ಕರ್ನಾಟಕ

karnataka

ETV Bharat / sports

ಗಾಯದಿಂದ 2018ರ ಐಪಿಎಲ್​ ತಪ್ಪಿಸಿಕೊಂಡಿದ್ದ ಮಿಚೆಲ್:​ ಸ್ಟಾರ್ಕ್​ಗೆ ಸಿಗಲಿದೆ ಕೋಟ್ಯಂತರ ರೂ.ಗಳ ಇನ್ಸುರೆನ್ಸ್​ ಹಣ - ಐಪಿಎಲ್​ 2018

ಆಸ್ಟ್ರೇಲಿಯಾದ ವೇಗಿ ಮಿಚೆಲ್​ ಸ್ಟಾರ್ಕ್​ ಗಾಯಗೊಂಡು ಐಪಿಎಲ್​ನಿಂದ ಹೊರಬಿದ್ದಿದ್ದರಿಂದ ಅವರು ತಮಗೆ ಬರಬೇಕಿದ್ದ ಇನ್ಸುರೆನ್ಸ್​ ಹಣಕ್ಕಾಗಿ ವಿಮೆದಾರರ ವಿರುದ್ಧ ಕಳೆದ ವರ್ಷ ಏಪ್ರಿಲ್​ನಲ್ಲಿ ಮೊಕದ್ದಮೆ ಹೂಡಿದ್ದರು.

ಮಿಚೆಲ್​ ಸ್ಟಾರ್ಕ್​
ಮಿಚೆಲ್​ ಸ್ಟಾರ್ಕ್​

By

Published : Aug 10, 2020, 7:34 PM IST

ಸಿಡ್ನಿ: ಆಸ್ಟ್ರೇಲಿಯಾದ ವೇಗಿ ಮಿಚೆಲ್​ ಸ್ಟಾರ್ಕ್ ಗಾಯದ ಕಾರಣ​ 2018ರ ಐಪಿಎಲ್​ನಿಂದ ಹೊರಬಿದ್ದಿದ್ದರು. ಗಾಯಗೊಂಡಿದ್ದರಿಂದ ಲೀಗ್​ ತಪ್ಪಿಸಿಕೊಂಡಿದ್ದರಿಂದ ಅವರು 1.53 ಮಿಲಿಯನ್​ ಡಾಲರ್​ ಇನ್ಸುರೆನ್ಸ್​ ಹಣಕ್ಕಾಗಿ ಹೋರಾಟ ನಡೆಸಿದ್ದರು. ಇದೀಗ ಇನ್ಸುರೆನ್ಸ್​ ಕಂಪನಿಯೊಂದಿಗೆ ಒಪ್ಪಂದದ ಮೂಲಕ ಈ ವಿವಾದವನ್ನು ಬಗೆಹರಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಗಾಯಗೊಂಡು ಐಪಿಎಲ್​ನಿಂದ ಹೊರಬಿದ್ದಿದ್ದರಿಂದ ಅವರು ತಮಗೆ ಬರಬೇಕಿದ್ದ ಇನ್ಸುರೆನ್ಸ್​ ಹಣಕ್ಕಾಗಿ ವಿಮೆದಾರರ ವಿರುದ್ಧ ಕಳೆದ ವರ್ಷ ಏಪ್ರಿಲ್​ನಲ್ಲಿ ಮೊಕದ್ದಮೆ ಹೂಡಿದ್ದರು.

ಇದೀಗ ವಿಕ್ಟೋರಿಯಾ ಕೋರ್ಟ್​ನಲ್ಲಿ ಇನ್ನೆರಡು ದಿನಗಳಲ್ಲಿ ಪ್ರಕರಣದ ವಿಚಾರಣೆ ನಡೆಯುವ ಮುನ್ನವೇ ಇನ್ಸುರೆನ್ಸ್​ ಕಂಪನಿ ಸೋಮವಾರ ಒಪ್ಪಂದಕ್ಕೆ ಮುಂದಾಗಿದೆ ಎನ್ನಲಾಗ್ತಿದೆ.

ಹಣಕಾಸಿನ ಒಪ್ಪಂದ ಸೇರಿದಂತೆ ಒಪ್ಪಂದದ ಷರತ್ತುಗಳನ್ನು ಬಿಡುಗಡೆ ಮಾಡಿಲ್ಲ. ಆದರೆ, ಕೆಲವೇ ದಿನಗಳಲ್ಲಿ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ ಎಂದು ಹೇಳಲಾಗ್ತಿದೆ.

2018ರಲ್ಲಿ ಕೆಕೆಆರ್​ 9 ಕೋಟಿ 40 ಲಕ್ಷ ರೂ.ಗಳಿಗೆ ಸ್ಟಾರ್ಕ್​ ರನ್ನು ಖರೀದಿಸಿತ್ತು. ಆದರೆ ದಕ್ಷಿಣ ಅಫ್ರಿಕಾ ವಿರುದ್ಧದ ಸರಣಿ ವೇಳೆ ಅವರು ಗಾಯಗೊಂಡಿದ್ದರಿಂದ ಐಪಿಎಲ್​ನಲ್ಲಿ ಒಂದೂ ಪಂದ್ಯವನ್ನು ಆಡದೆ ತಪ್ಪಿಸಿಕೊಂಡಿದ್ದರು.

ಇದಕ್ಕೂ ಮುನ್ನ ತಮಗೆ 2020ರ ಐಪಿಎಲ್​ ನಿಂದ ಹೊರಗುಳಿದಿರುವುದಕ್ಕೆ ಪಶ್ಚಾತ್ತಾಪವಿಲ್ಲ. ನನ್ನ ನಿರ್ಧಾರದಲ್ಲಿ ಬದಲಾವಣೆಯಿಲ್ಲ. ಸೆಪ್ಟಂಬರ್​ನಲ್ಲಿ ನಾನು ಐಪಿಎಲ್​ ನಡೆಯುವಾಗ ಸಂತೋಷದಿಂದ ಸಮಯ ಕಳೆಯಲಿದ್ದೇನೆ. ಮತ್ತು ಮುಂದಿನ ಬೇಸಿಗೆ ಕ್ರಿಕೆಟ್​ಗೆ ಸಿದ್ಧವಾಗಲಿದ್ದೇನೆ ಎಂದು ಸ್ಟಾರ್ಕ್​ ತಿಳಿಸಿದ್ದರು.

ಐಪಿಎಲ್​ ಮುಂದಿನ ವರ್ಷವೂ ಇರುತ್ತದೆ. ನನಗೆ ಅವಕಾಶ ಬಂದರೆ ಅಥವಾ ಜನರು ನಾನು ಆಡಬೇಕೆಂದು ಬಯಸಿದರೆ ಖಂಡಿತವಾಗಿಯೂ ಅದನ್ನು ಪರಿಗಣಿಸಲಿದ್ದೇನೆ ಎಂದು ಹೇಳಿದ್ದಾರೆ.

ABOUT THE AUTHOR

...view details