ಕರ್ನಾಟಕ

karnataka

ETV Bharat / sports

2ನೇ ಏಕದಿನ ಪಂದ್ಯದಿಂದ ರಿಷಬ್​​ ಔಟ್​​... ಬದಲಿ ವಿಕೆಟ್​ ಕೀಪರ್​ಗೆ ಬುಲಾವ್​​ ನೀಡದ ಬಿಸಿಸಿಐ! - ರಿಷಭ್​​ ಪಂತ್​ ಗಾಯ

ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದ ವೇಳೆ ಗಾಯಗೊಂಡಿರುವ ರಿಷಬ್​​ ಪಂತ್​​ ಎರಡನೇ ಏಕದಿನ ಪಂದ್ಯದಿಂದ ಹೊರಬಿದ್ದಿದ್ದು, ಯಾವುದೇ ಬದಲಿ ಆಟಗಾರನಿಗೆ ಬಿಸಿಸಿಐ ಬುಲಾವ್​ ನೀಡಿಲ್ಲ.

Wicket-keeper Rishabh Pant
ರಿಷಭ್​ ಪಂತ್​

By

Published : Jan 15, 2020, 8:29 PM IST

ಮುಂಬೈ:ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಬ್ಯಾಟಿಂಗ್​ ಮಾಡುತ್ತಿದ್ದ ವೇಳೆ ತಲೆಗೆ ಚೆಂಡು ಬಡೆದು ಗಾಯಗೊಂಡಿರುವ ರಿಷಬ್​​ ಪಂತ್​ 2ನೇ ಏಕದಿನ ಪಂದ್ಯದಿಂದ ಹೊರಬಿದ್ದಿದ್ದಾರೆ.

ಈಗಾಗಲೇ 24 ಗಂಟೆಗಳ ಕಾಲ ಅವರ ಮೇಲೆ ತೀವ್ರ ನಿಗಾ ಇಡಲಾಗಿದ್ದು, ಯಾವ ರೀತಿಯಾಗಿ ಸ್ಪಂದಿಸುತ್ತಾರೆ ಎಂಬುದರ ಮೇಲೆ ಕೊನೆ ಏಕದಿನ ಪಂದ್ಯಕ್ಕೆ ಸೇರಿಸಿಕೊಳ್ಳಬೇಕೋ ಬೇಡ್ವೋ ಎಂಬುದರ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಕ್ರಿಕೆಟ್ ಮಂಡಳಿ ಮಾಹಿತಿ ನೀಡಿದೆ.

ರಾಜ್​ಕೋಟ್​​ನಲ್ಲಿ ನಡೆಯಲಿರುವ ಎರಡನೇ ಕ್ರಿಕೆಟ್​​ ಪಂದ್ಯದಲ್ಲಿ ಭಾಗಿಯಾಗಲು ಟೀಂ ಇಂಡಿಯಾ ಈಗಾಗಲೇ ಆಗಮಿಸಿದ್ದು, ನಾಡಿದ್ದು ಪಂದ್ಯ ನಡೆಯಲಿದೆ. ಇನ್ನು ಬಿಸಿಸಿಐ ಯಾವುದೇ ಬದಲಿ ಆಟಗಾರನಿಗೆ ಮಣೆ ನೀಡಿಲ್ಲವಾದ್ದರಿಂದ ಕೆಎಲ್​ ರಾಹುಲ್​ ವಿಕೆಟ್​ ಕೀಪಿಂಗ್​ ಜವಾಬ್ದಾರಿ ನಿರ್ವಹಿಸುವ ಸಾಧ್ಯತೆ ಇದೆ. ಪಂತ್​ ಬದಲಿಗೆ ಕನ್ನಡಿಗ ಮನೀಷ್​ ಪಾಂಡೆ ಅಥವಾ ಕೇದಾರ್​ ಜಾಧವ್​ ಆಡುವ ಸಾಧ್ಯತೆಯಿದೆ.

ABOUT THE AUTHOR

...view details