ನವದೆಹಲಿ :ಭಾರತ ತಂಡ ಇಂಗ್ಲೆಂಡ್ ವಿರುದ್ಧ 227 ರನ್ಗಳ ಬೃಹತ್ ಸೋಲು ಕಂಡರೂ ಜಮೈಕನ್ ಓಟಗಾರ ಯೋಹಾನ್ ಬ್ಯಾಕ್ ಭಾರತ ಮತ್ತು ನಾಯಕ ವಿರಾಟ್ ಕೊಹ್ಲಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟ್ವಿಟರ್ನಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿರುವ ಬ್ಲಾಕ್, ಕೊಹ್ಲಿ ಸೋಲಿಗೆ ಯಾವುದೇ ನೆಪಗಳನ್ನು ಹುಡುಕುವುದಿಲ್ಲ ಹಾಗೂ ಅವರು ತಮ್ಮ ಸೋಲಿಗೆ ಕಾರಣವಾಗಿರುವ ತಪ್ಪುಗಳನ್ನು ಒಪ್ಪಿಕೊಂಡಿದ್ದಾರೆ ಎಂದು ಟೀಂ ಇಂಡಿಯಾ ನಾಯಕನನ್ನು ಪ್ರಶಂಸಿಸಿದ್ದಾರೆ.
"ಟೀಂ ಇಂಡಿಯಾ ಬಗ್ಗೆ ನಾನು ನಿಜವಾಗಿಯೂ ಪ್ರೀತಿಸುವುದೇನೆಂದರೆ ಸೋತಾಗ ವಿರಾಟ್ ಕೊಹ್ಲಿ ಯಾವುದೇ ನೆಪ ಹುಡುಕುವುದಿಲ್ಲ. ಅವರ ನಾಯಕತ್ವವನ್ನು ನಾನು ನಿಜವಾಗಿಯೂ ಪ್ರೀತಿಸುತ್ತೇನೆ, ಸೋಲಿನ ಆಪಾದನೆಯನ್ನು ತಾವೇ ಸ್ವೀಕರಿಸಿದ್ದಾರೆ.
ಬೌಲರ್‌ಗಳು ಸರಿಯಾದ ಪ್ರದೇಶಗಳನ್ನು ಬೌಲಿಂಗ್ ಮಾಡಲಿಲ್ಲ ಮತ್ತು ಬ್ಯಾಟ್ಸ್‌ಮನ್‌ಗಳಲ್ಲಿ ಸ್ಥಿರತೆಯಿರಲಲ್ಲಿ ಎಂದ್ದಿದ್ದು, ತಾವೂ ಬೌನ್ಸ್ ಬ್ಯಾಕ್ ಆಗುವುದಾಗಿ ಅವರು ಹೇಳಿದ್ದಾರೆ. ಹಾಗಾಗಿ, ನಾನು ವಿರಾಟ್ ಕೊಹ್ಲಿ ಮತ್ತು ಅವರ ನಾಯಕತ್ವವನ್ನು ಇಷ್ಟಪಡುತ್ತೇನೆ "ಎಂದು ಜಮೈಕಾದ ಓಟಗಾರ ಹೇಳಿದರು.