ಕರ್ನಾಟಕ

karnataka

ETV Bharat / sports

'ಈ ಪಂದ್ಯದಲ್ಲಿ ಗೆದ್ದರೆ ಪ್ರೀತಿಯಿಂದ ತಬ್ಬಿಕೊಳ್ಳುವೆ ಎಂದಿದ್ದರಂತೆ ಎಬಿಡಿ' - ಎಬಿ ಡಿವಿಲಿಯರ್ಸ್​

ನಿನ್ನೆಯ ಪಂದ್ಯದಲ್ಲಿ ಎಬಿಡಿ ವಿಲಿಯರ್ಸ್​​ ಮೈದಾನಕ್ಕಿಳಿದಿರಲಿಲ್ಲ. ಆದರೆ ಈ ಪಂದ್ಯದಲ್ಲಿ ನಮ್ಮ ತಂಡ ಗೆಲುವು ದಾಖಲು ಮಾಡಿದರೆ, ಕೊಹ್ಲಿಗೆ ತಬ್ಬಿಕೊಳ್ಳುವುದಾಗಿ ಮಿ.360 ಹೇಳಿಕೊಂಡಿದ್ದರಂತೆ.

ವಿರಾಟ್​​ ಕೊಹ್ಲಿ

By

Published : Apr 20, 2019, 11:29 AM IST

Updated : Apr 20, 2019, 12:10 PM IST

ಕೋಲ್ಕತ್ತಾ:ಐಪಿಎಲ್​ನ ನಿನ್ನೆಯ ಕೋಲ್ಕತ್ತಾ ನೈಟ್​ ರೈಡರ್ಸ್​​ ವಿರುದ್ಧದ ಪಂದ್ಯದಲ್ಲಿ ಬೆಂಗಳೂರು ತಂಡ 10ರನ್​ಗಳ ಜಯ ಸಾಧಿಸಿದೆ. ಈ ಮೂಲಕ ಪ್ರಸಕ್ತ ಸಾಲಿನ ಟೂರ್ನಿಯಲ್ಲಿ 2ನೇ ಗೆಲುವು ದಾಖಲು ಮಾಡಿದೆ.

ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ತಂಡದ ಎಬಿಡಿ ವಿಲಿಯರ್ಸ್​ ಕಣಕ್ಕಿಳಿದಿರಲಿಲ್ಲ. ಅವರು ಜ್ವರದಿಂದ ಬಳಲುತ್ತಿದ್ದ ಕಾರಣ ಇಂದಿನ ಪಂದ್ಯದಲ್ಲಿ ಆಡುತ್ತಿಲ್ಲ ಎಂಬ ಮಾತನ್ನ ಕೊಹ್ಲಿ ಪಂದ್ಯ ಆರಂಭಕ್ಕೂ ಮೊದಲೇ ಖುದ್ದಾಗಿ ಹೇಳಿದ್ದರು. ಇನ್ನು ಪಂದ್ಯ ಮುಕ್ತಾಯಗೊಂಡ ಬಳಿಕ ಡ್ರೆಸ್ಸಿಂಗ್​ ರೂಂನಲ್ಲಿ ತಮ್ಮಿಬ್ಬರ ನಡುವೆ ನಡೆದ ಮಾತುಕತೆ ಮಾಹಿತಿ ಹೊರಹಾಕಿದ್ದಾರೆ.

ಈ ಪಂದ್ಯದಲ್ಲಿ ನಮ್ಮ ತಂಡ ಗೆಲುವು ದಾಖಲು ಮಾಡಿದ್ರೆ, ನಾನು ನಿನಗೆ ಪ್ರೀತಿಯಿಂದ ತಬ್ಬಿಕೊಳ್ಳುತ್ತೇನೆ ಎಂದು ಎಬಿಡಿ ಹೇಳಿದ್ದರಂತೆ. ಆ ಮಾತನ್ನ ಕೊಹ್ಲಿ ಪಂದ್ಯದಲ್ಲಿ ಗೆಲುವು ದಾಖಲು ಮಾಡಿದ ಬಳಿಕ ಹೇಳಿದ್ದಾರೆ. ಇನ್ನು ನಿನ್ನೆಯ ಪಂದ್ಯದಲ್ಲಿ ಅಬ್ಬರಿಸಿದ ಕೊಹ್ಲಿ ಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಜತೆಗೆ ಸ್ಫೋಟಕ ಬ್ಯಾಟಿಂಗ್​ ಪ್ರದರ್ಶನ ನೀಡಿದ್ದ ಮೊಯಿನ್​ ಅಲಿ ಕೇವಲ 28 ಎಸೆತಗಳಲ್ಲಿ 66ರನ್​ ಸಿಡಿಸಿದರು.

Last Updated : Apr 20, 2019, 12:10 PM IST

For All Latest Updates

ABOUT THE AUTHOR

...view details