ಕರ್ನಾಟಕ

karnataka

ETV Bharat / sports

ವಿವಾದಾತ್ಮಕ ಕ್ಯಾಚ್​ಗೆ ಸಾಮ್ಸನ್​ ಬಲಿ: ಟ್ವಿಟರ್​ನಲ್ಲಿ ಅಭಿಮಾನಿಗಳ ಆಕ್ರೋಶ - ಐಪಿಎಲ್ ಲೈವ್

ಆರ್​ಸಿಬಿ ಬೆಂಬಲಿಗರು ಚೆಂಡು ಚಹಾಲ್​ ಹಿಡಿದ ಕ್ಯಾಚ್​ನಲ್ಲಿ ಯಾವುದೇ ಲೋಪವಿಲ್ಲ ಎಂದು ಟ್ವೀಟ್ ಮಾಡುತ್ತಿದ್ದಾರೆ. ಕುತೂಹಲ ಕೆರಳಿಸಿರುವ ಪಂದ್ಯದಲ್ಲಿ ಸಂಜು ಸಾಮ್ಸನ್​ ಕಡಿಮೆ ಮೊತ್ತಕ್ಕೆ ಔಟಾಗಿರುವುದು ಅಭಿಮಾನಿಗಳಿಗೆ ಬೇಸರ ತಂದಿದೆ.

ವಿವಾದಾದ್ಮಕ ಕ್ಯಾಚ್​ಗೆ ಸಾಮ್ಸನ್​ ಬಲಿ
ವಿವಾದಾದ್ಮಕ ಕ್ಯಾಚ್​ಗೆ ಸಾಮ್ಸನ್​ ಬಲಿ

By

Published : Oct 3, 2020, 4:44 PM IST

Updated : Oct 3, 2020, 9:03 PM IST

ಅಬುಧಾಬಿ:ರಾಯಲ್ಸ್​ ಚಾಲೆಂಜರ್ಸ್​ ಬೆಂಗಳೂರು ತಂಡದ ವಿರುದ್ಧ ಅಬುಧಾಬಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಸಂಜು ಸಾಮ್ಸನ್​ ಕೇವಲ 4 ರನ್​ಗಳಿಸಿ ಔಟಾಗಿದ್ದಾರೆ. ಆದರೆ ಅವರು ಔಟಾದ ರೀತಿ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ಚಹಾಲ್​ ಎಸೆದ 5 ನೇ ಓವರ್​ನ ಮೊದಲ ಎಸೆತದಲ್ಲಿ ಸಂಜು ಸಾಮ್ಸನ್​ ಡಿಫೆನ್ಸ್​ ಮಾಡಿದರು. ಚೆಂಡು ನೇರವಾಗಿ ಚಹಾಲ್​ ಕೈಸೇರಿತು. ಆದರೆ, ಚಹಾಲ್​ ಕ್ಯಾಚ್​ ಹಿಡಿಯುವ ಸಂದರ್ಭದಲ್ಲಿ ಚೆಂಡು ನೆಲಕ್ಕೆ ತಾಗಿದಂತೆ ಕಾಣುತ್ತಿತ್ತು. ಎರಡು ಮೂರು ಬಾರಿ ರಿಪ್ಲೇ ನೋಡಿದ ಮೂರನೇ ಅಂಪೈರ್​ ಕೂಡ ಸ್ಪಷ್ಟವಾಗಿ ತೀರ್ಪು ನೀಡಲಾಗದೇ ಮೈದಾನದ ಅಂಪೈರ್​ ತೀರ್ಮಾನವನ್ನೇ ಎತ್ತಿ ಹಿಡಿದರು.

ಆದರೆ, ಚೆಂಡು ನೆಲಕ್ಕೆ ತಾಗಿರುವುದು ಸ್ಪಷ್ಟವಾಗಿದೆ. ಕ್ರಿಕೆಟ್​ ನಿಯಮಗಳ ಪ್ರಕಾರ ಅಸ್ಪಷ್ಟವಾದರೆ ಅದರ ಲಾಭವನ್ನು ಬ್ಯಾಟ್ಸ್​ಮನ್​ಗೆ ನೀಡಬೇಕು. ಆದರೆ, ಇಲ್ಲಿ ಸಾಮ್ಸನ್​ಗೆ ಅನ್ಯಾಯವಾಗಿದೆ ಎಂದು ಅಂಪೈರ್ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಆರ್​ಸಿಬಿ ಬೆಂಬಲಿಗರು ಚೆಂಡು ಚಹಾಲ್​ ಹಿಡಿದ ಕ್ಯಾಚ್​ನಲ್ಲಿ ಯಾವುದೇ ಲೋಪವಿಲ್ಲ ಎಂದು ಟ್ವೀಟ್ ಮಾಡುತ್ತಿದ್ದಾರೆ. ಕುತೂಹಲ ಕೆರಳಿಸಿರುವ ಪಂದ್ಯದಲ್ಲಿ ಸಂಜು ಸಾಮ್ಸನ್​ ಕಡಿಮೆ ಮೊತ್ತಕ್ಕೆ ಔಟಾಗಿರುವುದು ಅಭಿಮಾನಿಗಳಿಗೆ ಬೇಸರ ತಂದಿದೆ.

ಸಾಮ್ಸನ್​ ಮೊದಲ ಪಂದ್ಯದಲ್ಲಿ 74, ಎರಡನೇ ಪಂದ್ಯದಲ್ಲಿ 85 ರನ್​ಗಳಿಸಿದ್ದರೆ, 3 ಮತ್ತು 4 ನೇ ಪಂದ್ಯದಲ್ಲಿ 8 ಮತ್ತು 4 ರನ್​ಗಳಿಗೆ ಔಟಾಗಿದ್ದಾರೆ.

Last Updated : Oct 3, 2020, 9:03 PM IST

ABOUT THE AUTHOR

...view details