದಾರೆ. ವಿಶೇಷವೆಂದರೆ, ಎಬಿಡಿ, ಕ್ರಿಸ್ ಗೇಲ್, ಪೊಲಾರ್ಡ್​,ಪಾಂಡ್ಯರಂತಹ ಸ್ಫೋಟಕ ಬ್ಯಾಟ್ಸ್​ಮನ್​ಗಳನ್ನೇ ಹಿಂದಿಕ್ಕಿ ಟೂರ್ನಿಯ ಗರಿಷ್ಠ ಸಿಕ್ಸರ್​ ಸಿಡಿಸಿದ ಬ್ಯಾಟ್ಸ್​ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಕೊನೆಯ ಪಂದ್ಯದಲ್ಲೂ ಕೇವಲ 20 ಎಸೆತಗಳಲ್ಲಿ 33 ರನ್​ಗಳಿಸಿದರು.

" ಐಪಿಎಲ್ ಉತ್ತಮ ತಂಡವಾದ ಮುಂಬೈ ಇಂಡಿಯನ್ಸ್​ಗೆ ಹಾಗೂ ಫೈನಲ್​ ಪಂದ್ಯದಲ್ಲಿ ನಾಯಕನ ಆಟವಾಡಿದ ರೋಹಿತ್ ಶರ್ಮಾರಿಗೆ ಅಭಿನಂಧನೆಗಳು.

ಡೆಲ್ಲಿ ಕ್ಯಾಪಿಟಲ್ಸ್​ ಕೂಡ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದೆ. ಇಶಾನ್​ ಕಿಶನ್ ಒಬ್ಬ ವಿಶೇಷ ಆಟಗಾರನಾಗಿ ರೂಪುಗೊಂಡಿದ್ದಾರೆ " ಎಂದು ಟ್ವಿಟರ್​ ನಲ್ಲಿ ಯುವಿ ಬರೆದುಕೊಂಡಿದ್ದಾರೆ.

ABOUT THE AUTHOR

...view details