ಕರ್ನಾಟಕ

karnataka

ETV Bharat / sports

ಆತ ಭವಿಷ್ಯದಲ್ಲಿ ಯುವರಾಜ್​-ಸೆಹ್ವಾಗ್​ರಂತೆ ಬ್ಯಾಟಿಂಗ್​ ನಡೆಸಿಲಿದ್ದಾನೆ: ಸುರೇಶ್​ ರೈನಾ

ಯಜುವೇಂದ್ರ ಚಹಾಲ್​ ಜೊತೆ ಇನ್ಸ್ಟಾಗ್ರಾಮ್​ ಲೈವ್​ನಲ್ಲಿ ಕಾಣಿಸಿಕೊಂಡ ರೈನಾ, "ರಿಷಭ್ ಪಂತ್ ಓರ್ವ ಅತ್ಯುತ್ತಮ ಆಟಗಾರ, ಆತ ಖಂಡಿತ ಯುವರಾಜ್ ಸಿಂಗ್ ಮತ್ತು ಸೆಹ್ವಾಗ್ ಅವರನ್ನು ನೆನಪಿಸಿತ್ತಾನೆ, ಮತ್ತು ಆತನ ಫ್ಲಿಕ್ ಶಾಟ್ ದ್ರಾವಿಡ್‌ರನ್ನು ನೆನಪಿಸುತ್ತದೆ" ಎಂದು ಯುವ ವಿಕೆಟ್​ ಕೀಪರ್​ ಬೆಂಬಲಕ್ಕೆ ನಿಂತಿದ್ದಾರೆ.

ಸುರೇಶ್​ ರೈನಾ
ಸುರೇಶ್​ ರೈನಾ

By

Published : Apr 28, 2020, 3:19 PM IST

ಮುಂಬೈ:ರಿಷಭ್​ ಪಂತ್​ ಒಬ್ಬರ ಪ್ರತಿಭಾನ್ವಿತ ಆಟಗಾರ, ಆತ ಭಾರತ ತಂಡದ ಲೆಜೆಂಡ್​ಗಳಾದ ಯುವರಾಜ್​ ಹಾಗೂ ವಿರೇಂದ್ರ ಸೆಹ್ವಾಗ್​ ರೀತಿಯಲ್ಲಿ ಸ್ಫೋಟಕ ಆಟ ಆಡುವ ಸಾಮರ್ಥ್ಯವಿದೆ ಎಂದು ಪವರ್​ ಹಿಟ್ಟರ್​ ಖ್ಯಾತಿಯ ಸುರೇಶ್​ ರೈನಾ ಯುವ ವಿಕೆಟ್​ ಕೀಪರ್ ಬೆಂಬಲಕ್ಕೆ ನಿಂತಿದ್ದಾರೆ.

ಯಜುವೇಂದ್ರ ಚಹಾಲ್​ ಜೊತೆ ಇನ್ಸ್ಟಾಗ್ರಾಮ್​ ಲೈವ್​ನಲ್ಲಿ ಕಾಣಿಸಿಕೊಂಡ ರೈನಾ, "ರಿಷಭ್ ಪಂತ್ ಓರ್ವ ಅತ್ಯುತ್ತಮ ಆಟಗಾರ, ಆತ ಖಂಡಿತ ಯುವರಾಜ್ ಸಿಂಗ್ ಮತ್ತು ಸೆಹ್ವಾಗ್ ಅವರನ್ನು ನೆನಪಿಸಿತ್ತಾನೆ, ಮತ್ತು ಆತನ ಫ್ಲಿಕ್ ಶಾಟ್ ದ್ರಾವಿಡ್‌ರನ್ನು ನೆನಪಿಸುತ್ತದೆ" ಎಂದು ಯುವ ವಿಕೆಟ್​ ಕೀಪರ್​ ಬೆಂಬಲಕ್ಕೆ ನಿಂತಿದ್ದಾರೆ.

ರಿಷಭ್ ಪಂತ್​

ಧೋನಿ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿದ್ದ ಪಂತ್​, ಸಾಕಷ್ಟು ಅವಕಾಶಗಳು ಸಿಕ್ಕರೂ ತಮ್ಮ ಸಾಮರ್ಥ್ಯ ಸಾಭೀತುಪಡಿಸುವಲ್ಲಿ ವಿಫಲರಾಗಿದ್ದಾರೆ. ಈ ಮಧ್ಯೆ ಕಳೆದ ಆಸ್ಟ್ರೇಲಿಯಾ ಮತ್ತು ಕಿವೀಸ್​ ಸರಣಿಯ ವೇಳೆ ಕೆಎಲ್​ ರಾಹುಲ್​ ವಿಕೆಟ್​ ಕೀಪಿಂಗ್​ ಜೊತೆಗೆ ಬ್ಯಾಟಿಂಗ್​ನಲ್ಲಿ ಮಿಂಚಿದ್ದರು. ಇದರಿಂದ ಪಂತ್​ ಬೆಂಚ್​ ಕಾಯುವಂತಾಗಿತ್ತು.

ಇನ್ನು ಸುರೇಶ್ ರೈನಾ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ಓರ್ವ ಬಲಿಷ್ಠ ನಾಯಕ, ತಂಡವನ್ನು ಮುನ್ನಡೆಸುವುದಲ್ಲದೆ ಗೇಮ್​ ಚೇಂಜರ್​ ಆಗಿಯೂ ಮೈದಾನದಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಅವರಲ್ಲಿ ಪರಿಸ್ಥಿತಿಯನ್ನು ನಿಯಂತ್ರಣ ಮಾಡುವ ಶಕ್ತಿಯಿದೆ ಎಂದು ಕೊಹ್ಲಿ ನಾಯಕತ್ವನ್ನು ಹೊಗಳಿದ್ದಾರೆ.

ಇನ್ನು ಇದಕ್ಕೂ ಮೊದಲು ಪಂತ್​ ಕುರಿತು ಮಾತನಾಡಿದ್ದ ರೋಹಿತ್​ ಶರ್ಮಾ ಕೂಡ "ಪಂತ್​ ತಮ್ಮ ಈಗಷ್ಟೆ ಕರಿಯರ್​ ಆರಂಭಿಸಿದ್ದಾರೆ. ಆತನಿಗೆ 20-21 ವಯಸ್ಸು. ಆತನ ವೈಫಲ್ಯ ಒತ್ತಡಕ್ಕೀಡಾಗುತ್ತಿದ್ದಾನೆ. ಪಂತ್​ ವೈಫಲ್ಯವನ್ನು ಮಾಧ್ಯಮಗಳು ಕೂಡ ಪಂತ್ ವೈಫಲ್ಯವನ್ನು ಎತ್ತಿ ಹಿಡಿಯುತ್ತಿವೆ. ಇದು ಅವರ ಕರ್ತವ್ಯವಾಗಿರಬಹುದು, ಆದರೆ ಆದರೆ ಕೆಲವೊಂದು ಬಾರಿ ಅವರ ಬರಹ ಬೇರೊಬ್ಬರ ಜೀವನದಲ್ಲಿ ದೊಡ್ಡ ಪಾತ್ರ ವಹಿಸುತ್ತದೆ ಎಂಬುದನ್ನು ಮರೆಯಬಾರದು ಎಂದು ಅವರು ಹೇಳಿದ್ದರು.

ABOUT THE AUTHOR

...view details