ಕರ್ನಾಟಕ

karnataka

ETV Bharat / sports

ಇನ್ನಿಂಗ್ಸ್​ ಮುಕ್ತಾಯಕ್ಕೆ ಅವಕಾಶ ಕೊಡದ ವರುಣ... 46.1 ಓವರ್​ಗಳಲ್ಲಿ 211 ರನ್​ಗಳಿಸಿದ ಕಿವೀಸ್​

ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡಿದ್ದ ನ್ಯೂಜಿಲ್ಯಾಂಡ್ 46.1 ಓವರ್​ಗಳಲ್ಲಿ 211 ರನ್​ಗಳಿಸಿದೆ. ಇನ್ನಿಂಗ್ಸ್​ ಮುಕ್ತಾಯಕ್ಕೆ ಇನ್ನು 23 ಎಸೆತಗಳಿರುವ ವೇಳೆ ಮಳೆ ಬಂದ ಕಾರಣ ಆಟ ಸ್ಥಗಿತಗೊಂಡಿದೆ.

India vs New Zealand

By

Published : Jul 9, 2019, 6:57 PM IST

ಮ್ಯಾಂಚೆಸ್ಟರ್​: ಸೆಮಿಫೈನಲ್​ನ ಮೊದಲ ಇನ್ನಿಂಗ್ಸ್​ನ ಮುಕ್ತಾಯಕ್ಕೆ ಇನ್ನು 23 ಎಸೆತಗಳಿರುವಾಗ ಮಳೆರಾಯ ಆಗಮಿಸಿದ್ದು, ಈ ವೇಳೆಗೆ ಕಿವೀಸ್​ 5 ವಿಕೆಟ್​ ಕಳೆದುಕೊಂಡು 211 ರನ್​ಗಳಿಸಿದೆ.

ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡಿದ್ದ ನ್ಯೂಜಿಲ್ಯಾಂಡ್​ ನಿರೀಕ್ಷಿಸದ ಆರಂಭ ಪಡೆದಯಲಿಲ್ಲ. ಆರಂಭದ ಓವರ್​ಗಳಲ್ಲಿ ರನ್​ಗಳಿಸಲು ಪರದಾಡಿದ ಗಪ್ಟಿಲ್​ 14 ಎಸೆತಗಳನ್ನೆದುರಿಸಿ 1 ರನ್​ಗಳಿಸಿ ಬುಮ್ರಾ ಬೌಲಿಂಗ್​ನಲ್ಲಿ ಕೊಹ್ಲಿಗೆ ಕ್ಯಾಚ್​ ನೀಡಿ ಔಟಾದರು.

ಈ ವೇಳೆ ಒಂದಾದ ನಿಕೋಲ್ಸ್​ ಜೊತೆಗೂಡಿದ ನಾಯಕ ವಿಲಿಯಮ್ಸನ್​ 68 ರನ್​ಗಳ ಜೊತೆಯಾಟ ನೀಡಿದರು. 28 ರನ್​ಗಳಿಸಿದ್ದ ನಿಕೋಲ್ಸ್​ರನ್ನು ರವೀಂದ್ರ ಜಡೇಜಾ ಬೌಲ್ಡ್​ ಮಾಡಿದರು. ಈ ಸಂದರ್ಭದಲ್ಲಿ ಕ್ರೀಸ್​ಗೆ ಬಂದ ಹಿರಿಯ ಬ್ಯಾಟ್ಸ್​ಮನ್​ ರಾಸ್​ ಟೇಲರ್​ ನಾಯ ವಿಲಿಯಮ್ಸನ್​ ಜೊತೆ ಸೇರಿ 3ನೇ ವಿಕೆಟ್​ಗೆ 65 ರನ್​ ಸೇರಿಸಿದರು. 95 ಎಸೆತಗಳಲ್ಲಿ ಅದ್ಭುತ ಇನ್ನಿಂಗ್ಸ್​ ಕಟ್ಟಿದ ವಿಲಿಯಮ್ಸನ್​ 6 ಬೌಂಡರಿಗಳ ಸಹಾಯದಿಂದ 67 ರನ್​ಗಳಿಸಿ ಚಹಾಲ್​ಗೆ ವಿಕೆಟ್​ ಒಪ್ಪಿಸಿದರು.

ವಿಲಿಯಮ್ಸನ್​ ಬೆನ್ನಲ್ಲೇ ನೀಶಾಮ್​ 12 ರನ್​ಗಳಸಿ ಪಾಂಡ್ಯಗೆ ವಿಕೆಟ್ ಒಪ್ಪಿಸಿದರೆ, ಗ್ರ್ಯಾಂಡ್​ಹೋಮ್​ ಅಬ್ಬರ 16 ರನ್​ಗಳಿಗೆ ಸೀಮಿತವಾಯಿತು. ಆದರೆ ವಿಲಿಯಮ್ಸನ್​ ನಂತರ ಏಕಾಂಗಿಯಾಗಿ ಹೋರಾಟ ನಡೆಸಿದ ಟೇಲರ್​ 85 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್​ ಸಹಿತ 67 ರನ್​ಗಳಿಸಿ ವಿಕೆಟ್​ ಕೀಪರ್​ ಲ್ಯಾಥಮ್​(3) ಕ್ರೀಸ್​ನಲ್ಲಿದ್ದಾರೆ.

ಕಿವೀಸ್ ಇನ್ನಿಂಗ್ಸ್​ ಮುಕ್ತಾಯಕ್ಕೆ ಇನ್ನು 23 ಎಸೆತಗಳು ಬಾಕಿಯಿದ್ದು 250ರನ್​ಗಳ ಗಡಿ ದಾಟುವ ನಿರೀಕ್ಷೆಯಲ್ಲಿದೆ.

ABOUT THE AUTHOR

...view details