ಕರ್ನಾಟಕ

karnataka

ETV Bharat / sports

2002ರ ನಂತರ 4ನೇ ಇನ್ನಿಂಗ್ಸ್​ನಲ್ಲಿ 100ಕ್ಕೂ ಹೆಚ್ಚು ಓವರ್ ಬ್ಯಾಟ್ ಬೀಸಿದ ಟೀಂ ಇಂಡಿಯಾ

ಇಂದು ಮುಕ್ತಾಯವಾದ 3ನೇ ಟೆಸ್ಟ್​ ಪಂದ್ಯದಲ್ಲಿ ತಮ್ಮ ಎದೆಗಾರಿಕೆ ತೋರಿದ ಅಶ್ವಿನ್ ಮತ್ತು ಹನುಮ ವಿಹಾರಿ 42.4 ಓವರ್​ಗಳ ಕಾಲ ಬ್ಯಾಟ್​ ಬೀಸಿ ಅಜೇಯರಾಗಿ ಉಳಿದ್ರು.

India bat over 100 overs in 4th innings for the first time since Lord's 2002
100ಕ್ಕೂ ಹೆಚ್ಚು ಓವರ್ ಬ್ಯಾಟ್ ಬೀಸಿದ ಟೀಂ ಇಂಡಿಯಾ

By

Published : Jan 11, 2021, 1:44 PM IST

ಸಿಡ್ನಿ:ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ಇನ್ನಿಂಗ್ಸ್​ನಲ್ಲಿ 131 ಓವರ್​ ಬ್ಯಾಟ್​ ಬೀಸಿದ ಟೀಂ ಇಂಡಿಯಾ ಆಟಗಾರರು, ನೂತನ ದಾಖಲೆ ಬರೆದಿದ್ದಾರೆ.

18 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಭಾರತ ತಂಡದ 4ನೇ ಇನ್ನಿಂಗ್ಸ್​ನಲ್ಲಿ 100ಕ್ಕೂ ಹೆಚ್ಚು ಓವರ್ ಬ್ಯಾಟಿಂಗ್ ನಡೆಸಿದೆ. ಈ ಹಿಂದೆ 2002 ರಲ್ಲಿ ಲಾರ್ಡ್ಸ್ ಟೆಸ್ಟ್‌ನಲ್ಲಿ ಭಾರತ 109.4 ಓವರ್‌ಗಳ ವರೆಗೆ ಬ್ಯಾಟಿಂಗ್ ಮಾಡಿತು, ಈ ಪಂದ್ಯದಲ್ಲಿ ಅಜಿತ್ ಅಗರ್ಕರ್ ಶತಕವನ್ನು ಸಿಡಿಸಿ ಮಿಂಚಿದ್ದರು. 1979 ಭಾರತ 4ನೇ ಇನ್ನಿಂಗ್ಸ್​ನಲ್ಲಿ 150.5 ಓವರ್​ಗಳ ಕಾಲ ಬ್ಯಾಟಿಂಗ್ ನಡೆಸಿದ್ದು ದಾಖಲೆಯಾಗಿದೆ.

ಇಂದು ಮುಕ್ತಾಯವಾದ ಪಂದ್ಯದಲ್ಲಿ ತಮ್ಮ ಎದೆಗಾರಿಕೆ ತೋರಿದ ಅಶ್ವಿನ್ ಮತ್ತು ಹನುಮ ವಿಹಾರಿ 42.4 ಓವರ್​ಗಳ ಕಾಲ ಬ್ಯಾಟ್​ ಬೀಸಿ ಅಜೇಯರಾಗಿ ಉಳಿದ್ರು.

ಅಲ್ಲದೇ 4ನೇ ವಿಕೆಟ್​ಗೆ ಭರ್ಜರಿ 148 ರನ್​ಗಳ ಕಾಣಿಕೆ ನೀಡಿದ ರಿಷಭ್ ಪಂತ್ ಮತ್ತು ಪೂಜಾರ ಆಸೀಸ್ ಬೌಲರ್​ಗಳ ಬೆವರಿಳಿಸಿದ್ರು. ಬೌಂಡರಿ ಸಿಕ್ಸರ್​ಗಳಿಂದ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ರಿಷಭ್ ಪಂತ್ 97 ರನ್​ ಗಳಿಸಿರುವಾಗ ಲಿಯಾನ್ ಎಸೆತದಲ್ಲಿ ಕಮ್ಮಿನ್ಸ್​ಗೆ ಕ್ಯಾಚ್ ನೀಡಿ ಶತಕ ವಂಚಿತರಾದರು. ಮೊದಲ ಇನ್ನಿಂಗ್ಸ್​ನಲ್ಲಿ ಅರ್ಧಶತಕ ಸಿಡಿದ್ದ ಪೂಜಾರ ದ್ವಿತೀಯ ಇನ್ನಿಂಗ್ಸ್​ನಲ್ಲಿ 77 ರನ್​ ಗಳಿಸಿ ಔಟ್ ಆದ್ರು.

ಒಂದೆಡೆ ಹನುಮ ವಿಹಾರಿ ಮಂಡಿರುಜ್ಜು ಗಾಯಕ್ಕೆ ತುತ್ತಾದರೆ, ಮತ್ತೊಂದೆಡೆ ಆರ್. ಅಶ್ವಿನ್ ಅವರ ಭುಜ ಮತ್ತು ಹೊಟ್ಟೆಗೆ ಚೆಂಡು ಬಡಿದು ಗಾಯಗೊಂಡರು. ಆದರೂ ಛಲ ಬಿಡದೇ ಆಸೀಸ್ ಬೌಲರ್​ಗಳ ಮಾರಕ ದಾಳಿಯನ್ನು ಸಮರ್ಥವಾಗಿ ಎದುರಿಸಿದ್ರು. ಈ ಇಬ್ಬರ ವಿಕೆಟ್ ಪಡೆಯಲೆಂದು ಯತ್ನಿಸಿದ ಆಸೀಸ್ ಬೌಲರ್​ಗಳ ಸರ್ವ ಪ್ರಯತ್ನವೂ ವಿಫಲವಾಯಿತು.

ಅಂತಿಮ ದಿನದಾಟದ ಅಂತ್ಯಕ್ಕೆ ಭಾರತ 131 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 334 ರನ್​ಗಳಿಸಿದ ಪರಿಣಾಮ ಪಂದ್ಯ ಡ್ರಾನಲ್ಲಿ ಅಂತ್ಯವಾಯ್ತು. 6ನೇ ವಿಕೆಟ್​ಗೆ ಹನುಮ ವಿಹಾರಿ ಮತ್ತು ಅಶ್ವಿನ್ ಜೋಡಿ 256 ಚೆಂಡು ಎದುರಿಸಿ 62 ರನ್​ ಕಲೆಹಾಕಿತು. 161 ಬಾಲ್ ಎದುರಿಸಿದ ವಿಹಾರಿ 23 ರನ್​ ಗಳಿಸಿದ್ರೆ, 128 ಚೆಂಡು ಎದುರಿಸಿದ ಅಶ್ವಿನ್ 39 ರನ್​ ಗಳಿಸಿ ಅಜೇಯರಾಗಿ ಉಳಿದ್ರು.

ABOUT THE AUTHOR

...view details