ರಾಜ್ಕೋಟ್: ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಮನೀಷ್ ಪಾಂಡೆ ಓರ್ವ ಅದ್ಭುತ ಫೀಲ್ಡರ್ ಎಂಬುದು ಈಗಾಗಲೇ ಅನೇಕ ಸಲ ಸಾಬೀತಾಗಿದೆ. ಇಂದಿನ ಪಂದ್ಯದಲ್ಲಿ ಅದು ಮತ್ತೊಮ್ಮೆ ದೃಢಪಟ್ಟಿದೆ.
ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ 340 ರನ್ಗಳಿಕೆ ಮಾಡಿದ್ದು, ಗೆಲುವು ಸಾಧಿಸಬೇಕಾದ ಅನಿವಾರ್ಯತೆಯಲ್ಲಿದೆ. ಇದರ ಮಧ್ಯೆ ಮನೀಷ್ ಪಾಂಡೆ ಪಡೆದುಕೊಂಡಿರುವ ಕ್ಯಾಚ್ ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಆಸ್ಟ್ರೇಲಿಯಾದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಡೇವಿಡ್ ವಾರ್ನರ್ 15 ರನ್ಗಳಿಸಿದ್ದ ವೇಳೆ ಶಮಿ ಬೌಲ್ ಮಾಡಿದ್ದರು. ಈ ವೇಳೆ ವಾರ್ನರ್ ಬಾರಿಸಿದ ಚೆಂಡನ್ನು ಕವರ್ ಪಾಯಿಂಟ್ನಲ್ಲಿದ್ದ ಪಾಂಡೆ ಅದ್ಭುತವಾಗಿ ಹಿಡಿದಿದ್ದಾರೆ. ಸ್ಪೈಡರ್ ಮ್ಯಾನ್ ರೀತಿಯಲ್ಲಿ ಜಿಗಿದು ಒಂದೇ ಕೈನಲ್ಲಿ ಕ್ಯಾಚ್ ಮಾಡಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಮೊದಲ ಏಕದಿನ ಪಂದ್ಯದಲ್ಲಿ ರಿಷಭ್ ಪಂತ್ ಗಾಯಗೊಂಡು ತಂಡದಿಂದ ಹೊರಗುಳಿದಿದ್ದ ವೇಳೆ ಕ್ಷೇತ್ರರಕ್ಷಣೆ ಮಾಡಲು ಪಾಂಡೆ ಮೈದಾನಕ್ಕಿಳಿದಿದ್ದರು.