ಸೌಥಂಪ್ಟನ್:ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಬಾಂಗ್ಲಾದ ಆಲ್ರೌಂಡರ್ ಶಕೀಬ್ ಅಲ್ ಹಸನ್ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಮಿಂಚು ಹರಿಸುತ್ತಿದ್ದು, ಅಫ್ಘಾನಿಸ್ತಾನ ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ ಯುವರಾಜ್ ಸಿಂಗ್ ದಾಖಲೆ ಸರಿಗಟ್ಟಿದ್ದಾರೆ.
ಯುವಿ ದಾಖಲೆ ಸರಿಗಟ್ಟಿದ ಶಕೀಬ್... ಒಂದೇ ಪಂದ್ಯದಲ್ಲಿ ಮೂಡಿ ಬಂತು ಈ ರೆಕಾರ್ಡ್! - ಇಂಗ್ಲೆಂಡ್
ಪ್ರಸಕ್ತ ಸಾಲಿನ ಐಸಿಸಿ ಏಕದಿನ ವಿಶ್ವಕಪ್ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಮಿಂಚು ಹರಿಸುತ್ತಿರುವ ಬಾಂಗ್ಲಾದೇಶದ ಆಲ್ರೌಂಡರ್ ಶಕೀಬ್ ಅಲ್ ಹಸನ್ ಹೊಸದೊಂದು ದಾಖಲೆ ನಿರ್ಮಾಣ ಮಾಡಿದ್ದಾರೆ.
ಈಗಾಗಲೇ ಬಾಂಗ್ಲಾದೇಶ ಪರ ವಿಶ್ವಕಪ್ ಮಹಾ ಟೂರ್ನಿಯಲ್ಲಿ ಸಾವಿರ ರನ್ ಪೂರೈಕೆ ಮಾಡಿ ದಾಖಲೆ ಬರೆದಿರುವ ಶಕೀಬ್, ನಿನ್ನೆಯ ಪಂದ್ಯದಲ್ಲಿ 50+ ರನ್ ಹಾಗೂ 5ವಿಕೆಟ್ ಪಡೆದುಕೊಂಡು ಯುವಿ ದಾಖಲೆ ಸರಿಗಟ್ಟಿದ್ದಾರೆ. ಈ ಹಿಂದೆ ಯುವರಾಜ್ ಸಿಂಗ್ 2011ರ ವಿಶ್ವಕಪ್ನಲ್ಲಿ ಐರ್ಲೆಂಡ್ ವಿರುದ್ಧ 50+ ರನ್ ಹಾಗೂ 5 ವಿಕೆಟ್ ಪಡೆದುಕೊಂಡಿದ್ದರು. ಅದೇ ರೆಕಾರ್ಡ್ ಇದೀಗ ಶಕೀಬ್ ಮಾಡಿದ್ದಾರೆ.
ವಿಶ್ವಕಪ್ನಲ್ಲಿ 400+ರನ್ ಸಿಡಿಸುವ ಜತೆಗೆ 10 ವಿಕೆಟ್ ಪಡೆದುಕೊಂಡಿರುವ ಮೊದಲ ಪ್ಲೇಯರ್ ಎಂಬ ಖ್ಯಾತಿಗೂ ಶಕೀಬ್ ಪಾತ್ರರಾಗಿದ್ದು, ಈಗಾಗಲೇ ಪ್ರಸಕ್ತ ಸಾಲಿನ ವಿಶ್ವಕಪ್ನಲ್ಲಿ 476ರನ್ ಹಾಗೂ 10 ವಿಕೆಟ್ ಪಡೆದುಕೊಂಡಿದ್ದಾರೆ. ವಿಶೇಷವೆಂದರೆ ಇದೇ ವಿಶ್ವಕಪ್ನಲ್ಲಿ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಶತಕ ಸಿಡಿಸಿರುವ ಶಕೀಬ್ ಈ ರೀತಿಯ ದಾಖಲೆ ಬರೆದ ಬಾಂಗ್ಲಾದ ಮೊದಲ ಕ್ರಿಕೆಟಿಗನಾಗಿದ್ದಾರೆ. 2015ರ ವಿಶ್ವಕಪ್ನಲ್ಲೂ ಶಕೀಬ್ 10 ಓವರ್ನಲ್ಲಿ ಪ್ರಮುಖ 5ವಿಕೆಟ್ ಪಡೆದುಕೊಂಡಿದ್ದರು.