ಕರ್ನಾಟಕ

karnataka

ETV Bharat / sports

ಇಂದು ಕೆಎಸ್​ಸಿಎ ಚುನಾವಣೆ... ಯಾರಾಗ್ತಾರೆ ರಾಜ್ಯ ಕ್ರಿಕೆಟ್ ಸಂಸ್ಥೆಯ ಕ್ಯಾಪ್ಟನ್​? - ಕ್ಯಾಪ್ಟನ್ ಎಂ ಹರೀಶ್

ಕೆಎಸ್​ಸಿಎ ಚುನಾವಣೆಗೆ ಈ ಬಾರಿ ಫೈಟ್​ ಹೆಚ್ಚಾಗಿದೆ. ಎರಡು ಬಣಗಳು ಕಣದಲ್ಲಿದ್ದು, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಚುಕ್ಕಾಣಿ ಹಿಡಿಯಲು ಹಾತೊರೆಯುತ್ತಿವೆ.

ಕೆಎಸ್​ಸಿಎ ಚುನಾವಣೆ

By

Published : Oct 3, 2019, 4:56 AM IST

ಬೆಂಗಳೂರು:ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್​ಸಿಎ) ಯ ಚುನಾವಣೆ ಇಂದು ನಡೆಯಲಿದೆ. ಎರಡು ಬಣ ಈ ಬಾರಿಯ ಕೆಎಸ್​ಸಿಎ ಚುಕ್ಕಾಣಿ ಹಿಡಿಯಲು ತಮ್ಮದೇ ರೀತಿಯಲ್ಲಿ ಪ್ರಯತ್ನ ನಡೆಸಿವೆ.

ಒಂದು ಕಡೆ ಬಲಿಷ್ಠ ರೋಜರ್ ಬಿನ್ನಿ ಬಣವಾದರೆ ಇನ್ನೊಂದು ಕಡೆ ಕ್ಯಾಪ್ಟನ್ ಎಂ ಹರೀಶ್ ಬಣ ಅಖಾಡದಲ್ಲಿದೆ. ಚುನಾವಣಾ ಕಣ ರಂಗೇರುತ್ತಿದ್ದು, ರಾಜಕೀಯದಂತೆ ಇಲ್ಲೂ ಆರೋಪ-ಪ್ರತ್ಯಾರೋಪಗಳಿಗೆ ಏನೂ ಕಡಿಮೆ ಇಲ್ಲ ಎಂಬುದನ್ನು ಸ್ಪರ್ಧಿಗಳು ಸಾರಿ ಹೇಳುತ್ತಿದ್ದಾರೆ.

ತಾಜ್ ವೆಸ್ಟ್ ಎಂಡ್ ಹೋಟೆಲ್​ನಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿನ್ನಿ ಬಣ

ಸ್ವಚ್ಛ ಕ್ರಿಕೆಟ್ ಎಂಬ ಹೆಸರಿನಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿರುವ ಕ್ಯಾಪ್ಟನ್ ಹರೀಶ್ ಮತ್ತು ಬಣದವರು ಮಾಡಿದ ಆರೋಪಗಳಿಗೆ ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್​​ನಲ್ಲಿ ಸುದ್ದಿಗೋಷ್ಠಿ ನಡೆಸಿ ಬಿನ್ನಿ ಬಣ ಟಾಂಗ್ ನೀಡಿದೆ. ಬಿಸಿಸಿಐನ ಆದೇಶದ ಮೇರೆಗೆ ಅಕ್ಟೋಬರ್ 4ರ ಒಳಗೆ ನಾವು ಎಲ್ಲಾ ಚುನಾವಣಾ ಕಾರ್ಯಗಳನ್ನು ಮುಗಿಸಬೇಕಿದೆ. ಬಿಸಿಸಿಐ ಚುನಾವಣೆ ಇರುವ ಕಾರಣ ನಮಗೂ ಸಹ ಹೆಚ್ಚಿನ ಕಾಲಾವಕಾಶ ದೊರೆಯಲಿಲ್ಲ, ಅದನ್ನು ಹೊರತುಪಡಿಸಿ ಅವಸರದಿಂದ ಚುನಾವಣೆ ದಿನಾಂಕ ನಿಗದಿಪಡಿಸಿದೆ ಎಂಬ ಆರೋಪ ಸತ್ಯಕ್ಕೆ ದೂರವಾದ ಮಾತು ಎಂದು ಬಿನ್ನಿ ಬಣ ಹೇಳುತ್ತಿದೆ

ನಾವು ಕಳೆದ ಆರು ವರ್ಷಗಳಿಂದ ಉತ್ತಮ ಆಡಳಿತ ನೀಡುವುದರ ಜೊತೆಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯನ್ನು ಮೇಲ್ದರ್ಜೆಗೇರಿಸಲು ಸಾಕಷ್ಟು ಪ್ರಯತ್ನ ಪಟ್ಟಿದ್ದೇವೆ. ಅನೇಕ ರೀತಿಯ ಅಭಿವೃದ್ಧಿ ಕಾರ್ಯಗಳು ನಮ್ಮ ಅವಧಿಯಲ್ಲಾಗಿವೆ. ಈ ಚುನಾವಣೆಯಲ್ಲಿ ಗೆದ್ದರೆ ಮತ್ತಷ್ಟು ಒಳ್ಳೆಯ ಕೆಲಸಗಳನ್ನು ಮಾಡುತ್ತೇವೆ, ಯಾವುದೇ ಸಾಕ್ಷಿಗಳಿಲ್ಲದೆ, ನಮ್ಮ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದರು.

ABOUT THE AUTHOR

...view details