ಕರ್ನಾಟಕ

karnataka

ETV Bharat / sports

'ಕ್ರಿಕೆಟ್ ದೇವರ' ಹೃದಯ ವೈಶಾಲ್ಯತೆ: 4 ಸಾವಿರ ಕಾರ್ಮಿಕ ಕುಟುಂಬಕ್ಕೆ ಸಚಿನ್‌ ಆರ್ಥಿಕ ಸಹಾಯ - ಕೊರೊನಾ ಪರಿಹಾರ ನಿಧಿ

ವಿಶ್ವ ಕ್ರಿಕೆಟ್‌ನ‌ ದಂತಕಥೆ ಸಚಿನ್ ತೆಂಡೂಲ್ಕರ್‌​ ಯಾವುದೇ ಸವಲತ್ತುಗಳಿಲ್ಲದ ನಾಲ್ಕು ಸಾವಿರ ಕಡು ಬಡವರು ಹಾಗೂ ಬಿಎಂಸಿ ವ್ಯಾಪ್ತಿಯ ಶಾಲಾ ಮಕ್ಕಳಿಗೆ ಉದಾರವಾಗಿ ದೇಣಿಗೆ ನೀಡುವ ಮೂಲಕ ನೆರವಾಗಿದ್ದಾರೆ.

ಸಚಿನ್​ ತೆಂಡೂಲ್ಕರ್​ ದೇಣಿಗೆ
ಸಚಿನ್​ ತೆಂಡೂಲ್ಕರ್​ ದೇಣಿಗೆ

By

Published : May 9, 2020, 12:18 PM IST

ಮುಂಬೈ: ವಿಶ್ವ ಪ್ರಸಿದ್ಧ ಕ್ರಿಕೆಟಿಗ​​ ಸಚಿನ್​ ತೆಂಡೂಲ್ಕರ್​ ಕೊರೊನಾದಿಂದ ಸಂಕಷ್ಟಕ್ಕೊಳಗಾಗಿರುವ ಕೂಲಿ ಕಾರ್ಮಿಕರಿಗೆ ನೆರವಾಗುವ ಮೂಲಕ ಮತ್ತೆ ಹೃದಯ ವೈಶಾಲ್ಯತೆ ಮೆರೆದಿದ್ದಾರೆ.

ಈ ವಿಚಾರವನ್ನು ಟ್ವೀಟ್​ ಮೂಲಕ ತಿಳಿಸಿರುವ ಹೈಫೈವ್​ ಫೌಂಡೇಶನ್​, ಕ್ರೀಡಾ ಸಹಾನುಭೂತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಕ್ಕಾಗಿ ಸಚಿನ್ ತೆಂಡೂಲ್ಕರ್ ಅವರಿಗೆ ಧನ್ಯವಾದಗಳು. ನಮ್ಮ COVID-19 ನಿಧಿಗೆ ನೀವು ನೀಡಿದ ಉದಾರ ಕೊಡುಗೆಯಿಂದ ಬಿಎಂಸಿ ಶಾಲೆಗಳ ಮಕ್ಕಳು ಸೇರಿದಂತೆ ನಾಲ್ಕು ಸಾವಿರ ದೀನದಲಿತರಿಗೆ ಆರ್ಥಿಕವಾಗಿ ಸಹಾಯವಾಗಿದೆ ಎಂದು ತಿಳಿಸಿದ್ದಾರೆ.

ಇದಕ್ಕೆ ಸಚಿನ್ ಪ್ರತಿಕ್ರಿಯಿಸಿ, ದಿನಗೂಲಿ ಕಾರ್ಮಿಕರ ಕುಟುಂಬಕ್ಕೆ ನೆರವಾಗುತ್ತಿರುವ ಹೈಫೈವ್ ತಂಡಕ್ಕೆ ಒಳ್ಳೆಯದಾಗಲಿ ಎಂದು ಟ್ವೀಟ್ ಮಾಡಿದ್ದಾರೆ.

ಇದಕ್ಕೂ ಮೊದಲು ಪ್ರಧಾನಮಂತ್ರಿ ಪರಿಹಾರ ನಿಧಿ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಪರಿಹಾರ ನಿಧಿಗೆ ಸಚಿನ್‌ ತಲಾ 25 ಲಕ್ಷ ದೇಣಿಗೆ ನೀಡಿದ್ದರು. ಜೊತೆಗೆ 5,000 ಮಂದಿಗೆ ಆಹಾರ ವ್ಯವಸ್ಥೆ ಕಲ್ಪಿಸುವ ಮೂಲಕ ಕೊರೊನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿದ್ದರು.

ABOUT THE AUTHOR

...view details