ಕರ್ನಾಟಕ

karnataka

ETV Bharat / sports

ನನ್ನನ್ನು ನಾನೇ ದೂಷಿಸಿಕೊಳ್ಳುವ ಸಮಯದಲ್ಲಿ ಧೋನಿ ಮಾತು ಪ್ರೇರಣೆಯಾಯಿತು: ಗಾಯಕ್ವಾಡ್​ - ಚೆನ್ನೈ ಸೂಪರ್ ಕಿಂಗ್ಸ್​

ಮೊದಲ ಮೂರು ಪಂದ್ಯಗಳಲ್ಲಿ 0,0,5 ರನ್​ಗಳಿಸಿದ್ದ ಅವರು ನಂತರ 3 ಪಂದ್ಯಗಳಲ್ಲಿ 65, 72 ಮತ್ತು 62 ರನ್​ಗಳಿಸಿ ಮಿಂಚಿದರು. ಕೊಹ್ಲಿ, ವಿಲಿಯರ್ಸ್ ನಂತರ ಹ್ಯಾಟ್ರಿಕ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ 3ನೇ ಬ್ಯಾಟ್ಸ್​ಮನ್ ಎಂಬ ದಾಖಲೆಗೂ ಪಾತ್ರರಾದರು.

ಧೋನಿ- ರುತುರಾಜ್ ಗಾಯಕ್ವಾಡ್​
ಧೋನಿ- ರುತುರಾಜ್ ಗಾಯಕ್ವಾಡ್​

By

Published : Nov 12, 2020, 11:36 PM IST

ಮುಂಬೈ:ಐಪಿಎಲ್​ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಎಂದೆಂದು ಅನುಭವಿಸದ ವೈಫಲ್ಯವನ್ನು ಈ ಬಾರಿ ಅನುಭವಿಸಿತ್ತು. ಮೊದಲ ಬಾರಿಗೆ ಲೀಗ್​ನಲ್ಲೇ ಹೊರಬಿದ್ದಿತು. ಆದರೆ ಕೊನೆಯ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಕೊನೆಯ ಸ್ಥಾನಿಯಾಗುವ ಅಪಮಾನದಿಂದ ಪಾರಾಗಿತ್ತು.

ಆದರೆ ಕೊನೆಯ ಮೂರು ಪಂದ್ಯಗಳನ್ನು ಗೆಲ್ಲಲು ಕಾರಣವಾಗಿದ್ದು, 22 ವರ್ಷದ ರುತುರಾಜ್ ಗಾಯಕ್ವಾಡ್. ಈ ಮೂರು ಪಂದ್ಯಗಳಲ್ಲೂ ಅರ್ಧಶತಕ ಸಿಡಿಸಿ ಚೆನ್ನೈಗೆ ಕೊನೆ ಸ್ಥಾನಿಯಾಗುವುದನ್ನು ತಪ್ಪಿಸಿದ್ದರು. ಸತತ 2 ಪಂದ್ಯಗಳಲ್ಲಿ ಡಕ್ಔಟ್​ ಆಗಿದ್ದ ಈ ಯುವ ಆಟಗಾರ ದಿಢೀರ್ ಅಂತ ಅದ್ಭುತ ಪ್ರದರ್ಶನ ನೀಡಲು ಕಾರಣರಾಗಿದ್ದು ನಾಯಕ ಧೋನಿ ಎಂದು ಸ್ವತಃ ಗಾಯಕ್ವಾಡ್​ ಸ್ಫೋರ್ಟ್ಸ್​ಸ್ಟಾರ್​ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

" ಮುಂಬೈ ಇಂಡಿಯನ್ಸ್​ ವಿರುದ್ಧದ ಪಂದ್ಯದಲ್ಲಿ ಡಕ್​ಔಟ್​ ಆಗಿ ನನ್ನನ್ನು ದೂಷಣೆ ಮಾಡಿಕೊಳ್ಳುತ್ತಿದ್ದೆ. ಆ ಸಂದರ್ಭದಲ್ಲಿ ಧೋನಿ ಭಾಯ್ ನನ್ನ ಬಳಿ ಬಂದರು. ಮುಂದಿನ ಮೂರು ಪಂದ್ಯಗಳಲ್ಲೂ ನೀನು ಆಡಲಿದ್ದೀಯ. ನೀನು ರನ್​ ಗಳಿಸಿದರೂ ಅಥವಾ ವೈಫಲ್ಯ ಅನುಭವಿಸಿದರೂ ತಂಡದಲ್ಲಿರುತ್ತೀಯ. ಉತ್ತಮವಾಗಿ ಆಡಲು ಪ್ರಯತ್ನಿಸು ಮತ್ತು ಎಲ್ಲಾ ಪಂದ್ಯಗಳನ್ನು ಆನಂದಿಸು" ಎಂದು ​ತಿಳಿಸಿದರು.

ಕ್ರಿಕೆಟ್​ನಲ್ಲಿ ಅಪ್​ ಅಂಡ್​ ಡೌನ್​ ಇರುತ್ತದೆ. ಇದರೆ ಬಗ್ಗೆ ಯೋಚಿಸಬೇಡ. ನಿನ್ನ ಆಟವನ್ನು ಆನಂದಿಸು ಎಂದು ಧೋನಿ ಭಾಯ್ ಹೇಳಿದರು. ಈ ಮಾತುಕತೆಯ ನಂತರ ನನ್ನ​ ಆಲೋಚನೆಗಳು ಬದಲಾದವು ಎಂದು ಗಾಯಕ್ವಾಡ್​ ಹೇಳಿದ್ದಾರೆ.

ಮೊದಲ ಮೂರು ಪಂದ್ಯಗಳಲ್ಲಿ 0,0,5 ರನ್​ಗಳಿಸಿದ್ದ ಅವರು ನಂತರ 3 ಪಂದ್ಯಗಳಲ್ಲಿ 65, 72 ಮತ್ತು 62 ರನ್​ಗಳಿಸಿ ಮಿಂಚಿದರು. ಕೊಹ್ಲಿ, ವಿಲಿಯರ್ಸ್ ನಂತರ ಹ್ಯಾಟ್ರಿಕ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ 3ನೇ ಬ್ಯಾಟ್ಸ್​ಮನ್ ಎಂಬ ದಾಖಲೆಗೂ ಪಾತ್ರರಾದರು.

ABOUT THE AUTHOR

...view details