ಕರ್ನಾಟಕ

karnataka

ETV Bharat / sports

3ನೇ ಏಕದಿನ ಪಂದ್ಯಕ್ಕೂ ಮುನ್ನ ಭಾರತೀಯ ಆಟಗಾರರ ಮೋಜು-ಮಸ್ತಿ ಹೀಗಿದೆ.. - ಅಯ್ಯರ ಸ್ವಿಮ್ಮಿಂಗ್​

ವೆಸ್ಟ್​ ಇಂಡೀಸ್​ ವಿರುದ್ಧದ ಎರಡನೇ ಏಕದಿನ ಪಂದ್ಯ ಗೆದ್ದು 1-0ಯಲ್ಲಿ ಸರಣಿ ಮುನ್ನಡೆ ಸಾಧಿಸಿದ ಖುಷಿಯಲ್ಲಿರುವ ಭಾರತೀಯರು ಸಿಕ್ಕಿರುವ ಬಿಡುವನ್ನು ಎಂಜಾಯ್​ ಮಾಡುತ್ತಿದ್ದಾರೆ.

Indian players

By

Published : Aug 13, 2019, 1:44 PM IST

Updated : Aug 14, 2019, 8:55 AM IST

ಪೋರ್ಟ್​ ಆಪ್​ ಸ್ಪೇನ್​:ವೆಸ್ಟ್​ ಇಂಡೀಸ್​ ವಿರುದ್ಧದ ಎರಡನೇ ಏಕದಿನ ಪಂದ್ಯ ಗೆದ್ದು 1-0ಯಲ್ಲಿ ಸರಣಿ ಮುನ್ನಡೆ ಸಾಧಿಸಿದ ಖುಷಿಯಲ್ಲಿರುವ ಭಾರತೀಯರು ಸಿಕ್ಕಿರುವ ಬಿಡುವನ್ನು ಎಂಜಾಯ್​ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ.

ರೋಹಿತ್ ಶರ್ಮಾ, ರಿಷಭ್​ ಪಂತ್,​ ಶಿಖರ್​ ಧವನ್​, ಶ್ರೇಯಸ್​ ಅಯ್ಯರ್​, ಮಯಾಂಕ್​ ಅಗರ್​ವಾಲ್​ ಹಾಗೂ ಕೆಲವು ವೆಸ್ಟ್​ ಇಂಡೀಸ್​ ಆಟಗಾರರ ಜೊತೆ ಸೇರಿ ನೀರಿನಲ್ಲಿ ಆಟವಾಡುತ್ತಿರುವ ವಿಡಿಯೋವನ್ನು ಧವನ್​ ಹಾಗೂ ಅಯ್ಯರ್​ ಶೇರ್ ಮಾಡಿಕೊಂಡಿದ್ದಾರೆ.

ಭಾರತೀಯ ಆಟಗಾರರ ಜೊತೆ ಪೊಲಾರ್ಡ್​, ಪೂರನ್..​

ಭಾನುವಾರ ಟ್ರೆನಿಟಾಡ್​ ಮತ್ತು ಟೊಬ್ಯಾಗೋದ​ ಪೋರ್ಟ್​ ಆಫ್​ ಸ್ಪೇನ್​ನ ಐಲ್ಯಾಂಡ್​ಗೆ ಭೇಟಿ ನೀಡಿದ್ದಾರೆ. ಐಪಿಎಲ್​ನ ಸ್ಟಾರ್​ ವಿಂಡೀಸ್​ ಪ್ಲೇಯರ್​ಗಳಾದ ನಿಕೋಲಸ್​ ಪೂರನ್​, ಪೋಲಾರ್ಡ್​ ಕೂಡ ಭಾರತೀಯರ ಜೊತೆ ಮೋಜು ಮಸ್ತಿಯಲ್ಲಿ ಪಾಲ್ಗೊಂಡಿದ್ದಾರೆ. ವಿಡಿಯೋದಲ್ಲಿ ಎಲ್ಲರೂ ಬಾಲಿವುಡ್​ ಸಾಂಗ್​ಗಳನ್ನು ಹಾಡುತ್ತಾ ಕುಣಿಯುತ್ತಾ ರಂಜಿಸಿದ್ದಾರೆ. ವಿಶ್ವಕಪ್​ ನಂತರ ಮೊದಲ ಪ್ರವಾಸ ಕೈಗೊಂಡಿರುವ ಭಾರತೀಯ ತಂಡ ಟಿ-20 ಸರಣಿಯನ್ನು 3-0ಯಲ್ಲಿ ಗೆದ್ದರೆ, ಏಕದಿನ ಸರಣಿಯನ್ನು 1-0ಯಲ್ಲಿ ಲೀಡ್​ ಪಡೆದುಕೊಂಡಿದೆ.

Last Updated : Aug 14, 2019, 8:55 AM IST

ABOUT THE AUTHOR

...view details