ಕರ್ನಾಟಕ

karnataka

ETV Bharat / sports

ಟ್ವಿಟರ್​ನಲ್ಲಿ ಹೆಚ್ಚು ಫಾಲೋವರ್ಸ್​​ ಪಡೆದ ಕ್ರಿಕೆಟಿಗರಲ್ಲಿ ವಿರಾಟ್​ ಕೊಹ್ಲಿ ನಂ1! - ಶಾರುಖ್​ ಖಾನ್

ಪಾಕ್​ ವಿರುದ್ಧ ನಡೆದ ವಿಶ್ವಕಪ್​ ಪಂದ್ಯದ ವೇಳೆ ವೇಗವಾಗಿ 11 ಸಾವಿರ ರನ್​ ಪೂರೈಸಿ ವಿಶ್ವದಾಖಲೆ ಬರೆದಿದ್ದ ಕೊಹ್ಲಿ ಇದೀಗ ಸಾಮಾಜಿಕ ಜಾಲತಾಣದಲ್ಲೂ ಅತಿ ಹೆಚ್ಚು ಫಾಲೋವರ್ಸ್​ ಹೊಂದಿರುವ ಕ್ರಿಕೆಟಿಗ ಎಂಬ ದಾಖಲೆಗೆ ಪಾತ್ರವಾಗಿದ್ದಾರೆ.

virat-kohli

By

Published : Jun 20, 2019, 8:40 AM IST

Updated : Jun 20, 2019, 3:18 PM IST

ಮುಂಬೈ: ಭಾರತ ತಂಡದ ನಾಯಕ ಕೊಹ್ಲಿ ರನ್ ​ಗಳಿಸುವುದರಲ್ಲಿ ಮಾತ್ರವಲ್ಲ ಟ್ವಿಟರ್​ನಲ್ಲೂ ಅತಿ ಫಾಲೋವರ್ಸ್​ ಪಡೆಯುವುದರಲ್ಲೂ ದಾಖಲೆ ನಿರ್ಮಿಸಿದ್ದಾರೆ.

ಮೊನ್ನೆಯಷ್ಟೇ ಪಾಕ್​ ವಿರುದ್ಧ ನಡೆದ ವಿಶ್ವಕಪ್​ ಪಂದ್ಯದ ವೇಳೆ ವೇಗವಾಗಿ 11 ಸಾವಿರ ರನ್​ ಪೂರೈಸಿ ವಿಶ್ವದಾಖಲೆ ಬರೆದಿದ್ದ ಕೊಹ್ಲಿ, ಇದೀಗ ಸಾಮಾಜಿಕ ಜಾಲತಾಣದಲ್ಲೂ ಅತಿ ಹೆಚ್ಚು ಫಾಲೋವರ್ಸ್​ ಹೊಂದಿರುವ ಕ್ರಿಕೆಟಿಗ ಎಂಬ ದಾಖಲೆಗೆ ಪಾತ್ರವಾಗಿದ್ದಾರೆ.

ನಿನ್ನೆಗೆ ಕೊಹ್ಲಿಯ ಟ್ವಿಟರ್​ ಹಿಂಬಾಲಕರ ಸಂಖ್ಯೆ 30 ಮಿಲಿಯನ್​ ದಾಟಿದೆ. ಈ ವಿಷಯವನ್ನು ಸ್ವತಃ ಕೊಹ್ಲಿ, ಧೋನಿ ಸ್ಟಾರ್ಕ್​ ಬೌಲಿಂಗ್​ನಲ್ಲಿ ಸಿಕ್ಸರ್​ ಸಿಡಿಸಿದಾಗ ಕೊಟ್ಟ ಪ್ರತಿಕ್ರಿಯೆಯ ವಿಡಿಯೋವನ್ನು ಪೋಸ್ಟ್​ ಮಾಡಿ 'ನನ್ನ ಟ್ವಿಟರ್​ ಫಾಲೋವರ್​ 30 ಮಿಲಿಯನ್​ ದಾಟಿದ್ದನ್ನು ನೋಡಿದಾಗ ನನ್ನ ಪ್ರತಿಕ್ರಿಯೆ ಹೀಗೇ ಇತ್ತು' ಎಂದು ಬರೆದುಕೊಂಡಿದ್ದಾರೆ.

ಸದ್ಯ ಕೊಹ್ಲಿ ಟ್ವಿಟರ್​, ಇನ್​ಸ್ಟಾಗ್ರಾಮ್​​ನಲ್ಲಿ 100 ಮಿಲಿಯನ್​ ಫಾಲೋವರ್ಸ್​ ಹೊಂದಿರುವ ಭಾರತದ ಏಕೈಕ ಕ್ರೀಡಾಪಟುವಾಗಿದ್ದಾರೆ. ಒಟ್ಟಾರೆ ಭಾರತದಲ್ಲಿ ಅತಿ ಹೆಚ್ಚು ಟ್ವಿಟರ್​ ಹಿಂಬಾಲಕರನ್ನು ಹೊಂದಿರುವ ಪಟ್ಟಿಯಲ್ಲಿ 6ನೇ ಸ್ಥಾದಲ್ಲಿದ್ದಾರೆ.

48 ಮಿಲಿಯನ್ ಹಿಂಬಾಲಕರನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ಶಾರುಖ್​ ಖಾನ್​ (38 ಮಿಲಿಯನ್) , ಅಮಿತಾಬ್​ ಬಚ್ಚನ್ (37 ಮಿಲಿಯನ್), ಸಲ್ಮಾನ್​ ಖಾನ್​(37 ಮಿಲಿಯನ್​), ಅಕ್ಷಯ್​ ಕುಮಾರ್​(30 ಮಿಲಿಯನ್​) ಇದ್ದಾರೆ.

Last Updated : Jun 20, 2019, 3:18 PM IST

ABOUT THE AUTHOR

...view details