ನವದೆಹಲಿ: ತಮ್ಮ ವೃತ್ತಿಜೀವನದ ಆರಂಭದಲ್ಲಿ ಬಹಳಷ್ಟು ಜನ ತನ್ನ ಅನಧಿಕೃತ ಶೈಲಿ ಬೌಲಿಂಗ್ ಸಾಮರ್ಥ್ಯದ ಮೇಲೆ ನಂಬಿಕೆಯಿರಲಿಲ್ಲ ಎಂದು ಏಕದಿನ ಕ್ರಿಕೆಟ್ನ ನಂಬರ್ ಒನ್ ಬೌಲರ್ ಆಗಿರುವ ಭಾರತದ ಜಸ್ಪ್ರೀತ್ ಬುಮ್ರಾ ಭಾನುವಾರ ಹೇಳಿದ್ದಾರೆ.
ಭಾರತದ ನಂಬರ್ ಒನ್ ವೇಗಿ ಬುಮ್ರಾ , ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ರೊಡನೆ ನಡೆಸಿದ ಇನ್ಸ್ಟಾಗ್ರಾಮ್ ಲೈವ್ ಸಂವಾದದ ವೇಳೆ ತಮ್ಮನ್ನು ಬಹಳಷ್ಟು ಜನರು ಇಷ್ಟರ ಮಟ್ಟಿಗೆ ಬೆಳೆಯುತ್ತಾರೆ ಎಂದು ನಂಬಿರಲಿಲ್ಲ ಎಂದು ತಿಳಿಸಿದ್ದಾರೆ.
ಯುವರಾಜ್ ಬೌಲಿಂಗ್ ಆ್ಯಕ್ಷನ್ ಬಗ್ಗೆ ಬುಮ್ರಾರನ್ನು ಕೇಳಿದಾಗ ಪ್ರತಿಕ್ರಿಯಿಸಿದ ವೇಗಿ, "ಬಹಳಷ್ಟು ಜನರು ನೀನು ಹೆಚ್ಚು ಸಮಯ ಆಡುವುದಿಲ್ಲ ಎಂದು ಹೇಳಿದ್ದರು. ಅವರೆಲ್ಲರ ಮನದೆಲ್ಲಿ ದೇಶಕ್ಕಾಗಿ ಆಡುವ ಕೊನೆಯ ವ್ಯಕ್ತಿ ಎಂಬ ನಿರೀಕ್ಷೆಯಿತ್ತು. ಅವರು ನನಗೆ ಕೇವಲ ರಣಜಿ ಮಾತ್ರ ಆಡುತ್ತೀಯ ಎಂದು ಹೇಳಿದ್ದರು. ಆದರೆ ನಾನು ನನ್ನ ಬೌಲಿಂಗ್ ಆಕ್ಷನ್ ಮುಂದುವರಿಸಿಕೊಂಡೆ ದಿನದಿಂದ ದಿನಕ್ಕೆ ಸುಧಾರಿತ್ತಲೇ ಬಂದೆ" ಎಂದು ತಿಳಿಸಿದ್ದಾರೆ.