ಕರ್ನಾಟಕ

karnataka

ETV Bharat / sports

ಟಿ20 ವಿಶ್ವಕಪ್​​ ತಂಡಕ್ಕೆ ಕಮ್​​ಬ್ಯಾಕ್ ಮಾಡುವ ವಿಶ್ವಾಸ: ಸಖತ್​ ತಯಾರಿಯಲ್ಲಿ ಉತ್ತಪ್ಪ - ಸ್ಫೋಟಕ ಬ್ಯಾಟ್ಸಮನ್​ ರಾಬಿನ್​ ಉತ್ತಪ್ಪ

ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್​ ರಾಬಿನ್​ ಉತ್ತಪ್ಪ ಸುಮಾರು 5 ವರ್ಷಗಳಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದು, ತಂಡಕ್ಕೆ ಕಮ್​ಬ್ಯಾಕ್​ ಮಾಡುವ ತವಕದಲ್ಲಿದ್ದಾರೆ.

Robin Uthappa
Robin Uthappa

By

Published : Apr 7, 2020, 5:34 PM IST

ಬೆಂಗಳೂರು: ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್‌ಮನ್​ ರಾಬಿನ್​ ಉತ್ತಪ್ಪ ಇದೀಗ ದೇಶಿಯ ಕ್ರಿಕೆಟ್​ ಹಾಗೂ ಇಂಡಿಯನ್​​ ಪ್ರೀಮಿಯರ್​ ಲೀಗ್​ಗೆ ಮಾತ್ರ ಸಿಮೀತವಾಗಿದ್ದಾರೆ. 2015ರ ನಂತರ ಟೀಂ ಇಂಡಿಯಾದಲ್ಲಿ ಆಡುವ ಯಾವುದೇ ಅವಕಾಶ ಅವರಿಗೆ ಲಭಿಸಿಲ್ಲ. ಆದರೂ ಭರವಸೆ ಕಳೆದುಕೊಳ್ಳದ ಈ ಪ್ಲೇಯರ್​ ತಂಡಕ್ಕೆ ಮರಳಲು​ ಭರ್ಜರಿ ತಯಾರಿಯಲ್ಲಿದ್ದಾರೆ.

ರಾಬಿನ್ ಉತ್ತಪ್ಪ (ಸಂಗ್ರಹ ಚಿತ್ರ)

2007ರ ಮೊದಲ ಟಿ-20 ವಿಶ್ವಕಪ್​​ ವಿಜೇತ ತಂಡದ ವೇಳೆ ಭಾರತ ತಂಡದ ಖಾಯಂ ಸದಸ್ಯನಾಗಿದ್ದ ಉತ್ತಪ್ಪ, ತದನಂತರ ತಂಡದಲ್ಲಿ ಅವಕಾಶ ಕಳೆದುಕೊಳ್ಳುತ್ತಾ ಹೋದರು. ಕೊನೆಯದಾಗಿ 2015ರಲ್ಲಿ ಜಿಂಬಾಬ್ವೆ ವಿರುದ್ಧ ಫೈನಲ್​ ಪಂದ್ಯವನ್ನಾಡಿದ್ದಾರೆ.

ಟೀಂ ಇಂಡಿಯಾ ಪರ 46 ಏಕದಿನ ಪಂದ್ಯಗಳಲ್ಲಿ ಟೀಂ ಇಂಡಿಯಾ ಪ್ರತಿನಿಧಿಸಿದ್ದು, 6 ಅರ್ಧಶತಕ ಸೇರಿದಂತೆ 934 ರನ್​ಗಳಿಕೆ ಮಾಡಿದ್ದಾರೆ. 13 ಟಿ20 ಪಂದ್ಯಗಳಿಂದ 249 ರನ್ ​ಗಳಿಸಿರುವ ಉತ್ತಪ್ಪ​​ ರಾಜಸ್ಥಾನ ರಾಯಲ್ಸ್​ ತಂಡದಲ್ಲಿ ಬ್ಯಾಟ್​ ಬೀಸುತ್ತಿದ್ದಾರೆ.

ಈಗಲೂ ವಿಶ್ವಕಪ್​ಗೆ ಅರ್ಹತೆ ಪಡೆದುಕೊಳ್ಳಲು ನಾನು ತಯಾರಿ ನಡೆಸಿದ್ದು, ಬೇರೆ ಆಟಗಾರರೊಂದಿಗೆ ಸ್ಪರ್ಧೆ ಮಾಡುವೆ. ಚುಟುಕು ಕ್ರಿಕೆಟ್​ನಲ್ಲಿ ನಾನು ತಯಾರಿ ನಡೆಸಿದ್ದು, ಮುಂಬರುವ ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ತಂಡದ ಪರ ಭಾಗಿಯಾಗುವ ಸಾಧ್ಯತೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಶ್ವಕಪ್​ 2020 ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್​ 18ರಿಂದ ನವೆಂಬರ್​​ 15ವರೆಗೆ ನಡೆಯುವ ಸಾಧ್ಯತೆ ಇದೆ.

ABOUT THE AUTHOR

...view details