ಮೊಹಾಲಿ:ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಳಪೆ ಪ್ರದರ್ಶನ ನೀಡಿರುವುದು ಎಲ್ಲರಿಗೂ ತಿಳಿದ ವಿಚಾರ. ಇದರ ಮಧ್ಯೆ ಕೂಡ ತಂಡದ ಕ್ಯಾಪ್ಟನ್ ಹಾಗೂ ಒನ್ಡೌನ್ ಬ್ಯಾಟ್ಸ್ಮನ್ ಎಬಿಡಿ ಹೊಸದೊಂದು ದಾಖಲೆ ಬರೆದಿದ್ದಾರೆ.
ಐಪಿಎಲ್ನಲ್ಲಿ ಜೊತೆಯಾಗಿ ಅತಿ ಹೆಚ್ಚು ರನ್ ಗಳಿಸಿರುವ ದಾಖಲೆ ಇದೀಗ ಆರ್ಸಿಬಿ ಕ್ಯಾಪ್ಟನ್ ಕೊಹ್ಲಿ ಹಾಗೂ ಎಬಿಡಿ ವಿಲಿಯರ್ಸ್ ಪಾಲಾಗಿದೆ. ಈ ಇಬ್ಬರು ಪ್ಲೇಯರ್ಸ್ ಐಪಿಎಲ್ನಲ್ಲಿ ಜೊತೆಯಾಗಿ 2788 ರನ್ ಗಳಿಕೆ ಮಾಡಿದ್ದಾರೆ. ಇದಾದ ಬಳಿಕ ಕೊಹ್ಲಿ ಹಾಗೂ ಕ್ರಿಸ್ ಗೇಲ್ ಜೋಡಿ 2787 ರನ್ ಸಿಡಿಸಿದೆ. ಇತ್ತ ಸನ್ ರೈಸರ್ಸ್ ತಂಡದಲ್ಲಿದ್ದ ಧವನ್ ಹಾಗೂ ವಾರ್ನರ್ ಜೋಡಿ 2357 ರನ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ಲೇಯರ್ಸ್ ಆಗಿದ್ದ ಗೌತಮ್ ಗಂಭೀರ್ ಹಾಗೂ ರಾಬಿನ್ ಉತ್ತಪ್ಪ 1906 ರನ್ ಗಳಿಸಿದ್ದಾರೆ.