ಲಾಹೋರ್: 16 ವರ್ಷಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ದಾಖಲೆ ಬರೆದಿರುವ ನಸೀಮ್ ಶಾರನ್ನು ಅಂಡರ್ 19 ವಿಶ್ವಕಪ್ನಲ್ಲಿ ಆಡುವುದಕ್ಕೆ ಅವಕಾಶ ನೀಡಬಾರದು ಎಂದು ಪಾಕಿಸ್ತಾನ ತಂಡದ ಹಿರಿಯ ಕ್ರಿಕೆಟಿಗ ಮೊಹಮ್ಮದ್ ಹಫೀಜ್ ಪಿಸಿಬಿಗೆ ಮನವಿ ಮಾಡಿದ್ದಾರೆ.
ಈಗಾಗಲೆ ನಸೀಮ್ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ನಲ್ಲಿ ಪಾಲ್ಗೊಂಡು ಅವರ ಸಾಮರ್ಥ್ಯವನ್ನು ತೋರಿಸಿಕೊಟ್ಟಿದ್ದಾರೆ. ಉನ್ನತ ಮಟ್ಟದ ಕ್ರಿಕೆಟ್ ಆಡಿರುವ ಅವರನ್ನು ಮತ್ತೆ ಕಿರಿಯರ ತಂಡದ ಪರ ಆಡಲು ಅನುಮತಿ ನೀಡಬಾರದು. ಬದಲಾಗಿ ಅವರಿಗೆ ಕಠಿಣ ತರಬೇತಿ ನೀಡಿ ಉನ್ನತ ಮಟ್ಟದ ಕ್ರಿಕೆಟ್ನಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಮತ್ತಷ್ಟು ಅವಕಾಶಗಳನ್ನು ಕೊಡಬೇಕು ಎಂದು ಹಿರಿಯ ಆಲ್ರೌಂಡರ್ ತಿಳಿಸಿದ್ದಾರೆ.