ರಾವಲ್ಪಿಂಡಿ: ಜಿಂಬಾಬ್ವೆ ಮತ್ತು ಪಾಕಿಸ್ತಾನ ನಡುವಿನ 2ನೇ ಏಕದಿನ ಪಂದ್ಯದಲ್ಲಿ ತೀರ್ಪುಗಾರರಾಗಿ ಕಣಕ್ಕಿಳಿಯಲಿರುವ ಪಾಕಿಸ್ತಾನದ ಅಂಪೈರ್ ಅಲೀಂ ದಾರ್ ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಪಂದ್ಯಗಳಲ್ಲಿ ಅಂಫೈರ್ ಆಗಿ ಕಾರ್ಯನಿರ್ವಹಿಸಿದ ವಿಶ್ವದಾಖಲೆಗೆ ಪಾತ್ರರಾಗಲಿದ್ದಾರೆ.
52 ವರ್ಷದ ಅಲೀಂ 209 ಏಕದಿನ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯ ನಿರ್ವಹಿಸುವ ಮೂಲಕ ದಕ್ಷಿಣ ಅಫ್ರಿಕಾದ ರೂಡಿ ಕೊಯೆರ್ಟ್ಜನ್ ಅವರ ಜೊತೆ ಮೊದಲ ಸ್ಥಾನ ಹಂಚಿಕೊಂಡಿದ್ದಾರೆ. ಭಾನುವಾರದ ಪಂದ್ಯ ಅವರ ಪಾಲಿನ 210ನೇ ಪಂದ್ಯವಾಗಿದೆ. ಈ ಮೂಲಕ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ತೀರ್ಪುಗಾರನಾಗಿ ಕಾರ್ಯ ನಿರ್ವಹಿಸಿರುವ ದಾಖಲೆ ಅಲೀಂ ದಾರ್ ಪಾಲಾಗಲಿದೆ. ಟಿ20 ಪಂದ್ಯಗಳಲ್ಲೂ ಅವರು 2ನೇ ಸ್ಥಾನದಲ್ಲಿದ್ದು, 46 ಪಂದ್ಯಗಳಲ್ಲಿ ಅಂಪೈರ್ ಆಗಿದ್ದಾರೆ.