ವಿಶಾಖಪಟ್ಟಣಂ:ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಬೆಂಗಳೂರಿನ ಹುಡುಗ ಮಯಾಂಕ್ ಅಗರವಾಲ್ ಬರೋಬ್ಬರಿ 215 ರನ್ ಸಿಡಿಸಿದ್ದರು. ಅವರ ಅದ್ಭುತ ಆಟಕ್ಕೆ ಎಲ್ಲೆಡೆಯಿಂದ ಪ್ರಶಂಸೆಗಳ ಸುರಿಮಳೆಗೈಯಲಾಗಿತ್ತು. ಆದರೆ ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ 7ರನ್ ಗಳಿಸಿದ ವಿಕೆಟ್ ಒಪ್ಪಿಸಿದ್ದಾರೆ. ಯುವ ಆಟಗಾರನ ಕ್ರಿಕೆಟಿಂಗ್ ಕೌಶಲದ ಬಗ್ಗೆ ಸೌರವ್ ಗಂಗೂಲಿ ಪ್ರತಿಕ್ರಿಯಿಸಿದ್ದಾರೆ.
ಮಯಾಂಕ್ ಅಗರವಾಲ್ ಆಡಿರುವ ಕೇವಲ ಒಂದೇ ಇನ್ನಿಂಗ್ಸ್ನಿಂದ ಅವರ ಸಾಮರ್ಥ್ಯ ಅಳಿಯಲು ಸಾಧ್ಯವಿಲ್ಲ. ಇನ್ನೂ ಕೆಲವು ಇನ್ನಿಂಗ್ಸ್ನಲ್ಲಿ ಅವರು ಬ್ಯಾಟ್ ಬೀಸಿದಾಗ ಮಾತ್ರ ನಿಜವಾದ ಸಾಮರ್ಥ್ಯ ಗೊತ್ತಾಗಲಿದೆ ಎಂದಿದ್ದಾರೆ.
ಕೇವಲ ಒಂದೇ ಪಂದ್ಯದಲ್ಲಿ ಶತಕ ಬಾರಿಸುತ್ತಿದ್ದಂತೆ ಆತ ಟೆಸ್ಟ್ ಕ್ರಿಕೆಟ್ ಆರಂಭಿಕನಾಗಬಹುದು ಎಂದು ಮಾತನಾಡುವುದು ಸರಿಯಲ್ಲ. ಮುಂದಿನ ಪಂದ್ಯಗಳಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿದಾಗ ಟೀಕೆಗಳೂ ಶುರುವಾಗುತ್ತವೆ ಎಂದರು.
ಯುವ ಕ್ರಿಕೆಟಿಗನ ಅಮೋಘ ಪ್ರದರ್ಶನ ಭಾರತ ತಂಡಕ್ಕೆ ಒಳ್ಳೆಯದೇ. ಆಸ್ಟ್ರೇಲಿಯಾ ನೆಲದಲ್ಲೂ ಮಯಾಂಕ್ ಉತ್ತಮವಾಗಿ ಬ್ಯಾಟ್ ಬೀಸಿದ್ದರು. ಆದರೆ ವಿಂಡೀಸ್ ಟೂರ್ನಿಯಲ್ಲಿ ಸ್ವಲ್ಪ ಸಮಸ್ಯೆ ಅನುಭವಿಸಿದ್ದರು. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧ ದ್ವಿಶತಕ ಸಿಡಿಸಿದ್ದು, ಮುಂದಿನ ಇನ್ನಿಂಗ್ಸ್ನಲ್ಲಿ ಅವರ ಸಾಮರ್ಥ್ಯ ಎಂಬುದು ಗೊತ್ತಾಗುತ್ತದೆ. ಇದು ರೋಹಿತ್ ಶರ್ಮಾಗೂ ಅನ್ವಯವಾಗುತ್ತದೆ ಎಂದು ಕಿವಿಮಾತು ಹೇಳಿದ್ರು.