ಪುಣೆ: ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್ನಲ್ಲಿ ಭಾರತ ತಂಡ ಇನ್ನಿಂಗ್ಸ್ ಹಾಗೂ 137 ರನ್ಗಳಿಂದ ಜಯ ಸಾಧಿಸು ಮೂಲಕ ಸರಣಿಯನ್ನು 2-0ಯಲ್ಲಿ ವಶಪಡಿಸಿಕೊಂಡಿದೆ.
ಮೊದಲ ಇನ್ನಿಂಗ್ಸ್ನಲ್ಲಿ 275 ರನ್ಗಳಿಗೆ ಆಲೌಟ್ ಆಗುವ ಮೂಲಕ 326 ರನ್ಗಳ ಇನ್ನಿಂಗ್ಸ್ ಹಿನ್ನಡೆ ಅನುಭವಿಸಿ ಫಾಲೋಅನ್ಗೆ ತುತ್ತಾಗಿದ್ದ ದಕ್ಷಿಣ ಆಫ್ರಿಕಾ ತಂಡ ನಾಲ್ಕನೇ ದಿನದಾಟದಲ್ಲಿ 189 ರನ್ಗಳಿಗೆ ಆಲೌಟ್ ಆಗುವ ಮೂಲಕ ಇನ್ನಿಂಗ್ಸ್ ಹಾಗೂ 137 ರನ್ಗಳ ಸೋಲನುಭವಿಸಿತು.
ಆರಂಭಿಕರಾದ ಮಾರ್ಕ್ರಮ್ ಮೊದಲ ಓವರ್ನಲ್ಲಿ ಎಲ್ಬಿ ಬಲೆಗೆ ಬಿದ್ದರೆ, ನಂತರ ಬಂದ ಥ್ಯೂನಿಸ್ ಡಿ ಬ್ರೂಯ್ನ್ (8) ಉಮೇಶ್ ಯಾದವ್ ಬೌಲಿಂಗ್ನಲ್ಲಿ ಸಹಾ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾದರು. ಇವರ ಬೆನ್ನಲ್ಲೇ ನಾಯಕ ಪ್ಲೆಸಿಸ್(5) ಹಾಗೂ 48 ರನ್ಗಳಿಸಿ ಉತ್ತಮವಾಗಿ ಆಡುತ್ತಿದ್ದ ಡೀನ್ ಎಲ್ಗರ್ ಅಶ್ವಿನ್ ಬೌಲಿಂಗ್ನಲ್ಲಿ ಔಟಾದರು.
ಭೋಜನ ವಿರಾಮದ ವೇಳೆಗೆ 74 ರನ್ಗೆ 4 ವಿಕೆಟ್ ಕಳೆದುಕೊಂಡಿದ ಆಫ್ರಿಕಾ ತಂಡ ವಿರಾಮದ ನಂತರ ಡಿಕಾಕ್(5) ಬವುಮಾ(38)ರನ್ನು ಜಡೇಜಾ ಪೆವಿಲಿಯನ್ಗಟ್ಟಿದ್ದರು. ನಂತರ ಬಂದ ಮುತ್ತುಸ್ವಾಮಿಯನ್ನು (9) ಶಮಿ ಬೌಲಿಂಗ್ನಲ್ಲಿ ರೋಹಿತ್ ಕ್ಯಾಚ್ ನೀಡಿ ಔಟಾದರು.