ಮುಂಬೈ: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ವಿಕೆಟ್ ಕೀಪಿಂಗ್ ಜವಾಬ್ದಾರಿ ಹೊತ್ತು ಕೊಂಡಿದ್ದ ರಿಷಬ್ ಪಂತ್ ಮೈದಾನಕ್ಕಿಳಿಯದ ಕಾರಣ ಅವರ ಜವಾಬ್ದಾರಿಯನ್ನು ಕೆ.ಎಲ್. ರಾಹುಲ್ ವಹಿಸಿಕೊಂಡಿದ್ದಾರೆ.
ಕೀಪಿಂಗ್ ಮಾಡಲು ಮೈದಾನಕ್ಕಿಳಿಯದ ಪಂತ್: ಬ್ಯಾಟಿಂಗ್ ವೇಳೆ ರಿಷಬ್ಗೆ ಆಗಿದ್ದೇನು? - ರಿಷಭ್ ಪಂತ್ ಗಾಯ
ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಗಾಯಗೊಂಡಿರುವ ರಿಷಬ್ ಪಂತ್ ಗಾಯಗೊಂಡ ಕಾರಣ ಅವರ ಜವಾಬ್ದಾರಿಯನ್ನು ಕನ್ನಡಿಗ ಕೆ.ಎಲ್. ರಾಹುಲ್ ನಿಭಾಯಿಸುತ್ತಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ, ಆಸೀಸ್‌ಗೆ 256 ರನ್ಗಳ ಟಾರ್ಗೆಟ್ ನೀಡಿದೆ. ಇದಕ್ಕೂ ಮುನ್ನ 6ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಮೈದಾನಕ್ಕಿಳಿದ ಪಂತ್ 28 ರನ್ ಗಳಿಸಿದ್ದ ವೇಳೆ ಕಮ್ಮಿನ್ಸ್ ಓವರ್ನಲ್ಲಿ ವಿಕೆಟ್ ನೀಡಿ ಪೆವಿಲಿಯನ್ ಸೇರಿಕೊಂಡರು. ಈ ವೇಳೆ ಆಸ್ಟ್ರೇಲಿಯಾ ಬೌಲರ್ ಎಸೆದ ಚೆಂಡು ರಿಷಬ್ ಹೆಲ್ಮೆಟ್ಗೆ ಬಡಿದ ಕಾರಣ ಅವರು ಅರೆಪ್ರಜ್ಞಾವಸ್ಥೆ ತಲುಪಿದ್ದಾರೆ. ಕಾರಣ ಫೀಲ್ಡಿಂಗ್ ಮಾಡಲು ಅವರು ಮೈದಾನಕ್ಕೆ ಇಳಿಯಲಿಲ್ಲ. ಹೀಗಾಗಿ ಅವರ ಜವಾಬ್ದಾರಿಯನ್ನು ರಾಹುಲ್ ನಿಭಾಯಿಸುತ್ತಿದ್ದಾರೆ.
ಅರೆಪ್ರಜ್ಞಾವಸ್ಥೆಗೆ ತಲುಪಿರುವ ಪಂತ್ ಅವರ ಮೇಲೆ ವೈದ್ಯರು ನಿಗಾ ಇಟ್ಟಿದ್ದಾರೆ ಎಂದು ಕ್ರಿಕೆಟ್ ಮಂಡಳಿ ತಿಳಿಸಿದೆ. ಇನ್ನು ಫೀಲ್ಡಿಂಗ್‌ನಲ್ಲಿ ಮತ್ತೋರ್ವ ಕನ್ನಡಿಗ ಮನೀಷ್ ಪಾಂಡೆ ಮೈದಾನದಲ್ಲಿದ್ದಾರೆ.