ವೆಲ್ಲಿಂಗ್ಟನ್:ನಾಲ್ಕನೇ ಟಿ-20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಸಾಧಾರಣ ಮೊತ್ತದ ಗುರಿಯನ್ನು ಕಿವೀಸ್ ತಂಡಕ್ಕೆ ನೀಡಿದೆ.
ನಾಲ್ಕನೇ ಟಿ-20ಯಲ್ಲಿ ಮೊದಲ ಬ್ಯಾಟ್ ಮಾಡಿದ ಭಾರತ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ಆರಂಭಿಕ ಸಂಜು ಸ್ಯಾಮ್ಸನ್ 8 ರನ್ಗಳನ್ನು ಗಳಿಸಿ ಔಟಾದರು. ನಂತರ ಒಂದು ಬದಿ ವಿಕೆಟ್ ಉರುಳುತ್ತಿದ್ದರೆ ಇನ್ನೊಂದೆಡೆ ಕೆ.ಎಲ್. ರಾಹುಲ್ ಬ್ಯಾಟ್ ಬೀಸುತ್ತಿದ್ದರು. ಕೆ.ಎಲ್ ರಾಹುಲ್ 39 ರನ್ಗಳನ್ನು ಗಳಿಸಿ ಪೆವಿಲಿಯನ್ ಹಾದಿ ಹಿಡಿದರು. ಮಧ್ಯಮ ಕ್ರಮಾಂಕದಲ್ಲಿ ಬಂದ ಮನೀಷ್ ಪಾಂಡೆ ಅರ್ಧ ಶತಕ ಗಳಿಸಿ ತಂಡಕ್ಕೆ ಆಸರೆಯಾದರು.