ಹೈದರಾಬಾದ್:ನ್ಯೂಜಿಲ್ಯಾಂಡ್ ಬ್ಯಾಟ್ಸ್‌ಮನ್ ರಾಸ್ ಟೇಲರ್ಗೆ ಗಾಯದ ಸಮಸ್ಯೆ ಎದುರಾಗಿರುವ ಕಾರಣ ಬಾಂಗ್ಲಾದೇಶ ವಿರುದ್ಧದ ಎರಡನೇ ಏಕದಿನ ಪಂದ್ಯದಿಂದ ಹೊರಗುಳಿದಿದ್ದಾರೆ. ಇವರ ಜಾಗಕ್ಕೆ ಬ್ಯಾಟ್ಸ್‌ಮನ್ ಮಾರ್ಕ್ ಚಾಪ್ಮನ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ನ್ಯೂಜಿಲ್ಯಾಂಡ್ ಕ್ರಿಕೆಟ್ ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಅಭ್ಯಾಸ ನಡೆಸುವ ವೇಳೆ ರಾಸ್ ಟೇಲರ್ ಎಡ ಮಂಡಿಗೆ ಗಾಯವಾಗಿದೆ. ಮೊದಲ ಏಕದಿನ ಪಂದ್ಯದಲ್ಲಿ ಹೊರಗುಳಿದಿದ್ದು, ಎರಡನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ನ್ಯೂಜಿಲ್ಯಾಂಡ್ ಕ್ರಿಕೆಟ್ ತಿಳಿಸಿತ್ತು. ಆದರೆ ಇನ್ನೂ ಗಾಯದ ಸಮಸ್ಯೆ ಸರಿ ಹೋಗದ ಕಾರಣ ಎರಡನೇ ಪಂದ್ಯದಿಂದಲೂ ಕೂಡಾ ಹೊರಗುಳಿದಿದ್ದಾರೆ ಎಂದು ನ್ಯೂಜಿಲ್ಯಾಂಡ್ ಕ್ರಿಕೆಟ್ ಟ್ವೀಟ್ ಮಾಡಿದೆ.
"ಸರಣಿಯ ಮುನ್ನಾ ದಿನದಂದು ರಾಸ್ ಟೇಲರ್ಗೆ ಗಾಯವಾಗಿದ್ದು ಅಘಾತವನ್ನುಂಟು ಮಾಡಿದೆ. ಇದು ಒಂದು ಸಣ್ಣ ಗಾಯವಾಗಿದ್ದು, ಸ್ವಲ್ಪ ವಿಶ್ರಾಂತಿ ನಂತರ ಅವರು ತಂಡಕ್ಕೆ ಲಭ್ಯರಾಗಲಿದ್ದಾರೆ" ಎಂದು ಸ್ಟೀಡ್ ತಿಳಿಸಿದ್ದಾರೆ.