ನವದೆಹಲಿ:ಭಾರತ ಕ್ರಿಕೆಟ್ನಲ್ಲಿ ತನ್ನದೇ ಆದ ಆಟದ ಮೂಲಕ ಮಾಡಿರುವ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ತನಗಿಷ್ಟವಾದ ರಾಮಾಯಣದಲ್ಲಿ ಬರುವ ಪಾತ್ರದಾರಿಯ ಹೆಸರನ್ನು ಬಹಿರಂಗಪಡಿಸಿದ್ದಾರೆ.
ಮಾಜಿ ಆರಂಭಿಕ ಬ್ಯಾಟ್ಸ್ಮನ್ ಸೆಹ್ವಾಗ್ಗೆ ರಾಮಾಯಣದ ಅಂಗದ್ (ಸೀತೆಯನ್ನು ಲಂಕಾದಿಂದ ರಕ್ಷಣೆ ಮಾಡಲು ರಾಮನಿಗೆ ನೆರವಾದ ವಾನರ ಸೇನೆ) ಪಾತ್ರ ಕ್ರಿಕೆಟ್ ಜೀವನಕ್ಕೆ ಪ್ರೇರಣೆಯಾಗಿದೆ ಎಂದು ಸೆಹ್ವಾಗ್ ತಿಳಿಸಿದ್ದಾರೆ.
ಪಾದಚಲನೆಯ ಮೂಲಕ ಕ್ರಿಕೆಟ್ ಜಗತ್ತನ್ನೇ ಬೆರಗಾಗುವಂತಹ ಬ್ಯಾಟಿಂಗ್ ಶೈಲಿಯನ್ನು ಹೊಂದಿದ್ದ ಸೆಹ್ವಾಗ್ ತಮ್ಮ ಟ್ವಿಟರ್ನಲ್ಲಿ ಅಂಗದನ ಫೋಟೋ ಶೇರ್ ಮಾಡಿಕೊಂಡು , ಆತ ಏಕೆ ಸ್ಪೂರ್ತಿ ಎಂಬುದನ್ನು ತಿಳಿಸಿದ್ದಾರೆ.
"ನಾನು ಬ್ಯಾಟಿಂಗ್ ಸ್ಪೂರ್ತಿಯನ್ನು ಎಲ್ಲಿಂದ ಪಡೆದಿದ್ದೇನೆ ಎಂಬುದು ಇಲ್ಲಿದೆ. ಪಾದಗಳನ್ನು ಅಲುಗಾಡಿಸುವುದು ಕಷ್ಟಮಾತ್ರವಲ್ಲ, ಸಾದ್ಯವೇ ಇಲ್ಲ.ಅಂಗದ್ ಜೀ ರಾಕ್ಸ್" ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.
ರಾಮಾಯಣದಲ್ಲಿ ರಾಮ ಅಂಗದನನ್ನು ರಾವಣನ ಆಸ್ಥಾನಕ್ಕೆ ಕಳುಹಿಸಿ ಯುದ್ದವನ್ನು ತಪ್ಪಿಸುವ ಸಲುವಾಗಿ ದೂತನನ್ನಾಗಿ ಕಳುಹಿಸಿರುತ್ತಾನೆ. ಈ ಸಂದರ್ಭದಲ್ಲಿ ರಾವಣನ ದುರಹಂಕಾರವನ್ನು ಮುರಿಯಲು ತನ್ನ ಒಂದು ಕಾಲನ್ನು ಯಾರಾದರೂ ಎತ್ತಬಲ್ಲಿರಾ ಎಂದು ಸವಾಲು ಹಾಕುತ್ತಾನೆ. ಒಂದು ವೇಳೆ, ಆತನ ಒಂದು ಕಾಲನ್ನ ನೆಲದಿಂದ ಎತ್ತಿದರೆ ರಾಮ ಸೋಲೊಪ್ಪಿಕ್ಕೊಂಡು ಹಿಂದಿರುಗುತ್ತಾನೆ ಎಂದು ಅಂಗದ ಹೇಳುತ್ತಾನೆ. ಆದರೆ ಅಂಗದ ಕಾಲನ್ನು ಯಾರಿಂದಲೂ ಎತ್ತಲು ಸಾಧ್ಯವಾಗಲಿಲ್ಲ ಎಂಬುದು ಪುರಾಣಗಳಲ್ಲಿ ಉಲ್ಲೇಖವಾಗಿದೆ.
ಇದಕ್ಕಾಗಿ ಟೆಸ್ಟ್ ಕ್ರಿಕೆಟ್ನಲ್ಲಿ ಎರಡು ತ್ರಿಶತಕ ಸಿಡಿಸಿರುವ ಭಾರತ ಏಕೈಕ ಬ್ಯಾಟ್ಸ್ಮನ್ ಆಗಿರುವ ಸೆಹ್ವಾಗ್ ಅಂಗದ ತಮಗೆ ಸ್ಪೂರ್ತಿ ಎಂದು ತಿಳಿಸಿದ್ದಾರೆ. 80ರ ದಶಕದಲ್ಲಿ ಅತಿ ಹೆಚ್ಚು ಪ್ರಸಿದ್ದವಾಗಿದ್ದ ರಮಾಯಣ ಧಾರಾವಾಹಿ ಇದೀಗ ಮರುಪ್ರಸಾರವಾಗುತ್ತಿದ್ದು ಭಾರಿ ಜನಪ್ರಿಯತೆ ಪಡೆಯುತ್ತಿದೆ.