ಕರ್ನಾಟಕ

karnataka

ETV Bharat / sports

ಜಮ್ಮು- ಕಾಶ್ಮೀರ ಕ್ರಿಕೆಟಿಗರ ಸಂಪರ್ಕ: ಟಿವಿ ಜಾಹೀರಾತು ಮೊರೆ ಹೋದ ಇರ್ಫಾನ್ ಪಠಾಣ್​ - ಇರ್ಫಾನ್ ಪಠಾಣ್​

ಭಾರತದ ಮಾಜಿ ಕ್ರಿಕೆಟಿಗ ಹಾಗೂ ಜಮ್ಮು ಕಾಶ್ಮೀರ ತಂಡದ ಸಲಹೆಗಾರ ಇರ್ಫಾನ್ ಪಠಾಣ್​ ಜಮ್ಮು- ಕಾಶ್ಮೀರದ ಆಟಗಾರರ ಸಂಪರ್ಕಕ್ಕೆ ಟಿವಿ ಜಾಹೀರಾತು ಮೊರೆ ಹೋಗಿದ್ದಾರೆ.

Irfan Pathan

By

Published : Aug 29, 2019, 2:01 PM IST

ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ಹಾಗೂ ಜಮ್ಮು ಕಾಶ್ಮೀರ ತಂಡದ ಸಲಹೆಗಾರ ಇರ್ಫಾನ್ ಪಠಾಣ್​ ಜಮ್ಮು- ಕಾಶ್ಮೀರದ ಆಟಗಾರರ ಸಂಪರ್ಕಕ್ಕೆ ಟಿವಿ ಜಾಹೀರಾತು ಮೊರೆ ಹೋಗಿದ್ದಾರೆ.

ಜಮ್ಮು ಕಾಶ್ಮೀರಕ್ಕೆ ನೀಡಿದ್ದ 370 ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ಮೇಲೆ ಅಲ್ಲಿನ ಪರಿಸ್ಥಿತಿ ಹದಗೆಟ್ಟಿದೆ. ಭದ್ರತೆ ದೃಷ್ಟಿ​ಯಿಂದ ಕಾಶ್ಮೀರದಲ್ಲಿ ಮೊಬೈಲ್‌ ನೆಟ್‌ವರ್ಕ್ ಮೇಲೆ ನಿರ್ಬಂಧ ಹೇರ​ಲಾ​ಗಿರುವುದರಿಂದ ಮುಂಬರುವ ವಿಜಯ್​ ಹಜಾರೆ ಟ್ರೋಫಿ ತರಬೇತಿ ಕ್ಯಾಂಪ್​ಗೆ ಜಮ್ಮು-ಕಾಶ್ಮೀರ ತಂಡದ ಆಟಗಾರರನ್ನು ಒಂದುಗೂಡಿಸಲಾಗದೇ ಪಠಾಣ್​ ಪರದಾಡುತ್ತಿದ್ದಾರೆ.

ಇದೇ ಕಾರಣದಿಂದ ಈಗಾ​ಗಲೇ ಅಂಡರ್‌-23 ವಿಝ್ಝಿ ಟ್ರೋಫಿ​ಯಿಂದ ಜಮ್ಮು-ಕಾಶ್ಮೀರ ತಂಡ ಹಿಂದೆ ಸರಿ​ದಿ​ತ್ತು. ಆದರೆ, ಮುಂದಿನ ತಿಂಗಳು ಆರಂಭ​ಗೊ​ಳ್ಳ​ಲಿ​ರುವ ವಿಜಯ್‌ ಹಜಾರೆ ಏಕ​ದಿನ ಟೂರ್ನಿಗೆ ಆರಂಭಗೊಳ್ಳಲಿದ್ದು, ತರಬೇತಿ ಶಿಬಿರ ಆರಂಭಿ​ಸಲು ಆಟ​ಗಾ​ರ​ರೊಂದಿಗೆ ಸಂವ​ಹನ ನಡೆ​ಸಲು ಸಾಧ್ಯ​ವಾ​ಗು​ತ್ತಿಲ್ಲ. ಹೀಗಾಗಿ ಆಡಳಿತ ಮಂಡಳಿ ಸ್ಥಳೀಯ ಟಿವಿ ವಾಹಿನಿಗಳಲ್ಲಿ ಆಟ​ಗಾ​ರ​ರು, ಕ್ರಿಕೆಟ್‌ ಸಂಸ್ಥೆ ಸಂಪ​ರ್ಕಿಸಿ ಶಿಬಿರಕ್ಕೆ ಹಾಜ​ರಾ​ಗು​ವಂತೆ ಜಾಹೀ​ರಾತು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಪಠಾಣ್​, ನನ್ನ ವೃತ್ತಿ ಜೀವನದಲ್ಲೇ ಇದೊಂದು ಸವಾಲಿನ ಕೆಲಸವಾಗಿದೆ. ಜಮ್ಮುವಿನ ಬಹುತೇಕ ಆಟಗಾರರು ನನ್ನ ಸಂಪರ್ಕದಲ್ಲಿದ್ದಾರೆ. ಆದರೆ, ಕಾಶ್ಮೀರ ಆಟಗಾರರು ಸಂಪರ್ಕ ಮಾಡಲಾಗುತ್ತಿಲ್ಲ. ಮುಂದಿನ ತಿಂಗಳು ವಿಜಯ್​ ಹಜಾರೆ ಟ್ರೋಫಿ ಆರಂಭವಾಗಲಿದ್ದು, ಈ ತಿಂಗಳು ತರಬೇತಿ ಶಿಬಿರಕ್ಕೆ ಆಟಗಾರರನ್ನು ಕರೆತರುವುದು ಅನಿವಾರ್ಯವಾಗಿದೆ. ಆದ್ದರಿಂದ ಟಿವಿ ಜಾಹೀರಾತು ನೀಡಿದ್ದೇವೆ ಎಂದಿದ್ದಾರೆ.

ABOUT THE AUTHOR

...view details