ನವದೆಹಲಿ: ಕಾಂಗರೂ ನಾಡಲ್ಲಿ ಟೀಂ ಇಂಡಿಯಾ ಟೆಸ್ಟ್ ಸರಣಿ ಗೆಲುವ ಮೂಲಕ ಹೊಸ ದಾಖಲೆ ನಿರ್ಮಾಣ ಮಾಡಿದ್ದು, ಈ ಐತಿಹಾಸಿಕ ಗೆಲುವಿಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯಸಭೆಯಲ್ಲೂ ಟೀಂ ಇಂಡಿಯಾ ಗುಣಗಾನ ನಿನ್ನೆ ನಡೆದ ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ಟೀಂ ಇಂಡಿಯಾ ಗೆಲುವಿನ ಪರಾಕ್ರಮ ಉಲ್ಲೇಖ ಮಾಡಿದ್ದರು. ಇದೀಗ ರಾಜ್ಯಸಭೆಯಲ್ಲೂ ಯಂಗ್ ಇಂಡಿಯಾ ಸಾಧನೆ ಬಗ್ಗೆ ಎಂ. ವೆಂಕಯ್ಯ ನಾಯ್ಡು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ರಾಜ್ಯಸಭೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಮಾತನಾಡಿರುವ ರಾಜ್ಯಸಭೆ ಉಪಾಧ್ಯಕ್ಷ ವೆಂಕಯ್ಯ ನಾಯ್ಡು, ಟೀಂ ಇಂಡಿಯಾ ತಂಡಕ್ಕೆ ವೈಯಕ್ತಿಕವಾಗಿ ಹಾಗೂ ಸದನದ ಕಡೆಯಿಂದ ಅಭಿನಂದನೆ ಸಲ್ಲಿಸುತ್ತಿರುವುದಾಗಿ ಹೇಳಿದ್ದಾರೆ.
ಕಾಂಗರೂ ವಿರುದ್ಧ ಸರಣಿ ಗೆದ್ದ ಟೀಂ ಇಂಡಿಯಾ ಸಂಭ್ರಮ ಓದಿ: ಬಜೆಟ್ ಭಾಷಣದಲ್ಲಿ ಟೀಂ ಇಂಡಿಯಾ ಅದ್ಭುತ ಗೆಲುವಿನ ಉಲ್ಲೇಖ!
ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಕೇವಲ 36ರನ್ಗಳಿಗೆ ಆಲೌಟ್ ಆಗಿ ಟೀಕೆಗೊಳಗಾಗಿತ್ತು. ಆದರೆ, ತದನಂತರದ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿ, ಹೊಸ ಇತಿಹಾಸ ನಿರ್ಮಾಣ ಮಾಡಿದೆ. ಟೀಂ ಇಂಡಿಯಾ ಈ ಸಾಧನೆ ಯುವ ಭಾರತವನ್ನ ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಿದೆ ಎಂದರು.
ಯುವ ಕ್ರಿಕೆಟರ್ಸ್ ಅದ್ಭುತ ಪ್ರದರ್ಶನ ನೀಡಿ ತಂಡ ಐತಿಹಾಸಿಕ ಗೆಲುವು ದಾಖಲು ಮಾಡುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದು, ದೇಶ ಸವಾಲು ಎದುರಿಸಿದಾಗ ನಾವೆಲ್ಲರೂ ಮುಂದೆ ನಿಂತು ಅವುಗಳನ್ನ ಎದುರಿಸಿದ್ದೇವೆ ಎಂದಿದ್ದಾರೆ.