ಲಾರ್ಡ್ಸ್:ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಮಾರ್ಟಿನ್ ಗಪ್ಟಿಲ್ ಎಸೆದ ಓವರ್ ಥ್ರೋನಲ್ಲಿ ಅಂಪೈರ್ ಕುಮಾರ್ ಧರ್ಮಸೇನಾ ಆರು ರನ್ ನೀಡಿದ್ದು ಸಿಕ್ಕಾಪಟ್ಟೆ ವಿವಾದಕ್ಕೆ ಗುರಿಯಾಗಿದ್ದು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇದೀಗ ಬೌಲರ್ ಜೇಮ್ಸ್ ಅಂಡರ್ಸನ್ ಮಾತನಾಡಿದ್ದಾರೆ.
ಓವರ್ ಥ್ರೋ ರನ್ ರದ್ದು ಮಾಡುವಂತೆ ಅಂಪೈರ್ ಬಳಿ ಮನವಿ ಮಾಡಿದ್ದರಂತೆ ಬೆನ್ ಸ್ಟೋಕ್ಸ್! - ಇಂಗ್ಲೆಂಡ್
ಐಸಿಸಿ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಓವರ್ ಥ್ರೋ ರನ್ ವಿವಾದ ಇನ್ನು ಮುಗಿದಿಲ್ಲ. ಇದೀಗ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಬೆನ್ ಸ್ಟೋಕ್ಸ್ ಮೈದಾನದಲ್ಲೇ ಕ್ಷಮೆಯಾಚನೆ ಮಾಡಿದ್ದರು ಎಂದು ಇಂಗ್ಲೆಂಡ್ ವೇಗದ ಬೌಲರ್ ಹೇಳಿಕೆ ನೀಡಿದ್ದಾರೆ.
ಎರಡು ರನ್ ಓಡುವ ಯತ್ನದಲ್ಲಿ ಬೆನ್ ಸ್ಟೋಕ್ಸ್ ಡೈವ್ ಹೊಡೆದಾಗ ಚೆಂಡು ಅವರ ಬ್ಯಾಟ್ಗೆ ಬಡಿದು ಬೌಂಡರಿ ಗೆರೆ ಸೇರಿತ್ತು. ಈ ವೇಳೆ ಅಂಪೈರ್ 6 ರನ್ ನೀಡಿದ್ದರು. ಇದೇ ವಿಷಯ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿತ್ತು. ಈ ವೇಳೆ ಮೈದಾನದಲ್ಲೇ ಅಂಪೈರ್ ಬಳಿ ಕ್ಷಮೆ ಯಾಚನೆ ಮಾಡಿ, ಓವರ್ ಥ್ರೋ ರನ್ ರದ್ಧು ಮಾಡುವಂತೆ ಸ್ಟೋಕ್ಸ್ ಮನವಿ ಮಾಡಿಕೊಂಡಿದ್ದರು ಎಂದು ಜೇಮ್ಸ್ ಆಂಡರ್ಸನ್ ತಿಳಿಸಿದ್ದಾರೆ.
ಇದಕ್ಕೆ ಸಂಬಂಧಿದಂತೆ ನಿನ್ನೆ ಮಾತನಾಡಿದ್ದ ಐಸಿಸಿ ವಕ್ತಾರ, ಮೈದಾನದಲ್ಲಿ ಅಂಪೈರ್ಗಳು ತೆಗೆದುಕೊಳ್ಳುವ ಕೆಲವೊಂದು ನಿರ್ಧಾರಗಳು ಅವರ ವಿವೇಚನೆಗೆ ಬಿಟ್ಟಿದ್ದು, ಅವುಗಳಲ್ಲಿ ನಾವು ಹಸ್ತಕ್ಷೇಪ ಮಾಡಲು ಬರುವುದಿಲ್ಲ ಎಂದು ಹೇಳಿದ್ದರು.