ಮೈಸೂರು: ಕರ್ನಾಟಕ ಪ್ರೀಮಿಯರ್ ಲೀಗ್‌ನ (ಕೆಪಿಎಲ್) 8ನೇ ಆವೃತ್ತಿಯ ಟಿ-20 ಕ್ರಿಕೆಟ್ ಪಂದ್ಯಾವಳಿಗಾಗಿ ಮಾನಸ ಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣ ಸಜ್ಜುಗೊಂಡಿದೆ.
ಕೆಪಿಎಲ್: ಇಂದು ಮೈಸೂರು ವಾರಿಯರ್ಸ್ vs ಶಿವಮೊಗ್ಗ ಲಯನ್ಸ್ ಫೈಟ್ - Shimogga warriors
ಶಿವಮೊಗ್ಗ ಲಯನ್ಸ್ ತಂಡವು ಕೆಪಿಎಲ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದು, ಮೈಸೂರು ವಾರಿಯರ್ಸ್ ಆಡಿದ ಮೊದಲ ಪಂದ್ಯ ಮಳೆಗೆ ಬಲಿಯಾಗಿದೆ. ಮೈಸೂರು ತಂಡ ತವರಿನಲ್ಲಿ ಗೆಲ್ಲುವ ತವಕದಲ್ಲಿದೆ.
ಈ ಕ್ರೀಡಾಂಗಣದಲ್ಲಿ ಇಂದು ಮೈಸೂರು ವಾರಿಯರ್ಸ್ ಮತ್ತು ಶಿವಮೊಗ್ಗ ಲಯನ್ಸ್ ತಂಡಗಳ ನಡುವೆ ಮಧ್ಯಾಹ್ನ 3ಕ್ಕೆ ಪಂದ್ಯ ಆರಂಭವಾಗಲಿದೆ. ಲೀಗ್‌ನ ಮೊದಲ ಚರಣದಲ್ಲಿ ಒಟ್ಟು 15 ಪಂದ್ಯಗಳು ನಡೆಯಲಿದ್ದು, ಆ. 25ರಿಂದ ಆ. 31ರವರೆಗೆ ಮೈಸೂರಿನ ಎಸ್‌ಡಿಎನ್‌ಆರ್ ಒಡೆಯರ್ ಕ್ರೀಡಾಂಗಣದಲ್ಲಿ ಫೈನಲ್ ಸೇರಿದಂತೆ ಒಟ್ಟು 10 ಪಂದ್ಯಗಳು ನಿಗದಿಯಾಗಿವೆ.
ಬೆಂಗಳೂರು ಬ್ಲಾಸ್ಟರ್ಸ್ ಮತ್ತು ಮೈಸೂರು ವಾರಿಯರ್ಸ್ ತಂಡಗಳು ಶುಕ್ರವಾರ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಆದರೆ, ಈ ಪಂದ್ಯ ಮಳೆಗೆ ಆಹುತಿಯಾಯಿತು. ಈ ಕ್ರೀಡಾಂಗಣದಲ್ಲಿ 7 ಸಾವಿರ ಆಸನಗಳಿದ್ದು, ಪಂದ್ಯಕ್ಕೆ ಯಾವುದೇ ತೊಂದರೆ ಆಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.