ಹ್ಯಾಮಿಲ್ಟನ್:ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ರಾಸ್ ಟೇಲರ್ ನ್ಯೂಜಿಲ್ಯಾಂಡ್ ತಂಡದ ಆಧಾರಸ್ತಂಭ. ಸಂಕಷ್ಟಕ್ಕೆ ಸಿಲುಕಿದ ವೇಳೆ ತಂಡವನ್ನ ಗೆಲುವಿನ ದಡ ಸೇರಿಸಿ, ಎಲ್ಲಡೆಯಿಂದ ಭೇಷ್ ಎನಿಸಿಕೊಳ್ಳುವ ಈ ಪ್ಲೇಯರ್ ಇದೀಗ 100ನೇ ಟೆಸ್ಟ್ ಪಂದ್ಯ ಆಡಲು ಸನ್ನದ್ಧರಾಗಿದ್ದಾರೆ.
100ನೇ ಟೆಸ್ಟ್ ಆಡಲು ರಾಸ್ ಟೇಲರ್ ಸಜ್ಜು... ನನ್ನ ಸಾಧನೆ ಬಗ್ಗೆ ಗೌರವವಿದೆ ಎಂದ ಟೇಲರ್! - ರಾಸ್ ಟೇಲರ್
ನ್ಯೂಜಿಲ್ಯಾಂಡ್ ತಂಡದ ಆಧಾರಸ್ತಂಭ ಎಂದು ಕರೆಯಿಸಿಕೊಳ್ಳುವ ರಾಸ್ ಟೇಲರ್ ಅನೇಕ ಸಂದರ್ಭಗಳಲ್ಲಿ ತಂಡಕ್ಕೆ ಆಪತ್ಬಾಂಧವರಾಗಿ ತಂಡವನ್ನ ಗೆಲುವಿನ ದಡ ಸೇರಿಸಿದ್ದಾರೆ.
ross-taylor
100ನೇ ಟೆಸ್ಟ್ ಪಂದ್ಯವನ್ನಾಡುವ ಸಂಭ್ರಮದಲ್ಲಿರುವ ರಾಸ್ ಟೇಲರ್ ತಮ್ಮ ಸಾಧನೆ ಕುರಿತು ಮಾತನಾಡಿದ್ದಾರೆ. ನಾನು ಸಾಧನೆ ಮಾಡಿರುವ ಬಗ್ಗೆ ನನಗೆ ಹೆಮ್ಮೆ ಇದೆ. ನನ್ನ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಸಾಕಷ್ಟು ಏರಿಳಿತಗಳನ್ನ ಕಂಡಿದ್ದೇನೆ. ಇದರ ಹೊರತಾಗಿ ಸಹ ನಾನು ಬ್ಯಾಟ್ಸ್ಮನ್ ಆಗಿ ತಂಡಕ್ಕೆ ಏನುಬೇಕು ಎಂಬುದರ ಬಗ್ಗೆ ಅರಿತು ಮೈದಾನದಲ್ಲಿ ಬ್ಯಾಟ್ ಬೀಸಿದ್ದೇನೆ ಎಂದು ತಿಳಿಸಿದ್ದಾರೆ.
ಟೀಂ ಇಂಡಿಯಾ ಈಗಾಗಲೇ ನ್ಯೂಜಿಲ್ಯಾಂಡ್ ವಿರುದ್ಧ ಟಿ-20 ಹಾಗೂ ಏಕದಿನ ಕ್ರಿಕೆಟ್ ಸರಣಿ ಆಡಿದ್ದು, ಫೆ.21ರಿಂದ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಲಿದೆ.
Last Updated : Feb 14, 2020, 9:01 AM IST