ಕರ್ನಾಟಕ

karnataka

By

Published : Feb 4, 2020, 9:46 AM IST

Updated : Feb 4, 2020, 11:59 AM IST

ETV Bharat / sports

​​ ಏಕದಿನ ಹಣಾಹಣಿ​​: ಪೃಥ್ವಿ ಶಾ ಡೆಬ್ಯು ಕನ್ಫರ್ಮ್​​, ಕೆಎಲ್​ ಬ್ಯಾಟಿಂಗ್​ ಕ್ರಮಾಂಕ ರಿವೀಲ್​​​​ ಮಾಡಿದ ಕೊಹ್ಲಿ!

ನ್ಯೂಜಿಲ್ಯಾಂಡ್​​ ವಿರುದ್ಧ ನಾಳೆಯಿಂದ ಏಕದಿನ ಕ್ರಿಕೆಟ್​ ಸರಣಿ ಆರಂಭಗೊಳ್ಳುತ್ತಿದ್ದು, ಆರಂಭಿಕರಾಗಿ ಪೃಥ್ವಿ ಶಾ ಇನ್ನಿಂಗ್ಸ್​​ ಆರಂಭಿಸಲಿದ್ದಾರೆ ಎಂದು ನಾಯಕ​ ವಿರಾಟ್​​ ಕೊಹ್ಲಿ ಹೇಳಿದ್ದಾರೆ.

Team India captain
ಟೀಂ ಇಂಡಿಯಾ ಕ್ಯಾಪ್ಟನ್​​

ವೆಲ್ಲಿಂಗ್ಟನ್​: ನ್ಯೂಜಿಲ್ಯಾಂಡ್​ ​ವಿರುದ್ಧದ ಐದು ಟಿ-20 ಪಂದ್ಯಗಳ ಕ್ರಿಕೆಟ್​ ಸರಣಿಯಲ್ಲಿ ಟೀಂ ಇಂಡಿಯಾ 5-0 ಅಂತರದ ಕ್ಲೀನ್​ ಸ್ವೀಪ್​ ಮಾಡುವ ಮೂಲಕ ಹೊಸ ಇತಿಹಾಸ ರಚನೆ ಮಾಡಿದ್ದು, ಇದೀಗ ನಾಳೆಯಿಂದ ಆರಂಭಗೊಳ್ಳಲಿರುವ ಏಕದಿನ ಸರಣಿಗಾಗಿ ಟೀಂ ಇಂಡಿಯಾ ಮಾಸ್ಟರ್​ ಪ್ಲಾನ್​ ರೂಪಿಸಿಕೊಂಡಿದೆ.

ಟೀಂ ಇಂಡಿಯಾ ಕ್ಯಾಪ್ಟನ್​​

ಗಾಯಗೊಂಡು ಕಿವೀಸ್​ ವಿರುದ್ಧದ ಕ್ರಿಕೆಟ್​ ಸರಣಿಯಿಂದ ಆರಂಭಿಕ ಎಡಗೈ ಬ್ಯಾಟ್ಸ್​​ಮನ್​​ ಶಿಖರ್​ ಧವನ್​​ ಹೊರಬಿದ್ದಿರುವ ಕಾರಣ, ಆರಂಭಿಕರಾಗಿ ಪೃಥ್ವಿ ಶಾ ಇನ್ನಿಂಗ್ಸ್​ ಆರಂಭಿಸಲಿದ್ದಾರೆ ಎಂದು ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​​ ಕೊಹ್ಲಿ ಹೇಳಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ಶಿಖರ್​ ಭುಜದ ಗಾಯಕ್ಕೊಳಗಾಗಿದ್ದಾರೆ. ಹೀಗಾಗಿ ಏಕದಿನ ತಂಡಕ್ಕೆ ಪೃಥ್ವಿ ಶಾ ಚಾನ್ಸ್​ ಪಡೆದುಕೊಂಡಿದ್ದಾರೆ. ಇದೇ ವಿಷಯವಾಗಿ ಮಾತನಾಡಿರುವ ಕ್ಯಾಪ್ಟನ್​ ಖಂಡಿತವಾಗಿ ಅವರು ಇನ್ನಿಂಗ್ಸ್​ ಆರಂಭಿಸಲಿದ್ದಾರೆ ಎಂದು ಹೇಳಿದ್ದಾರೆ. ಇನ್ನು ಪೃಥ್ವಿ ಜತೆ ಕನ್ನಡಿಗ ಮಯಾಂಕ್​ ಅಗರವಾಲ್​ ಇನ್ನಿಂಗ್ಸ್​ ಆರಂಭಿಸುವ ಸಾಧ್ಯತೆ ದಟ್ಟವಾಗಿದೆ.

ರೋಹಿತ್​ ಸ್ಥಾನಕ್ಕೆ ಕನ್ನಡಿಗನ ಆಯ್ಕೆ

ಇನ್ನು ಕಿವೀಸ್​ ವಿರುದ್ಧದ ಕೊನೆಯ ಟಿ-20 ಪಂದ್ಯದಲ್ಲಿ ಗಾಯಗೊಂಡು ರೋಹಿತ್​ ಶರ್ಮಾ ಹೊರಬಿದ್ದಿರುವ ಕಾರಣ, ಅವರ ಸ್ಥಾನಕ್ಕೆ ಕನ್ನಡಿಗ ಮಯಾಂಕ್​​ ಅಗರವಾಲ್​ ಆಯ್ಕೆಯಾಗಿದ್ದು, ಬಿಸಿಸಿಐ ಇದೀಗ ಹೆಸರು ಫೈನಲ್​ ಮಾಡಿ ತಂಡವನ್ನ ಪ್ರಕಟಿಸಿದೆ.

ನಾಳೆ ಏಕದಿನ ಸರಣಿ ಆರಂಭಗೊಳ್ಳುತ್ತಿರುವುದರಿಂದ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ವಿರಾಟ್​, ಖಂಡಿತವಾಗಿ ನಾಳೆಯ ಪಂದ್ಯದಲ್ಲಿ ಶಾ ಆರಂಭಿಕರಾಗಿ ಟೀಂ ಇಂಡಿಯಾ ಪರ ಇನ್ನಿಂಗ್ಸ್​​ ಆರಂಭಿಸಲಿದ್ದಾರೆ ಎಂದಿದ್ದಾರೆ. ಇದರ ಜತೆಗೆ ಕನ್ನಡಿಗ ಕೆಎಲ್​ ರಾಹುಲ್​​ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್​ ಬೀಸಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಏಕದಿನ ಕ್ರಿಕೆಟ್​ ಸರಣಿಯಲ್ಲಿ ಟೀಂ ಇಂಡಿಯಾ ಮೊದಲ ಪಂದ್ಯ ಕೈಚೆಲ್ಲಿದ ಬಳಿಕ ನಂತರದ ಎರಡು ಪಂದ್ಯಗಳಲ್ಲಿ ಗೆಲುವು ದಾಖಲು ಮಾಡಿ ಸರಣಿಯನ್ನ 2-1 ಅಂತರದಿಂದ ಕೈವಶ ಮಾಡಿಕೊಂಡಿತ್ತು.

Last Updated : Feb 4, 2020, 11:59 AM IST

ABOUT THE AUTHOR

...view details