ಮೌಂಟ್ ಮೌಂಗನುಯ್ :ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 13ನೇ ಆವೃತ್ತಿಯಲ್ಲಿ ಆಡುವುದಕ್ಕೆ ಹೆಮ್ಮೆಯನ್ನಿಸುತ್ತದೆ ಎಂದು ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಬುಧವಾರ ಹೇಳಿದ್ದಾರೆ.
ಕೊರೊನಾ ವೈರಸ್ ಹರಡುವುದನ್ನು ಗಣನೀಯವಾಗಿ ತಡೆಯುವಲ್ಲಿ ನ್ಯೂಜಿಲೆಂಡ್ ಯಶಸ್ವಿಯಾಗಿದ್ದರಿಂದ ವಿಲಿಯಮ್ಸನ್ ಮೌಂಟ್ ಮೌಂಗನುಯಿ ಬೇ ಓವಲ್‌ನಲ್ಲಿ ಮತ್ತೆ ತರಬೇತಿ ಪ್ರಾರಂಭಿಸಿದ್ದಾರೆ. ಇವರಷ್ಟೇ ಅಲ್ಲ, ಬಹುಪಾಲು ಪುರುಷ ಮತ್ತು ಮಹಿಳಾ ಕ್ರಿಕೆಟಿಗರು ಈಗಾಗಲೇ ತರಬೇತಿ ಆರಂಭಿಸಿದ್ದಾರೆ.
ಐಪಿಎಲ್ನಲ್ಲಿ ಆಡುವುದು ಯಾವಾಗಲೂ ಅದ್ಭುತವೆನಿಸುತ್ತದೆ. ಖಂಡಿತವಾಗಿಯೂ ಅದೊಂದು ಮಹತ್ವದ ಟೂರ್ನಿ. ಅದರಲ್ಲಿ ಆಡುವುದಕ್ಕೆ ಹಾಗೂ ಅದರ ಒಂದು ಭಾಗವಾಗುವುದು ಉತ್ತಮವೆನಿಸುತ್ತದೆ ಎಂದಿದ್ದಾರೆ. ಎರಡು ದಿನಗಳ ಹಿಂದೆ ಟಿ20 ವಿಶ್ವಕಪ್ ಮುಂದೂಡಲಾಗಿದೆ.