ಕರ್ನಾಟಕ

karnataka

ETV Bharat / sports

ಬೆನ್​ ಸ್ಟೋಕ್ಸ್ - ಗಪ್ಟಿಲ್​ ಓವರ್​ ಥ್ರೋ ಗೊಂದಲ: ಐಸಿಸಿ ನಿಯಮ ಪುನರ್​ ಪರೀಶಿಲಿಸಲು ಸೆಪ್ಟೆಂಬರ್​ನಲ್ಲಿ ಸಭೆ - ನಿಯಮ ಪರಿಶೀಲನೆ ಸಭೆ

ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಅತಿ ಹೆಚ್ಚು ಗೊಂದಲಕ್ಕೆ ಒಳಗಾದ ಓವರ್​ ಥ್ರೋ ಹಾಗೂ ಬೌಂಡರಿ ಲೆಕ್ಕಾಚಾರ ನಿಯಮ ಕುರಿತು ಪರಿಶೀಲಿಸಲು ಸೆಪ್ಟೆಂಬರ್​ನಲ್ಲಿ ಎಂಸಿಸಿ ಸಬ್​ ಕಮಿಟಿ ನಿರ್ಧರಿಸಿದೆ.

Ben Stokes

By

Published : Aug 13, 2019, 1:07 PM IST

ಲಂಡನ್​: ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಅತಿ ಹೆಚ್ಚು ಗೊಂದಲಕ್ಕೆ ಒಳಗಾದ ಓವರ್​ ಥ್ರೋ ಹಾಗೂ ಬೌಂಡರಿ ಲೆಕ್ಕಾಚಾರ ನಿಯಮ ಕುರಿತು ಪರಿಶೀಲಿಸಲು ಸೆಪ್ಟೆಂಬರ್​ನಲ್ಲಿ ಎಂಸಿಸಿ ಸಬ್​ ಕಮಿಟಿ ನಿರ್ಧರಿಸಿದೆ.

ಫೈನಲ್​ ಪಂದ್ಯದಲ್ಲಿ ಬೆನ್​ಸ್ಟೋಕ್ಸ್​ ಬಾರಿಸಿದ ಚೆಂಡು ಗಪ್ಟಿಲ್​ ಕೈಸೇರಿತ್ತು. ಅವರು ಥ್ರೋ ಮಾಡಿದ ಬಾಲ್​ ಕ್ರೀಸ್​ ಮುಟ್ಟಲು ಡೈವ್​ ಮಾಡಿದ್ದ ಸ್ಟೋಕ್ಸ್​ ಬ್ಯಾಟಿಗೆ ತಗುಲಿ ಬೌಂಡರಿ ಸೇರಿತ್ತು. ಇದನ್ನು ಗಮನಿಸಿದ ಶ್ರೀಲಂಕಾದ ಅಂಪೈರ್​ ಕುಮಾರ್​ ಧರ್ಮಸೇನಾ 6 ರನ್​ ನೀಡಿದರು. ಇದು ಕಿವೀಸ್​ ತಂಡದ ಸೋಲಿಗೆ ಕಾರಣವಾಗಿತ್ತು. ಈ ಘಟನೆ ವಿಶ್ವ ಕ್ರಿಕೆಟ್​ನಲ್ಲಿ ಭಾರಿ ಚರ್ಚೆಗೀಡಾಗಿತ್ತು.

ಐಸಿಸಿ ಕ್ರಿಕೆಟ್​ 19.8 ನಿಯಮದ ಪ್ರಕಾರ ಓವರ್​ ಥ್ರೋ ಎಂದು ಪರಿಗಣಿಸಿದ್ದು ಸರಿಯಾಗಿತ್ತು. ಆದರೆ, ಹೆಚ್ಚು ಚರ್ಚೆಯಾಗಿದ್ದ ಆ ನಿಯಮವನ್ನು ಪುನರ್​ ಪರೀಶಿಲನೆ ಮಾಡುವ ಅಗತ್ಯವಿದ್ದು, ಸೆಪ್ಟೆಂಬರ್​ನಲ್ಲಿ ಈ ನಿಯಮ ಕುರಿತು ಐಸಿಸಿಯಿಂದ ರಚಿತವಾಗಿರುವ ಸಮಿತಿಯಲ್ಲಿ ಚರ್ಚಿಸಲಾಗುತ್ತದೆ ಎಂದು ಎಂಸಿಸಿ ತಿಳಿಸಿದೆ.

ಫೈನಲ್​ ಪಂದ್ಯದಲ್ಲಿ ಕುಮಾರ ಧರ್ಮಸೇನಾ ಓವರ್​ ಥ್ರೋನಲ್ಲಿ 6 ರನ್​ ನೀಡಿದ್ದನ್ನು ಖಂಡಿಸಿದ್ದ ಮಾಜಿ ಅಂಪೈರ್​ ಸೈಮನ್​ ಟಫಲ್​ ಸ್ಟೋಕ್ಸ್​ ಬ್ಯಾಟ್​ಗೆ ಬಾಲ್​ ಬಡಿದಾಗ ಇನ್ನು ಅವರು ಕ್ರೀಸ್​ ಮುಟ್ಟಿಲ್ಲವಾದ್ದರಿಂದ 5 ರನ್​ ಕೊಡಬೇಕಿತ್ತು ಎಂದು ತಿಳಿಸಿದ್ದರು. ಈ ವಿಚಾರವೇ ಇದೀಗ ನಿಯಮವನ್ನು ಪರಿಶೀಲನೆ ಮಾಡುವಂತೆ ಮಾಡಿದೆ.

ABOUT THE AUTHOR

...view details