ಬೆಂಗಳೂರು: 8ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ಗೆ ಮುಹೂರ್ತ ಫಿಕ್ಸ್ ಆಗಿದ್ದು, ಉದ್ಘಾಟನಾ ಪಂದ್ಯದಲ್ಲೇ ಬೆಂಗಳೂರು ಬುಲ್ಸ್ ವರ್ಸಸ್ ಬಿಜಾಪುರ್ ಬುಲ್ಸ್ ಸೆಣಸಾಡಲಿವೆ.
ಕೆಪಿಎಲ್ಗೆ ಮುಹೂರ್ತ ಫಿಕ್ಸ್; ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು V/S ಬಿಜಾಪುರ್ ಬುಲ್ಸ್! - ಬೆಂಗಳೂರು ವರ್ಸಸ್ ಬಿಜಾಪುರ್ ಬುಲ್ಸ್
ಪ್ರಸಕ್ತ ಸಾಲಿನ ಕರ್ನಾಟಕ ಪ್ರೀಮಿಯರ್ ಲೀಗ್ಗೆ ಮುಹೂರ್ತ ಫಿಕ್ಸ್ ಆಗಿದ್ದು, ಆಗಸ್ಟ್ 16ರಿಂದ ಆರಂಭಗೊಳ್ಳುವ ಹೊಡಿಬಡಿ ಆಟ ಸೆಪ್ಟಂಬರ್ 1ರಂದು ಮುಕ್ತಾಯಗೊಳ್ಳಲಿದೆ ಎಂದು ಕೆಎಸ್ಸಿಎ ವಕ್ತಾಯ ವಿನಯ್ ಮೃತ್ಯುಂಜಯ್ ತಿಳಿಸಿದ್ದಾರೆ.
ಆಗಸ್ಟ್ 16ರಂದು ಬೆಂಗಳೂರಿನಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದ್ದು, ತದನಂತರ ಆಗಸ್ಟ್ 22ರಿಂದ ಹುಬ್ಬಳ್ಳಿ ಹಾಗೂ ಆಗಸ್ಟ್ 27ರಂದು ಮೈಸೂರಿನಲ್ಲಿ ಪಂದ್ಯಗಳು ನಡೆಯಲಿವೆ. ಆಗಸ್ಟ್ 21 ಹಾಗೂ 26ರಂದು ತಂಡಗಳಿಗೆ ವಿಶ್ರಾಂತಿ ನೀಡಲಾಗಿದೆ. ಒಟ್ಟು 25 ಪಂದ್ಯಗಳು ನಡೆಯಲಿದ್ದು, ಉದ್ಘಾಟನಾ ಪಂದ್ಯಕ್ಕೆ ಟೀಂ ಇಂಡಿಯಾ ಮಾಜಿ ಪ್ಲೇಯರ್ ವೆಂಕಟೇಶ್ ಪ್ರಸಾದ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಜತೆಗೆ ಕೆಪಿಎಲ್ ಬ್ರ್ಯಾಂಡ್ ಅಂಬಾಸಿಡರ್ ರಾಗಿಣಿ ದ್ವಿವೇದಿ ಉಪಸ್ಥಿತರಿರಲಿದ್ದಾರೆ. ಸೆಪ್ಟೆಂಬರ್ 1ರಂದು ಮೈಸೂರಿನಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ಕಳೆದ ವರ್ಷ ಚಾಂಪಿಯನ್ ಆಗಿರುವ ಬಿಜಾಪುರ್ ಬುಲ್ಸ್ ಈ ಸಲ ಮೊದಲ ಪಂದ್ಯದಲ್ಲೇ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಪೈಪೋಟಿ ನಡೆಸಲಿದೆ ಎಂದು ಕೆಎಸ್ಸಿಎ ವಕ್ತಾರ ವಿನಯ್ ಮೃತ್ಯುಂಜಯ್ ತಿಳಿಸಿದ್ದಾರೆ.