ಮುಂಬೈ: ವಿಶ್ವದಾದ್ಯಂತ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿವಿಧ ಕ್ರಿಕೆಟ್ ಆಡುವ ರಾಷ್ಟ್ರಗಳ ಆಟಗಾರರು ಸೇರಿ ನಡೆಸುತ್ತಿರುವ ರೋಡ್ ಸೇಫ್ಟಿ ಟಿ20 ಸರಣಿಗೆ ಭಾರತ ಲೆಜೆಂಡ್ ತಂಡದ ಆಟಗಾರರ ಪಟ್ಟಿ ಹೊರಬಿದ್ದಿದೆ.
ರಸ್ತೆ ಅಪಘಾತ ಸುರಕ್ಷತೆ ಬಗ್ಗೆ ಅರಿವು ಮೂಡಿಸಲು ವಿಶ್ವದ ಪ್ರಸಿದ್ಧ ಮಾಜಿ ಕ್ರಿಕೆಟಿರಾದ ರಿಕಿ ಪಾಂಟಿಂಗ್, ಬ್ರಿಯಾನ್ ಲಾರ, ಜಾಂಟಿ ರೋಡ್ಸ್ , ಬ್ರೆಟ್ ಲೀ, ತಿಲಕರತ್ನೆ ದಿಲ್ಶನ್ ಸೇರಿದಂತೆ ಶ್ರೀಲಂಕಾ, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ಹಾಗೂ ಭಾರತ ತಂಡದ ಲೆಜೆಂಡರಿ ಕ್ರಿಕೆಟಿಗರು ಈ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ.
ಸಚಿನ್ ತೆಂಡೂಲ್ಕರ್ ನಾಯಕರಾಗಿರುವ ಭಾರತ ಲೆಜೆಂಡ್ ತಂಡದ 12 ಸದಸ್ಯರ ಪಟ್ಟಿ ಬಿಡುಗಡೆಯಾಗಿದ್ದು, ಸೆಹ್ವಾಗ್, ಯುವರಾಜ್ ಕೂಡ ಈ ಮಹತ್ವದ ಟೂರ್ನಿಯಲ್ಲಿ ಭಾಗವಹಿಸಿದ್ದಾರೆ.