ಕರ್ನಾಟಕ

karnataka

ETV Bharat / sports

ದಾದಾ ಮಾತಿಗೆ ಬೆಲೆ ಕೊಟ್ಟು ಇಷ್ಟವಿಲ್ಲದಿದ್ದರೂ ವಿಕೆಟ್​​​​​ ಕೀಪಿಂಗ್​ ಮಾಡಿದ್ರಂತೆ ದ್ರಾವಿಡ್​​ - ವಿಶ್ವಕಪ್​

ಭಾರತ ತಂಡಕ್ಕೆ ಧೋನಿ ಸೇರುವ ಮೊದಲು 10 ವರ್ಷಗಳ ಕಾಲ ಬಿಸಿಸಿಐ ಸುಮಾರು 10ಕ್ಕೂ ಹೆಚ್ಚು ವಿಕೆಟ್​ ಕೀಪರ್​ ಬದಲಾಯಿಸಿದ್ದತ್ತು. 10 ವಿಕೆಟ್​ ಕೀಪರ್​ಗಳಲ್ಲಿ ಕನ್ನಡಿಗ ದ್ರಾವಿಡ್​ ಕೂಡಾ ಒಬ್ಬರು. ಆದರೆ ದ್ರಾವಿಡ್​ ವಿಕೆಟ್​ ಕೀಪರ್​ ಆಗಲು ಭಾರತ ತಂಡದ ಮಾಜಿ ನಾಯಕ ಗಂಗೂಲಿ ಪಾತ್ರ ಮಹತ್ವದ್ದಾಗಿದೆ.

Rahul Dravid

By

Published : Jun 26, 2019, 10:27 PM IST

ಮುಂಬೈ: ಭಾರತದ ಕ್ರಿಕೆಟ್ ತಂಡವನ್ನು​ ವಿಶ್ವದಲ್ಲಿ ಬಲಿಷ್ಠ ತಂಡ ಎನಿಸಿಕೊಳ್ಳುವಂತೆ ಮಾಡಿದ್ದ ಗಂಗೂಲಿ, ಕನ್ನಡಿಗ ದ್ರಾವಿಡ್​ರನ್ನು ವಿಕೆಟ್​ ಕೀಪಿಂಗ್​ ಮಾಡುವಂತೆ ಹೇಳಿದ್ದಕ್ಕೆ ಇಷ್ಟವಿಲ್ಲದಿದ್ದರೂ ದಾದಾ ಹಾಗೂ ಟೀಂ​ ಇಂಡಿಯಾಗೋಸ್ಕರ ವಿಕೆಟ್​ ಕೀಪಿಂಗ್ ಮಾಡಿದ್ದರಂತೆ ದ್ರಾವಿಡ್​.

ಭಾರತ ತಂಡಕ್ಕೆ ಧೋನಿ ಸೇರುವ ಮೊದಲು 10 ವರ್ಷಗಳ ಕಾಲ ಬಿಸಿಸಿಐ ಸುಮಾರು10ಕ್ಕೂ ಹೆಚ್ಚು ವಿಕೆಟ್​ ಕೀಪರ್​ ಬದಲಾಯಿಸಿತ್ತು. 10 ವಿಕೆಟ್​ ಕೀಪರ್​ಗಳಲ್ಲಿ ಕನ್ನಡಿಗ ದ್ರಾವಿಡ್​ ಕೂಡಾ ಒಬ್ಬರು. ಆದರೆ ದ್ರಾವಿಡ್​ ವಿಕೆಟ್​ ಕೀಪರ್​ ಆಗಲು ಭಾರತ ತಂಡದ ಮಾಜಿ ನಾಯಕ ಗಂಗೂಲಿ ಪಾತ್ರ ಮಹತ್ವದ್ದಾಗಿದೆ.

ಕ್ರಿಕೆಟ್​ ಡೈರೀಸ್​ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದ್ರಾವಿಡ್​, ತಾವು ವಿಕೆಟ್​ ಕೀಪರ್​ ಆಗಲು ಸೌರವ್​ ಗಂಗೂಲಿ ಕಾರಣ ಎಂದು ಹೇಳಿದ್ದಾರೆ. 2002ರ ವೇಳೆಗಾಗಲೇ ದ್ರಾವಿಡ್ ಹಲವಾರು ಬಾರಿ ನಯನ್​ ಮೋಂಗಿಯಾ ಗಾಯಾಳುವಾದಂತಹ ಸಂದರ್ಭದಲ್ಲಿ ವಿಕೆಟ್ ಕೀಪರ್​​​ ಜವಾಬ್ಧಾರಿ ನಿರ್ವಹಿಸಿದ್ದರು.

ದ್ರಾವಿಡ್​ 15 ವರ್ಷವಿದ್ದಾಗ ವಿಕೆಟ್​ ಕೀಪರ್ ಆಗಿದ್ದರಂತೆ. ಕೀಪಿಂಗ್​ ಜವಾಬ್ದಾರಿ ಇಷ್ಟವಾಗದ ಕಾರಣ ತ್ಯಜಿಸಿ ಬ್ಯಾಟಿಂಗ್​ ಕಡೆ ಹೆಚ್ಚಿನ ಗಮನ ನೀಡಿದ್ದರು. ಆದರೆ ದಾದಾ ಒತ್ತಾಯದ ಮೇರೆಗೆ ದ್ರಾವಿಡ್​ ಎರಡಕ್ಕೂ ಹೆಚ್ಚು ವರ್ಷಗಳ ಕಾಲ ವಿಕೆಟ್​ ಕೀಪಿಂಗ್​ ಜವಾಬ್ದಾರಿ ನಿರ್ವಹಿಸಿದ್ದರು. 2003ರ ನ್ಯಾಟ್​ವೆಸ್ಟ್​ ಸರಣಿ ಹಾಗೂ ವಿಶ್ವಕಪ್​ನಲ್ಲೂ ಗಂಗೂಲಿ, ದ್ರಾವಿಡ್​ರನ್ನು ವಿಕೆಟ್​ ಕೀಪರ್​, ಬ್ಯಾಟ್ಸ್​ಮನ್​ ಆಗಿ ತಂಡಕ್ಕೆ ಆಯ್ಕೆ ಮಾಡಿಸಿದ್ದರು.

ಆದರೆ ತಾವೊಬ್ಬ ಶ್ರೇಷ್ಠ ವಿಕೆಟ್​ ಕೀಪರ್​ ಆಗಿರಲಿಲ್ಲ. ನನಗೆ ಲೆಗ್​ಸೈಡ್​ನಲ್ಲಿ ಬಾಲ್​ ಬಂದರೆ ಹಿಡಿಯಲಾಗುತ್ತಿರಲಿಲ್ಲ. ಜೊತೆಗೆ ನನ್ನ ಕಾಲಿನ ಚಲನೆ ವಿಕೆಟ್​ ಕೀಪರ್​ಗೆ ತಕ್ಕಂತೆ ಇರಲಿಲ್ಲ ಎಂಬುದನ್ನು ಸ್ವತಃ ದ್ರಾವಿಡ್​ ಒಪ್ಪಿಕೊಂಡಿದ್ದಾರೆ.

ABOUT THE AUTHOR

...view details