ಕರ್ನಾಟಕ

karnataka

ETV Bharat / sports

ಪತ್ನಿಗೆ ವಿಶೇಷವಾಗಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ಹಿಟ್​​ಮ್ಯಾನ್​!

ಪತ್ನಿ ರಿತಿಕಾ 32ನೇ ವಸಂತಕ್ಕೆ ಕಾಲಿಟ್ಟಿದ್ದು ರೋಹಿತ್‌ ಶರ್ಮಾ ವಿಶೇಷ ಸಂದೇಶ ಕಳುಹಿಸಿದ್ದಾರೆ.

Rohit Sharma
ರೋಹಿತ್​ ಶರ್ಮಾ ಪತ್ನಿ

By

Published : Dec 21, 2019, 12:49 PM IST

ಮುಂಬೈ:ಭಾರತದ ಸ್ಟಾರ್​​ ಬ್ಯಾಟ್ಸ್​​​ಮನ್​ ರೋಹಿತ್​ ಶರ್ಮಾ ಪತ್ನಿ ರಿತಿಕಾ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ವಿಶೇಷ ಸಂದೇಶ ಕಳುಹಿಸುವ ಮೂಲಕ ಶುಭ ಕೋರಿದ್ದಾರೆ.

ನನ್ನ ಪ್ರೀತಿ, ಶಕ್ತಿ ಹಾಗು ಜೀವನವನ್ನೇ ಬದಲಿಸಿದ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯಗಳು. ನಮ್ಮ ಜೀವನಕ್ಕೆ ಬೆಳಕಾಗಿ ಬಂದ ನಿನ್ನ ಬಗ್ಗೆ ಸಮೈರಾ ಹಾಗೂ ನಾನು ಹೆಮ್ಮೆ ಪಡುತ್ತೇವೆ ಎಂದು ಇನ್​​ಸ್ಟಾಗ್ರಾಂನಲ್ಲಿ ರೋಹಿತ್‌ ಶರ್ಮಾ ಬರೆದುಕೊಂಡಿದ್ದಾರೆ. 2015ರ ಡಿಸೆಂಬರ್​​ 13ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಈ ಜೋಡಿಗೆ ಮುದ್ದಾದ ಹೆಣ್ಣು ಮಗುವಿದೆ.

ಪತ್ನಿ ರಿತಿಕಾ ಮಗಳು ಸಮೈರಾ ಜೊತೆ ರೋಹಿತ್ ಶರ್ಮಾ

ವೆಸ್ಟ್​ ಇಂಡೀಸ್​ ವಿರುದ್ಧ ನಾಳೆ ಕಟಕ್​ನಲ್ಲಿ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯ ನಡೆಯಲಿರುವ ಕಾರಣ ರೋಹಿತ್​ ಶರ್ಮಾ ತನ್ನ ಅರ್ಧಾಂಗಿಯಿಂದ ದೂರ ಉಳಿದುಕೊಂಡಿದ್ದಾರೆ. ಈ ಹಿಂದೆಯೂ ಸಹ ಆಕೆ ನನ್ನ ಪಾಲಿಗೆ ಪತ್ನಿ, ಸ್ನೇಹಿತೆ, ಮ್ಯಾನೇಜರ್​ ಹಾಗೂ ಎಲ್ಲವೂ ಆಗಿದ್ದಳು. ಆಕೆ ನನ್ನ ಜೊತೆ ಇರುವುದರಿಂದಲೇ ಮೈದಾನದಲ್ಲಿ ಸ್ವತಂತ್ರವಾಗಿ, ಆತ್ಮವಿಶ್ವಾಸದಿಂದ ಕ್ರಿಕೆಟ್​ ಆಡಲು ಸಾಧ್ಯವಾಗುತ್ತಿದೆ ಎಂದು ಹೇಳಿಕೊಂಡಿದ್ದರು.

ABOUT THE AUTHOR

...view details