ವಿಶಾಖಪಟ್ಟಣ:ಟೀಂ ಇಂಡಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯ ವೈಜಾಗ್ನಲ್ಲಿ ನಡೆಯುತ್ತಿದ್ದು, ಟಾಸ್ ಸೋತಿರುವ ಕೊಹ್ಲಿ ಪಡೆ ಬ್ಯಾಟಿಂಗ್ ಮಾಡಲು ಕಣಕ್ಕಿಳಿದಿದೆ.
2ನೇ ಏಕದಿನ ಪಂದ್ಯ: ಕಪ್ಪು ಪಟ್ಟಿ ಧರಿಸಿ ಮೈದಾನಕ್ಕಿಳಿದ ವೆಸ್ಟ್ ಇಂಡೀಸ್ ಪ್ಲೇಯರ್ಸ್... ಕಾರಣ? - ವಿಶಾಖಪಟ್ಟಣ
ಟೀಂ ಇಂಡಿಯಾ ವಿರುದ್ಧ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಪ್ಲೇಯರ್ಸ್ ಕಪ್ಪುಪಟ್ಟಿ ತೊಟ್ಟು ಮೈದಾನಕ್ಕಿಳಿದಿದ್ದಾರೆ.

ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಪ್ಲೇಯರ್ಸ್ ಕಪ್ಪು ಪಟ್ಟಿ ತೊಟ್ಟು ಕಣಕ್ಕಿಳಿದಿದ್ದಾರೆ. ವೆಸ್ಟ್ ಇಂಡೀಸ್ ತಂಡದ ಮಾಜಿ ಪ್ಲೇಯರ್ ಬಸಿಲ್ ಬುಚರ್ ಅವರು ಸೋಮವಾರ ಸಾವನ್ನಪ್ಪಿದ್ದು ಅವರಿಗೆ ಗೌರವ ಸಲ್ಲಿಕೆ ಮಾಡುವ ಉದ್ದೇಶದಿಂದ ಕಪ್ಪು ಪಟ್ಟಿ ತೊಟ್ಟು ಮೈದಾನಕ್ಕಿಳಿದಿದ್ದಾರೆ.
1958ರಲ್ಲಿ ಭಾರತ ವಿರುದ್ಧ ವೆಸ್ಟ್ ಇಂಡೀಸ್ ತಂಡಕ್ಕೆ ಪದಾರ್ಪಣೆ ಮಾಡಿದ ಬಸಿಲ್, 1969ರವರೆಗೆ ಒಟ್ಟು 44 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 3104 ರನ್‌ಗಳನ್ನು ಗಳಿಸಿರುವ ಅವರು 7 ಶತಕ ಮತ್ತು 16 ಅರ್ಧಶತಕಗಳನ್ನು ಬಾರಿಸಿದ್ದಾರೆ. ಭಾರತ ವಿರುದ್ಧ ತಮ್ಮ ಚೊಚ್ಚಲ ಸರಣಿಯಲ್ಲೇ 2 ಶತಕ ಮತ್ತು 3 ಅರ್ಧಶತಕ ಸೇರಿದಂತೆ 486 ರನ್ಗಳಿಸಿದ್ದಾರೆ.