ಕರ್ನಾಟಕ

karnataka

ETV Bharat / sports

2017ರಲ್ಲಿ ಪಾಕಿಸ್ತಾನದ ವಿರುದ್ಧ, ಇಂದು ಕಿವೀಸ್​ ಎದುರು ಆರಂಭಿಕ ಆಘಾತ... ಹಾಗಾದ್ರೆ ಫಲಿತಾಂಶ? - ಚಾಂಪಿಯನ್​ ಟ್ರೋಫಿ

2017ರ ಚಾಂಪಿಯನ್​ ಟ್ರೋಫಿ ಫೈನಲ್​ನಲ್ಲೂ ಭಾರತ ತಂಡ ಪಾಕಿಸ್ತಾನದ ವಿರುದ್ಧ ಮೊದಲ 2 ವಿಕೆಟ್​ ಕಳೆದುಕೊಂಡು ಕಳಪೆ ಆರಂಭ ನೀಡಿತ್ತು. ಇಂದು ಕೂಡ ಪ್ರಮುಖ ನಾಲ್ಕು ವಿಕೆಟ್​ ಕಳೆದುಕೊಂಡಿದೆ.

champion trophy

By

Published : Jul 10, 2019, 4:59 PM IST

ಮ್ಯಾಂಚೆಸ್ಟರ್​:2017ರ ಚಾಂಪಿಯನ್​ ಟ್ರೋಫಿ ಫೈನಲ್​ನಲ್ಲೂ ಭಾರತ ತಂಡ ಪಾಕಿಸ್ತಾನದ ವಿರುದ್ಧ ಮೊದಲ 2 ವಿಕೆಟ್​ ಕಳೆದುಕೊಂಡು ಕಳಪೆ ಆರಂಭ ನೀಡಿತ್ತು. ಇಂದು ಕೂಡ ಪ್ರಮುಖ ಮೂರು ವಿಕೆಟ್​ ಕಳೆದುಕೊಂಡಿದೆ.

ಅಂದು 339 ರನ್​ಗಳ ಗುರಿ ಪಡೆದಿದ್ದ ಕೊಹ್ಲಿಪಡೆ ಕೇವಲ 158 ರನ್​ಗಳಿಗೆ ವಿಕೆಟ್​ ಒಪ್ಪಿಸಿ 180 ರನ್​ಗಳ ಹೀನಾಯ ಸೋಲುಕಂಡಿತ್ತು. ರೋಹಿತ್​ ಶೂನ್ಯಕ್ಕೆ, ಕೊಹ್ಲಿ 5 ರನ್​ಗಳಿಗೆ ವಿಕೆಟ್​ ಒಪ್ಪಿಸಿದ್ದರು. ಇನ್ನು ಧವನ್​ 21 ರನ್​ಗಳಿಸಿ ವಿಕೆಟ್​ ಒಪ್ಪಿಸಿದ್ದರು.

ಇಂದೂ ಅದೇ ಪರಿಸ್ಥಿತಿಗೆ ಭಾರತ ತಂಡ ತಲುಪಿದ್ದು 240 ರನ್​ಗಳ ಗುರಿ ಬೆನ್ನೆತ್ತಿ ಕೇವಲ 5 ರನ್​ಗಳಿಗೆ 3 ವಿಕೆಟ್​ ಕಳೆದುಕೊಂಡಿದೆ. ಆರಂಭಿಕ ಮೂವರು ಕೇವಲ ಒಂದೇ ರನ್​ಗಳಿಸಿ ವಿಕೆಟ್​ ಒಪ್ಪಿಸಿದ್ದಾರೆ. 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕಾರ್ತಿಕ್​ ಕೂಡ ಪರಿಣಾಮಕಾರಿಯಾಗದೇ ಕೇವಲ 4 ರನ್​ಗಳಿಗೆ ವಿಕೆಟ್​ ನೀಡಿ ನಿರಾಸೆ ಮೂಡಿಸಿದ್ದಾರೆ.

ಚಾಂಪಿಯನ್​ ಟ್ರೋಫಿಯಲ್ಲಿ ಅಮೀರ್​ ಭಾರತಕ್ಕೆ ಆಘಾತ ನೀಡಿದರೆ ಇಂದು ಮ್ಯಾಟ್​ ಹೆನ್ರಿ ಹಾಗೂ ಬೌಲ್ಟ್​ ಆಘಾತ ನೀಡಿದ್ದಾರೆ.

ABOUT THE AUTHOR

...view details