ಬೆಂಗಳೂರು:ತನ್ನ ಮೊದಲ ಪಂದ್ಯದಲ್ಲೇ ಕಳಪೆ ಪ್ರದರ್ಶನ ನೀಡಿ ಚೆನ್ನೈ ವಿರುದ್ಧ ಸೋಲು ಕಂಡಿರುವ ಆರ್ಸಿಬಿ ನಾಳೆ ಬಲಿಷ್ಠ ಮುಂಬೈ ತಂಡವನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎದುರಿಸಲಿದೆ.
ಉದ್ಘಾಟನಾ ಪಂದ್ಯದಲ್ಲಿ ಕೇವಲ 70 ರನ್ಗೆ ಆಲೌಟ್ ಆಗುವ ಮೂಲಕ ಹಿನಾಯವಾಗಿ ಸೋಲನುಭವಿಸಿದ್ದ ಆರ್ಸಿಬಿ ನಾಳೆ ತವರಿನಲ್ಲಿ ಮುಂಬೈಗೆ ಸೋಲುಣಿಸುವ ತವಕದಿಲ್ಲಿದೆ.
ಮುಂಬೈ ಕೂಡ ತನ್ನ ಮೊದಲ ಪಂದ್ಯದಲ್ಲಿ ಡೆಲ್ಲಿ ವಿರುದ್ದ ನಡೆದ ಪಂದ್ಯದಲ್ಲಿ ಕಳಪೆ ಬೌಲಿಂಗ್ ಪ್ರದರ್ಶನ ನೀಡಿ ಸೋಲು ಕಂಡಿತ್ತು. ಇದೀಗ ತನ್ನ ಎರಡನೇ ಪಂದ್ಯದಲ್ಲಿ ಗೆಲುವಿನ ಅಳಿಗೆ ಮರಳುವ ತವಕದಲ್ಲಿದೆ.
ಐಪಿಎಲ್ ಮುಖಾಮುಖಿ:
ಆರ್ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ಇದುವರೆಗು ಐಪಿಎಲ್ನಲ್ಲಿ 25 ಪಂದ್ಯಗಳನ್ನಾಡಿದ್ದು ಮುಂಬೈ 16 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ ಆರ್ಸಿಬಿ 9 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
ಚಿನ್ನಸ್ವಾಮಿಯಲ್ಲೂ ಮುಂಬೈ ಸ್ಟ್ರಾಂಗ್:
ಆರ್ಸಿಬಿ ಮುಂಬೈ ವಿರುದ್ಧ ತವರಿನಲ್ಲೂ ಹಿನ್ನಡೆ ಅನುಭವಿಸಿದೆ. ಚಿನ್ನಸ್ವಾಮಿಯಲ್ಲಿ ಇದುವರೆಗೂ ಆಡಿರುವ 9 ಪಂದ್ಯಗಳಲ್ಲಿ 7 ರಲ್ಲಿ ಮುಂಬೈಇಂಡಿಯನ್ಸ್ ಗೆಲುವು ಸಾಧಿಸಿದೆ. ಆರ್ಸಿಬಿ 2 ರಲ್ಲಿ ಮಾತ್ರ ಗೆಲುವು ಪಡೆದಿದೆ.
ಹೆಚ್ಚು ರನ್
ಮುಂಬೈ ಹಾಗೂ ಆರ್ಸಿಬಿ ಮುಖಾಮುಖಿಯಲ್ಲಿ ಆರ್ಸ್ಬಿ ತಂಡದ ನಾಯಕ ಕೊಹ್ಲಿ ಹೆಚ್ಚು ರನ್ಗಳಿಸಿದ ಆಟಗಾರನಾಗಿದ್ದಾರೆ. ಕೊಹ್ಲಿ 629 ರನ್ಗಳಿಸಿದ್ದಾರೆ. ಮುಂಬೈ ಪರ 470 ರನ್ಗಳಿಸಿರುವ ಪೊಲಾರ್ಡ್ ಆರ್ಸಿಬಿ ವಿರುದ್ಧ ಗರಿಷ್ಠ ಸ್ಕೋರ್ ಮಾಡಿರುವ ಮುಂಬೈ ಬ್ಯಾಟ್ಸ್ಮನ್ ಆಗಿದ್ದಾರೆ.
ಹೆಚ್ಚು ವಿಕೆಟ್
ಮುಂಬೈ ತಂಡದ ಬೌಲಿಂಗ್ ಶಕ್ತಿಯಾಗಿರುವ ಜಸ್ಪ್ರಿತ್ ಬುಮ್ರಾ ಆರ್ಸಿಬಿ ವಿರುದ್ಧ13 ವಿಕೆಟ್ ಪಡೆದಿದ್ದರೆ, ಆರ್ಸಿಬಿಯ ಸ್ಪಿನ್ ಮಾಂತ್ರಿಕ ಯಜ್ವೇಂದ್ರ ಚಹಾಲ್ 12 ವಿಕೆಟ್ ಪಡೆದು ಟಾಪ್ ಬೌಲರ್ಗಳಾಗಿದ್ದಾರೆ.
ಸಂಭಾವ್ಯ ತಂಡ:
ವಿರಾಟ್ ಕೊಹ್ಲಿ(ಕ್ಯಾಪ್ಟನ್), ಪಾರ್ಥಿವ ಪಟೇಲ್,ಮೊಯಿನ್ಅಲಿ, ಎಬಿಡಿ ವಿಲಿಯರ್ಸ್,ಶಿಮ್ರಾನ್ ಹೆಟ್ಮೈರ್,ಶಿವಂ ದುಬೆ,ಕಾಲಿನ್ ಗ್ರ್ಯಾಂಡ್ಹೋಮ್,ಉಮೇಶ್ ಯಾದವ್,ಯಜುವೇಂದ್ರ ಚಹಲ್, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ
ಮುಂಬೈ ಇಂಡಿಯನ್ಸ್:
ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್, ಬೆನ್ಕಟಿಂಗ್, ಸೂರ್ಯಕುಮಾರ್ ಯಾಧವ್, ಯುವರಾಜ್ ಸಿಂಗ್, ಕೀರನ್ ಪೊಲ್ಲಾರ್ಡ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಮಿಚೆಲ್ ಮೆಕ್ಲನ್ಘಾನ್, ರಾಸಿಕ್ ಸಲಾಮ್, ಬುಮ್ರಾ.