ಕರ್ನಾಟಕ

karnataka

ETV Bharat / sports

ಪಾದಾರ್ಪಣೆ ಪಂದ್ಯದಲ್ಲೇ ಮಿಂಚಿದ ಶುಬ್ಮನ್ ಗಿಲ್, ಸಿರಾಜ್​ - India vs Australia border gavaskar

ಪಂದ್ಯದಲ್ಲಿ ರಿಷಭ್​ ಪಂತ್ ಮತ್ತು ಜಡೇಜಾ ತಂಡಕ್ಕೆ ಕಮ್​ಬ್ಯಾಕ್​ ಮಾಡಿದರೆ, ಪಂಜಾಬ್​ನ ಶುಬ್ಮನ್​ ಗಿಲ್​ 297ನೇ ಆಟಗಾರ ಮತ್ತು ಹೈದರಾಬಾದ್​ನ ಮೊಹಮ್ಮದ್​ ಸಿರಾಜ್ 298ನೇ ಆಟಗಾರನಾಗಿ ಭಾರತ ತಂಡದ ಪರ​ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು.

ಸಿರಾಜ್-ಗಿಲ್ ಪದಾರ್ಪಣೆ
ಸಿರಾಜ್-ಗಿಲ್ ಪದಾರ್ಪಣೆ

By

Published : Dec 26, 2020, 3:45 PM IST

ಮೆಲ್ಬೋರ್ನ್​: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಶುಬ್ಮನ್ ಗಿಲ್​ ಮತ್ತು ಹೈದರಾಬಾದ್​ನ ಮೊಹಮ್ಮದ್ ಸಿರಾಜ್​ ಅದ್ಭುತ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ.

ಎಂಸಿಜೆಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಬಾಕ್ಸಿಂಗ್​ ಡೇ ಟೆಸ್ಟ್​ನಲ್ಲಿ ಮುಖಾಮುಖಾಯಾಗಿವೆ. ಮೊದಲ ಟೆಸ್ಟ್​ನಲ್ಲಿ ಭಾರತ 8 ವಿಕೆಟ್​ಗಳಿಂದ ಸೋಲು ಕಂಡಿರುವುದರಿಂದ ಇಂದಿನ ಪಂದ್ಯದಲ್ಲಿ 4 ಬದಲಾವಣೆ ಮಾಡಿಕೊಂಡು ಕಣಕ್ಕಿಳಿದಿದೆ. ವೈಯಕ್ತಿಕ ಕಾರಣಗಳಿಂದ ತಂಡದಿಂದ ಕೊಹ್ಲಿ ಹೊರಬಂದಿದ್ದಾರೆ. ಗಾಯಗೊಂಡು ಶಮಿ ಹೊರಗುಳಿದಿದ್ದರೆ, ಶಾ ಮತ್ತು ಸಹಾರನ್ನು ಟೀಮ್​ ಮ್ಯಾನೇಜ್​ಮೆಂಟ್​ ತಂಡದಿಂದ ಕೈಬಿಟ್ಟಿದೆ.

ಇನ್ನು ಪಂದ್ಯದಲ್ಲಿ ರಿಷಭ್​ ಪಂತ್ ಮತ್ತು ಜಡೇಜಾ ತಂಡಕ್ಕೆ ಕಮ್​ಬ್ಯಾಕ್​ ಮಾಡಿದರೆ, ಪಂಜಾಬ್​ನ ಶುಬ್ಮನ್​ ಗಿಲ್​ 297ನೇ ಆಟಗಾರ ಮತ್ತು ಹೈದರಾಬಾದ್​ನ ಮೊಹಮ್ಮದ್​ ಸಿರಾಜ್ 298ನೇ ಆಟಗಾರನಾಗಿ ಭಾರತ ತಂಡದ ಪರ​ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದರು.

ಸಿರಾಜ್​ 15 ಓವರ್​ಗಳಲ್ಲಿ 15 ರನ್​ ನೀಡಿ ಅಪಾಯಕಾರಿ ಬ್ಯಾಟ್ಸ್​ಮನ್​ ಮಾರ್ನಸ್​ ಲಾಬುಶೇನ್​ ಮತ್ತು ಆಲ್​ರೌಂಡರ್​ ಕ್ಯಾಮರೋನ್ ಗ್ರೀನ್​ ವಿಕೆಟ್​ ಪಡೆದರು. ಶುಬ್ಮನ್​ ಗಿಲ್​ 38 ಎಸೆತಗಳಲ್ಲಿ ಆಕರ್ಷಕ 5 ಬೌಂಡರಿಗಳ ನೆರವಿನಿಂದ ಅಜೇಯ 28 ರನ್​ಗಳಿಸಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ. ಮೊದಲ ದಿನವೇ ಅವರ ಬ್ಯಾಟಿಂಗ್​ನಲ್ಲಿ ಆತ್ಮವಿಶ್ವಾಸ ಕಂಡುಬಂದಿದ್ದು 2ನೇ ದಿನ ದೊಡ್ಡ ಮೊತ್ತವನ್ನು ನಿರೀಕ್ಷಿಸಬಹುದಾಗಿದೆ.

ಮೊದಲ ದಿನ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 72.3 ಓವರ್​ಗಳಲ್ಲಿ 195 ರನ್ ​ಗಳಿಸಿದೆ. ಜಸ್​ಪ್ರೀತ್ ಬುಮ್ರಾ 4, ಅಶ್ವಿನ್​ 3, ಸಿರಾಜ್​ 2 ಹಾಗೂ ಜಡೇಜಾ 1 ವಿಕೆಟ್ ಪಡೆದು ಮಿಂಚಿದರು. ಆಸೀಸ್ ಪರ ಲಾಬುಶೇನ್​(48) ಗರಿಷ್ಠ ರನ್​ಗಳಿಸಿದರು.

ABOUT THE AUTHOR

...view details