ಕರ್ನಾಟಕ

karnataka

ETV Bharat / sports

ಪತ್ನಿ, ಮಗಳ ಫೋಟೋ ಶೇರ್​ ಮಾಡಿ ಮಹಿಳಾ ದಿನಾಚರಣೆಯ ಶುಭಾಶಯ ಕೋರಿದ ಕೊಹ್ಲಿ - ಮಹಿಳಾ ದಿನಾಚರಣೆಯ ಶುಭ ಕೋರಿದ ಕೊಹ್ಲಿ

ಮಗುವಿನ ಜನನವನ್ನು ನೋಡುವುದು ಮನುಷ್ಯನಿಗೆ ಅದ್ಭುತ ಅನುಭವವಾಗಿದೆ. ತಾಯಿಯಾದ ನಂತರ ಮಹಿಳೆಯರ ನಿಜವಾದ ಶಕ್ತಿ ಮತ್ತು ದೈವತ್ವ ಅರ್ಥವಾಗುತ್ತದೆ. ದೇವರು ಅವರೊಳಗೆ ಒಂದು ಜೀವನವನ್ನು ಏಕೆ ಸೃಷ್ಟಿಸಿದನೆಂದು ಅರ್ಥಮಾಡಿಕೊಳ್ಳಿ. ಮಹಿಳೆಯರು ಪುರುಷರಿಗಿಂತ ಹೆಚ್ಚು ಶಕ್ತಿಶಾಲಿ ಎಂದು ಕೊಹ್ಲಿ ತಿಳಿಸುವ ಮೂಲಕ ಅಂತಾರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ವಿಶ್ವದ ಎಲ್ಲಾ ಮಹಿಳೆಯರಿಗೂ ಶುಭಾಶಯ ಕೋರಿದ್ದಾರೆ.

ವಿರಾಟ್ ಕೊಹ್ಲಿ - ಅನುಷ್ಕಾ ಶರ್ಮಾ
ವಿರಾಟ್ ಕೊಹ್ಲಿ - ಅನುಷ್ಕಾ ಶರ್ಮಾ

By

Published : Mar 8, 2021, 3:22 PM IST

ಹೈದಾರಾಬಾದ್​:ಟೀಮ್ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚಾರಣೆಯ ಪ್ರಯುಕ್ತ ತಮ್ಮ ಪತ್ನಿ ಅನುಷ್ಕಾ ಶರ್ಮಾ ಮತ್ತು ಮಗಳು ವಮಿಕಾಳ ಫೋಟೋಗಳನ್ನು ಪೋಸ್ಟ್​ ಮಾಡಿ ಶುಭಾಶಯ ಕೋರಿದ್ದಾರೆ.

ಮಗುವಿನ ಜನನವನ್ನು ನೋಡುವುದು ಮನುಷ್ಯನಿಗೆ ನಂಬಲಾಗದ ಮತ್ತು ಅದ್ಭುತ ಅನುಭವವಾಗಿದೆ. ತಾಯಿಯಾದ ನಂತರ ಮಹಿಳೆಯರ ನಿಜವಾದ ಶಕ್ತಿ ಮತ್ತು ದೈವತ್ವ ಅರ್ಥವಾಗುತ್ತದೆ. ದೇವರು ಅವರೊಳಗೆ ಒಂದು ಜೀವನವನ್ನು ಏಕೆ ಸೃಷ್ಟಿಸಿದನೆಂದು ಅರ್ಥಮಾಡಿಕೊಳ್ಳಿ. ಮಹಿಳೆಯರು ಪುರುಷರಿಗಿಂತ ಹೆಚ್ಚು ಶಕ್ತಿಶಾಲಿ ಎಂದು ಕೊಹ್ಲಿ ತಿಳಿಸುವ ಮೂಲಕ ಅಂತಾರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ವಿಶ್ವದ ಎಲ್ಲಾ ಮಹಿಳೆಯರಿಗೂ ಶುಭಾಶಯ ಕೋರಿದ್ದಾರೆ.

ಪತ್ನಿ ಅನುಷ್ಕಾ ಶರ್ಮಾರನ್ನು ಶಕ್ತಿಶಾಲಿ ಮಹಿಳೆಯರಲ್ಲಿ ಒಬ್ಬರು ಎಂದು ಬಣ್ಣಿಸಿರುವ ಟೀಮ್ ಇಂಡಿಯಾ ನಾಯಕ, ಮಗಳು ವಮಿಕಾ ಕೂಡ ಅವಳ ತಾಯಿಯಂತಾಗಬೇಕೆಂದು ಹೇಳಿಕೊಂಡಿದ್ದಾರೆ.

ಕೊಹ್ಲಿ ಇನ್ಸ್ಟಾಗ್ರಾಮ್​ನಲ್ಲಿ ಮಗಳು ವಮಿಕಾ ಹಾಗೂ ಪತ್ನಿ ಅನುಷ್ಕಾ ಶರ್ಮಾ ಜೊತೆಗಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಫೋಟೋದಲ್ಲಿ ಮಗುವಿನ ಮುಖವನ್ನು ಮಾತ್ರ ತೋರಿಸಿಲ್ಲ. ಈ ಹಿಂದೆಯೇ ತಮ್ಮ ಮಗುವನ್ನು ಸಾಮಾಜಿಕ ಜಾಲಾತಾಣದಿಂದ ದೂರವಿರಿಸುವುದಾಗಿ ಕೊಹ್ಲಿ ತಿಳಿಸಿರುವುದನ್ನು ನಾವು ಇಲ್ಲಿ ಸ್ಮರಿಸಬಹುದು.

ABOUT THE AUTHOR

...view details