ನವದೆಹಲಿ: ಭಾರತ ತಂಡದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ತಮ್ಮ ಋತ್ತಿ ಜೀವನದ ಕೊನೆಯಲ್ಲಿ ಬಿಸಿಸಿಐ ಅವರನ್ನು ವೃತ್ತಿಪರತೆಗೆ ವಿರುದ್ಧವಾಗಿ ನೋಡಿಕೊಂಡಿತ್ತು. ನನ್ನನ್ನು ಮಾತ್ರವಲ್ಲ ಸೆಹ್ವಾಗ್, ಜಹೀರ್ ಹಾಗೂ ಹರ್ಭಜನ್ ಸಿಂಗ್ ಅವರಿಗೆ ಸೂಕ್ತ ಗೌರವ ನೀಡಲಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ವಿಶ್ವ ಕ್ರಿಕೆಟ್‌ನಲ್ಲಿ ಯುವರಾಜ್ ಸಿಂಗ್ ಒಬ್ಬ ಅದ್ಭುತ ಆಲ್ರೌಂಡರ್ ಅವರು ಭಾರತಕ್ಕೆ ಎರಡು ವಿಶ್ವಕಪ್ ತಂಡದುಕೊಂಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರು ಕಳೆದ ವರ್ಷದ ಜೂನ್‌ನಲ್ಲಿ ತನ್ನ ಯಶಸ್ವಿ ವೃತ್ತಿಜೀವನಕ್ಕೆ ತೆರೆ ಎಳೆದಿದ್ದರು.
ಭಾರತ ಕ್ರಿಕೆಟ್ಗೆ ಸೇವೆ ಸಲ್ಲಿಸಿರುವ ಕೆಲವು ದಿಗ್ಗಜರನ್ನು ಉದಾಹರಣೆಯಾಗಿ ಕೊಟ್ಟಿರುವ ಯುವರಾಜ್ ಸಿಂಗ್ ಕ್ರಿಕೆಟ್ ವೃತ್ತಿಜೀವನದ ಅಂತ್ಯದಲ್ಲಿ ನನಗೆ ಸಾಕಷ್ಟು ಗೌರವ ಲಭಿಸಲಿಲ್ಲ ಎಂದು ಕಿಡಿಕಾರಿದ್ದಾರೆ.
ನನ್ನ ವೃತ್ತಿಜೀವನದ ಕೊನೆಯಲ್ಲಿ ಅವರು(ಬಿಸಿಸಿಐ) ನನ್ನನ್ನು ನಡೆಸಿಕೊಂಡ ರೀತಿ ವೃತ್ತಿಪರವಾಗಿರಲಿಲ್ಲ ಎಂದು ನಾನು ಭಾವಿಸಿದ್ದೇನೆ. ನನ್ನನ್ನಷ್ಟೇ ಅಲ್ಲ ಹಿಂದೆ ಲೆಜೆಂಡ್ಗಳಾದ ಹರ್ಭಜನ್ ಸಿಂಗ್, ವೀರೇಂದ್ರ ಸೆಹ್ವಾಗ್, ಜಹೀರ್ ಖಾನ್ ಕಡೆ ನೋಡಿದಾಗಲೂ ಇಂತಹದ್ದೇ ಕೆಟ್ಟ ಅನುಭವವವನ್ನು ಅವರು ಎದುರಿಸಿದ್ದಾರೆ. ಇದು ಭಾರತೀಯ ಕ್ರಿಕೆಟ್‌ನ ಒಂದು ಭಾಗವಾಗಿದೆ. ನಾನು ಇದನ್ನು ಈ ಮೊದಲೇ ನೋಡಿದ್ದರಿಂದ ನನಗೇನು ಅಚ್ಚರಿ ಎನಿಸಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.