ಕರ್ನಾಟಕ

karnataka

ETV Bharat / sports

'ಹೋಮ್ ಆಫ್ ಧೋನಿ ಫ್ಯಾನ್': 1.5 ಲಕ್ಷ ರೂ. ಖರ್ಚು ಮಾಡಿ ಹಳದಿ ಬಣ್ಣದಲ್ಲೇ ಮನೆ ಸಿಂಗರಿಸಿದ ಸಿಎಸ್​ಕೆ ಅಭಿಮಾನಿ - Indian premier league

ಸುಮಾರು 1.5 ಲಕ್ಷ ರೂಪಾಯಿ ಖರ್ಚು ಮಾಡಿರುವ ಗೋಪಿಕೃಷ್ಣನ್ ಎಂಬಾತ ತನ್ನ ಮನೆಯ ಗೋಡೆಗಳ ಮೇಲೆ ಧೋನಿಯ ಭಾವಚಿತ್ರಗಳನ್ನು ಸಹ ಬಿಡಿಸಿದ್ದಾರೆ. ಜೊತೆಗೆ ಸಿಎಸ್​ಕೆ ಲೋಗೋ ಮತ್ತು ವಿಸಲ್ ಪೋಡು ಎಂಬ ಟ್ಯಾಗ್ ಲೈನ್​ ಕೂಡ ಬರೆಸಿಕೊಂಡಿದ್ದಾರೆ.​​

ಹೋಮ್ ಆಫ್ ಧೋನಿ ಫ್ಯಾನ್
ಹೋಮ್ ಆಫ್ ಧೋನಿ ಫ್ಯಾನ್

By

Published : Oct 13, 2020, 7:48 PM IST

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಧೋನಿ ಬ್ಯಾಟಿಂಗ್ ವೈಫಲ್ಯದಿಂದ ಹಲವರ ಟೀಕೆಗೆ ಗುರಿಯಾಗುತ್ತಿದ್ದಾರೆ. ಆದರೆ, ಅಭಿಮಾನಿಯೊಬ್ಬ ತನ್ನ ಮನೆಗೆ ಸಂಪೂರ್ಣ ಹಳದಿ ಬಣ್ಣವನ್ನೇ ಬಳಿಸುವ ಮೂಲಕ ತಾನೂ ಗೆದ್ದರೂ, ಸೋತರೂ ಧೋನಿಗೆ ತನ್ನ ಬೆಂಬಲ ಸದಾ ಇರುತ್ತದೆ ಎನ್ನುವುದನ್ನ ಸಾಬೀತುಪಡಿಸಿದ್ದಾನೆ.

ಕ್ರಿಕೆಟ್​ ಇತಿಹಾಸದಲ್ಲೇ ಅತ್ಯುತ್ತಮ ನಾಯಕನಾಗಿರುವ ಎಂಎಸ್​ ಧೋನಿ ಇತ್ತೀಚೆಗಷ್ಟೇ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು. ಒಂದು ವರ್ಷದ ಬಳಿಕ ಕ್ರಿಕೆಟ್​ಗೆ ಮರಳಿರುವ ಟೀಮ್​ ಇಂಡಿಯಾ ಮಾಜಿ ಕಪ್ತಾನ 13ನೇ ಆವೃತ್ತಿಯಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುತ್ತಿಲ್ಲ. ಈ ಕಾರಣದಿಂದ ಕೆಲವು ಕ್ರಿಕೆಟ್​ ಪಂಡಿತರಿಂದ ಟೀಕೆಗೆ ಗುರಿಯಾಗುತ್ತಿದ್ದಾರೆ. ಆದರೆ, ತಮಿಳುನಾಡಿನಲ್ಲಿ ಧೋನಿಯ ಕಟ್ಟಾ ಅಭಿಮಾನಿಯೊಬ್ಬ ತನ್ನ ಮನೆಗೆ ಸಂಪೂರ್ಣ ಹಳದಿ ಬಣ್ಣವನ್ನೇ ಹೊಡೆಸಿದ್ದು, ಅದಕ್ಕೆ 'ಹೋಮ್ ಆಫ್ ಧೋನಿ ಫ್ಯಾನ್​'​ ಎಂದು ನಾಮಕರಣ ಮಾಡಿ ಎಲ್ಲೆಡೆ ಸುದ್ದಿಯಾಗಿದ್ದಾರೆ.

ಸುಮಾರು 1.5 ಲಕ್ಷ ರೂ. ಖರ್ಚು ಮಾಡಿರುವ ಗೋಪಿಕೃಷ್ಣನ್ ಎಂಬಾತ ತನ್ನ ಮನೆಯ ಗೋಡೆಗಳ ಮೇಲೆ ಧೋನಿಯ ಭಾವಚಿತ್ರಗಳನ್ನು ಬಿಡಿಸಿದ್ದಾರೆ. ಜೊತೆಗೆ ಸಿಎಸ್​ಕೆ ಲೋಗೋ ಮತ್ತು ವಿಸಲ್ ಪೋಡು ಎಂಬ ಟ್ಯಾಗ್ ಲೈನ್​ ಕೂಡ ಬರೆಸಿಕೊಂಡಿದ್ದಾರೆ.​​

ಗೋಪಿಕೃಷ್ಣನ್​ ತಮಿಳುನಾಡಿನ ಕಡಲೂರು ನಿವಾಸಿಯಾಗಿದ್ದಾರೆ. ಇವರು ಕೆಲವು ವರ್ಷಗಳಿಂದ ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಪ್ರತಿ ಸಿಎಸ್​ಕೆ ಪಂದ್ಯಗಳಿಗೂ ಹಾಜರಾಗುತ್ತಿದ್ದ ಅವರಿಗೆ ಕೋವಿಡ್​ 19 ಕಾರಣದಿಂದ ತಮ್ಮ ಸ್ವಂತ ಊರಿನಲ್ಲಿದ್ದಾರೆ. ಈ ವರ್ಷ ಕೋವಿಡ್​ ಕಾರಣದಿಂದ ಸಿಎಸ್​ಕೆ ಪಂದ್ಯಗಳನ್ನು ನೇರವಾಗಿ ಕ್ರೀಡಾಂಗಣದಲ್ಲಿ ನೋಡಲಾಗುತ್ತಿಲ್ಲ ಎಂಬ ಬೇಸರ ಕೂಡ ಅವರಿಗಿದೆ.

"ಧೋನಿ ಆಟವಾಡುವುದನ್ನು ನೇರವಾಗಿ ನೋಡಲು ಸಾಧ್ಯವಾಗದಿರುವುದಕ್ಕೆ ನಾನು ನಿರಾಸೆಗೊಂಡಿದ್ದೇನೆ. ಜೊತೆಗೆ ಧೋನಿ ಉತ್ತಮ ಪ್ರದರ್ಶನ ನೀಡದಿರುವುದಕ್ಕೆ ಸಾಕಷ್ಟು ಜನರು ಟೀಕಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ನಾನು ಅವರನ್ನು ಪ್ರೇರೇಪಿಸಲು ಬಯಸುತ್ತೇನೆ ಮತ್ತು ಅವರು ಗೆದ್ದರೂ ಅಥವಾ ಸೋಲನುಭವಿಸಿದರೂ ನಾನು ಯಾವಾಗಲೂ ಅವರನ್ನು ಬೆಂಬಲಿಸುತ್ತೇನೆ ಎಂದು” ಗೋಪಿಕೃಷ್ಣನ್ ಇಂಡಿಯಾ ಟುಡೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details