ಕರ್ನಾಟಕ

karnataka

ETV Bharat / sports

ಐಪಿಎಲ್ -2020 ಮುಂದೂಡುವ ಮನವಿಯ ತುರ್ತು ವಿಚಾರಣೆ ಇಲ್ಲ: ಸುಪ್ರೀಂ - ಕೊರೋನವೈರಸ್

ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಮುಂದೂಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ತುರ್ತು ವಿಚಾರಣೆ ನಡೆಸಬೇಕೆಂದು ಸಲ್ಲಿಸಿದ ಮನವಿಯನ್ನ ನ್ಯಾಯಮೂರ್ತಿಗಳಾದ ಯು ಯು ಲಲಿತ್ ಮತ್ತು ಅನಿರುದ್ಧ ಬೋಸ್ ಅವರ ನ್ಯಾಯಪೀಠ ನಿರಾಕರಿಸಿದೆ. ಸಾಮಾನ್ಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತೆ ನಿರ್ದೇಶನ ನೀಡಿದೆ.

ipl
ipl

By

Published : Mar 12, 2020, 2:42 PM IST

ನವದೆಹಲಿ: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಮುಂದೂಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್​ ನಿರಾಕರಿಸಿದೆ.

ನ್ಯಾಯಮೂರ್ತಿಗಳಾದ ಯು ಯು ಲಲಿತ್ ಮತ್ತು ಅನಿರುದ್ಧ ಬೋಸ್ ಅವರು ಈ ವಿಷಯವನ್ನು ಸಾಮಾನ್ಯ ಪೀಠದ ಮುಂದೆ ಮಾರ್ಚ್ 16ರಂದು ತಿಳಿಸಬೇಕೆಂದು ಅರ್ಜಿದಾರರಿಗೆ ಸೂಚನೆ ನೀಡಿತು. ಹೋಳಿ ವಿರಾಮದ ಬಳಿಕ ಮಾರ್ಚ್​ 16ರಂದು ಕೋರ್ಟ್ ರಿ ಓಪನ್ ಆಗಲಿದೆ.

" ನ್ಯಾಯಾಲಯ ರಿ ಓಪನ್ ಆದ ಬಳಿಕ ಈ ವಿಷಯದ ಕುರಿತು ಅರ್ಜಿ ಸಲ್ಲಿಸಬಹುದು. ಮಾರ್ಚ್ 16ರಂದು ಈ ವಿಷಯವನ್ನು ನ್ಯಾಯಾಲಯದ ಮುಂದೆ ಉಲ್ಲೇಖಿಸಬಹುದು" ಎಂದು ಅರ್ಜಿಯನ್ನು ಸಲ್ಲಿಸಿದ ನ್ಯಾಯಪೀಠದ ವಕೀಲ ಮೋಹನ್ ಬಾಬು ಅಗರ್ವಾಲ್​ಗೆ ನ್ಯಾಯಮೂರ್ತಿಗಳು ಹೇಳಿದರು.

ಐಪಿಎಲ್ - 2020 ಮಾರ್ಚ್ 29ರಿಂದ ಪ್ರಾರಂಭವಾಗಲಿದ್ದು, ಕ್ರಿಕೆಟ್ ಪಂದ್ಯದಲ್ಲಿ 40,000ಕ್ಕೂ ಅಧಿಕ ಪ್ರೇಕ್ಷಕರಿರುತ್ತಾರೆ. ಈ ಸಂದರ್ಭದಲ್ಲಿ ರೋಗ ಹರಡದಂತೆ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಮೋಹನ್ ಬಾಬು ಅಗರ್ವಾಲ್​ ಅರ್ಜಿಯಲ್ಲಿ ಹೇಳಿದ್ದರು.

ABOUT THE AUTHOR

...view details