ಧರ್ಮಶಾಲಾ:ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಟಿ-20 ಕ್ರಿಕೆಟ್ ಪಂದ್ಯಗಳ ಸರಣಿ ಬರುವ ಭಾನುವಾರದಿಂದ ಆರಂಭಗೊಳ್ಳಲಿದ್ದು, ಟೂರ್ನಿಯಲ್ಲಿ ಭಾಗಿಯಾಗಲು ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಧರ್ಮಾಶಾಲಾಗೆ ಬಂದಿಳಿದಿದೆ.
ಭಾನುವಾರ ಹರಿಣಗಳ ವಿರುದ್ಧ ಟಿ20 ಫೈಟ್... ಧರ್ಮಶಾಲಾಗೆ ಬಂದ ಕೊಹ್ಲಿ ಪಡೆ!
ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ ವಿರುದ್ಧ ಆಡಲು ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಧರ್ಮಶಾಲಾಗೆ ಬಂದಿಳಿದಿದ್ದು, ಬರುವ ಭಾನುವಾರ ಉಭಯ ತಂಡಗಳ ನಡುವೆ ಮೊದಲ ಪಂದ್ಯ ನಡೆಯಲಿದೆ.
ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಷಿಯೇಷನ್ ಮೈದಾನದಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದ್ದು, ಅದಕ್ಕಾಗಿ ತಂಡ ಆಗಮಿಸಿದೆ. ಉಳಿದಂತೆ ಸೆಪ್ಟೆಂಬರ್ 18ರಂದು ಮೊಹಾಲಿ ಹಾಗೂ ಸೆಪ್ಟೆಂಬರ್ 22ರಂದು ಬೆಂಗಳೂರಿನಲ್ಲಿ ಪಂದ್ಯಗಳು ಆಯೋಜನೆಗೊಂಡಿವೆ. ದಕ್ಷಿಣ ಆಫ್ರಿಕಾ ಟಿ20 ತಂಡವನ್ನ ಕ್ವಿಂಟನ್ ಡಿಕಾಕ್ ಮುನ್ನಡೆಸಲಿದ್ದಾರೆ.
ವಿರಾಟ್ ಕೊಹ್ಲಿ ನೇತೃತ್ವದ ತಂಡ ಈಗಾಗಲೇ ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಪ್ರದರ್ಶನ ನೀಡಿ ಗೆಲುವಿನೊಂದಿಗೆ ತವರಿಗೆ ವಾಪಸ್ ಆಗಿದ್ದು, ಅದೇ ಜೋಶ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಟ ನಡೆಸಲಿದೆ. ಯುವ ಪ್ಲೇಯರ್ಗಳಿಂದ ತುಂಬಿರುವ ವಿರಾಟ್ ಬಳಗ ಮುಂದಿನ ಐಸಿಸಿ ಟಿ20 ವಿಶ್ವಕಪ್ಗೆ ತಯಾರಿ ನಡೆಸುವ ಉದ್ದೇಶದಿಂದ ಈ ಸರಣಿ ಬಹಳಷ್ಟು ಮಹತ್ವ ಪಡೆದುಕೊಂಡಿದೆ. ಕೆಎಲ್ ರಾಹುಲ್,ಶ್ರೇಯಸ್ ಅಯ್ಯರ್,ಮನೀಷ್ ಪಾಂಡೆ,ರಿಷಭ್ ಪಂತ್,ಹಾರ್ದಿಕ್ ಪಾಂಡ್ಯ,ಕೃನಾಲ್,ವಾಷಿಂಗ್ಟನ್ ಸುಂದರ್,ರಾಹುಲ್ ಚಹರ್ ಹಾಗೂ ನವದೀಪ್ ಸೈನಿಯಂತಹ ಪ್ಲೇಯರ್ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಮಿಂಚು ಹರಿಸುವ ಸಾಧ್ಯತೆ ದಟ್ಟವಾಗಿದೆ.